ಬಳ್ಳಾರಿ

ಜನತಾ ಬಜಾರ್ ಅಧ್ಯಕ್ಷ ಸ್ಥಾನಕ್ಕೆ ಪಲ್ಲೆದ ಮೈತ್ರಿ ರಾಜೀನಾಮೆ ; ಮುಂದಿನ ಅಧ್ಯಕ್ಷ ವೆಂಕಟೇಶ್ ಹೆಗಡೆ

ಜನತಾ ಬಜಾರ್  ಅಧ್ಯಕ್ಷ  ಸ್ಥಾನಕ್ಕೆ ಪಲ್ಲೆದ ಮೈತ್ರಿ ರಾಜೀನಾಮೆ ; ಮುಂದಿನ ಅಧ್ಯಕ್ಷ ವೆಂಕಟೇಶ್ ಹೆಗಡೆ


ಬಳ್ಳಾರಿ. ಅ. 28 : ಜನತಾ ಬಜಾರ್ ( ಬಿಸಿಸಿ ಡಬ್ಲ್ಯೂ ಸ್ಟೋರ್ಸ) ಅಧ್ಯಕ್ಷ ಸ್ಥಾನಕ್ಕೆ ಹಾಲಿ ಅಧ್ಯಕ್ಷರಾದ ಪಲ್ಲೆದ ಮೈತ್ರಿ ರಾಜೀನಾಮೆಯನ್ನು ನೀಡಿದ್ದಾರೆ. ಇಂದು ಜನತಾ ಬಜಾರ್ ಪ್ರಧಾನ ವ್ಯವಸ್ಥಾಪಕರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿರುವ ಅವರು, ನನ್ನ ವೈಯಕ್ತಿಕ ಕಾರಣಗಳಿಂದ ಮತ್ತು  ಸ್ವ ಇಚ್ಛೆಯಿಂದ ಸಂಘದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯನ್ನು  ಸಲ್ಲಿಸುತ್ತಿದ್ದೇನೆ, ನನ್ನ  ರಾಜೀನಾಮೆಯನ್ನು ನಿಯಮಾನುಸಾರ ಅಂಗೀಕರಿಸಬೇಕೆಂದು ಜನತಾ ಬಜಾರ್ ಪ್ರಧಾನ ವ್ಯವಸ್ಥಾಪಕರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿ ಪಲ್ಲೆದ ಮೈತ್ರಿ ಕೊರಿದ್ದಾರೆ. ಕಳೆದ ಆರು ತಿಂಗಳ ಹಿಂದೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಪಲ್ಲೆದ ಮೈತ್ರಿ ಅಧ್ಯಕ್ಷ  ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದ್ದು ಒಪ್ಪಂದದಂತೆ ವೆಂಕಟೇಶ್ ಹೆಗಡೆ ಜನತಾ ಬಜಾರ್ ನ ಮುಂದಿನ ಅಧ್ಯಕ್ಷರಾಗುವ ನೀರೀಕ್ಷೆ ಇದೆ ಎನ್ನಲಾಗಿದೆ. ನೀರೀಕ್ಷೆಯಂತೆ ವೆಂಕಟೇಶ ಹೆಗಡೆ ಅಧ್ಯಕ್ಷರಾದಲ್ಲಿ ಮುಂದಿನ ಮಾರ್ಚ್‌ ವರೆಗೆ ಆ ಹುದ್ದೆಯಲ್ಲಿ  ಮುಂದುವರೆಯಲಿದ್ದಾರೆ. 


ಸುದ್ದಿ ಓದಿ