ತಾಳಿಕೋಟಿ

ಮಹರ್ಷಿ ವಾಲ್ಮೀಕಿ ಅವರ ಆದರ್ಶ ನಮಗೆ ದಾರೀದೀಪ

ಮಹರ್ಷಿ ವಾಲ್ಮೀಕಿ ಅವರ ಆದರ್ಶ ನಮಗೆ ದಾರೀದೀಪ


                ತಾಳಿಕೋಟಿ 26:  ತಮ್ಮ ಅಪಾರಜ್ಞಾನದಿಂದ ಮಹರ್ಷಿ ವಾಲ್ಮೀಕಿ ಅವರು ರಾಮಾಯಣ ಗ್ರಂಥವನ್ನು ರಚಿಸಿ ಇಡೀ ಮನಕುಲಕ್ಕೆ ಮಾರ್ಗದರ್ಶನದ ಅತ್ಯುತ್ತಮ ವ್ಯವಸ್ಥೆಯನ್ನು ಮಾಡಿಕೊಟ್ಟರು. ಅವರ ಬದುಕಿನ ಆದರ್ಶಗಳು ನಮಗೆಲ್ಲರಿಗೂ ದಾರೀದೀಪವಾಗಿವೆ ಎಂದು ಸರ್ವಜ್ಞ ವಿದ್ಯಾ ಪೀಠದ ಸಂಸ್ಥಾಪಕ ಅಧ್ಯಕ್ಷರಾದ ಸಿದ್ದನಗೌಡ ಮಂಗಳೂರು ಹೇಳಿದರು. ಸೋಮವಾರ ಪಟ್ಟಣದ ಪ್ರತಿಷ್ಠಿತ ಸರ್ವಜ್ಞ ವಿದ್ಯಾಪೀಠ ಇದರ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ವಾಲ್ಮೀಕಿ ಮಹರ್ಷಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಮಾತನಾಡಿದರು.

                 ಮಹರ್ಷಿ ವಾಲ್ಮೀಕಿಯವರನ್ನು ಸಾಂಪ್ರದಾಯಿಕವಾಗಿ ’ಆದಿಕವಿ’ಎಂದು ಕರೆಯಲಾಗುತ್ತದೆ. ಅವರ ಮೂಲ ಹೆಸರು ’ರತ್ನಾಕರ’ ಎಂದಾಗಿತ್ತು. ಅವರು ಅರಣ್ಯದಲ್ಲಿ ದರೋಡೆಕೋರರಾಗಿ ಜೀವನ ನಡೆಸುತ್ತಿದ್ದರು. ಆದರೆ ನಂತರ ಅವರಲ್ಲಿ ಆಳವಾದ ಆಧ್ಯಾತ್ಮಿಕ ಪರಿವರ್ತನೆಯುಂಟಾಯಿತು. ನಾರದ ಮಹರ್ಷಿಗಳೊಂದಿಗಿನ ಭೇಟಿಯು ಅವರ ಜೀವನದಲ್ಲಿ ಒಂದು ಮಹತ್ವದ ತಿರುವು ನೀಡಿತು. ಇದು ಅವರನ್ನು ಆತ್ಮಾವಲೋಕನ, ಭಕ್ತಿ ಮತ್ತು ತಪಸ್ಸಿನ ಮಾರ್ಗದತ್ತ ಕೊಂಡೊಯ್ದಿತು ಎಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಗುರುಗಳಾದ ಸಂತೋಷ ಪವಾರ, ಶ್ರೀರಾಜು ಜವಳಗೇರಿ, ದೈಹಿಕ ಶಿಕ್ಷಕರಾದ ಬಸವರಾಜ ಚಳಗಿ,ಶಾಂತಗೌಡ ಬಿರಾದಾರ, ಮತ್ತು ಸರ್ವ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 


ಸುದ್ದಿ ಓದಿ