ಬಳ್ಳಾರಿ

ಸತತ ಐದನೇ ಬಾರಿಗೆ ಶಶಿಲ್ ಜಿ ನಮೋಶಿ ಐತಿಹಾಸಿಕ ಗೆಲುವು ಬಿ. ಜೆ. ಪಿ ವಿಜಯೋತ್ಸವ

ಸತತ ಐದನೇ ಬಾರಿಗೆ ಶಶಿಲ್ ಜಿ ನಮೋಶಿ ಐತಿಹಾಸಿಕ ಗೆಲುವು  ಬಿ. ಜೆ. ಪಿ  ವಿಜಯೋತ್ಸವ


        ಬಳ್ಳಾರಿ. ಅ. 28 : ಈಶಾನ್ಯ  ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ   ಶಶೀಲ್ ಜಿ. ನಮೋಶಿ  ಸತತ ಐದನೇ ಬಾರಿಗೆ ಜಯಭೇರಿ ಬಾರಿಸಿರುವ ಹಿನ್ನೆಲೆಯಲ್ಲಿ, ಬಳ್ಳಾರಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ  ರಾಯಲ್ ವೃತ್ತದಲ್ಲಿ ವಿಜಯೋತ್ಸವವನ್ನು  ಆಚರಿಸಲಾಯಿತು.

         ಸತತ ಐದು ಬಾರಿ ದೊರೆತ ಈ ಗೆಲುವು ಶಿಕ್ಷಕರ ಬೆಂಬಲ ಮತ್ತು ವಿಶ್ವಾಸದ ಪ್ರತೀಕವಾಗಿದ್ದು, ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ಹಾಗೂ ಶಿಕ್ಷಕರ ಹಿತಾಸಕ್ತಿಗಾಗಿ ಮತ್ತಷ್ಟು ಶ್ರಮಿಸಲು ಹೊಸ ಉತ್ಸಾಹ ತುಂಬಲಿದೆ ಎಂದು ವಿಜಯೋತ್ಸವ ಸಂಭ್ರಮದಲ್ಲಿ ಭಾಗಿಯಾಗಿದ್ದ ಮಾಜಿನಗರ ಶಾಸಕ ಸೋಮಶೇಖರ ರೆಡ್ಡಿ ಅಭಿಪ್ರಾಯಪಟ್ಟರು .ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಪದಾಧಿಕಾರಿಗಳು ಮಂಡಲ ಪದಾಧಿಕಾರಿಗಳು, ಮುಖಂಡರು, ಹಾಗೂ ನೂರಾರು ಸಂಖ್ಯೆಯಲ್ಲಿ  ಕಾರ್ಯಕರ್ತರು  ಭಾಗವಹಿಸಿ, ಸಿಹಿ ಹಂಚಿ ಸಂಭ್ರಮಿಸಿದರು. 


ಸುದ್ದಿ ಓದಿ