ವಾಲ್ಮೀಕಿ ಪುತ್ತಳಿಗೆ ವಿ ದೊಡ್ಡಕೇಶವ ರೆಡ್ಡಿ ಮಾಲಾರೆ್ಣ
ಬಳ್ಳಾರಿ 26: ಮಹರ್ಷಿ ಶ್ರೀ ವಾಲ್ಮೀಕಿ ಜಯಂತಿ ಅಂಗವಾಗಿ ನಗರದ ಎಸ್‌ಪಿ ಸರ್ಕಲ್ ನಲ್ಲಿರುವ ವಾಲ್ಮೀಕಿ ಪುತ್ತಳಿಗೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಹಾಗೂ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷರಾದ ಕೂರ್ಲಗುಂದಿ ವಿ ದೊಡ್ಡ ಕೇಶವ ರೆಡ್ಡಿ ಯವರು ಮಾಲಾರೆ್ಣ ಮಾಡಿದರು. ಈ ಸಂದರ್ಭದಲ್ಲಿ ಕೇಶವ ರೆಡ್ಡಿ ಮಾತನಾಡಿ ಮಹರ್ಷಿ ವಾಲ್ಮೀಕಿ ಅವರು ಬುಡಕಟ್ಟು ಜನಾಂಗದಲ್ಲಿ ಹುಟ್ಟಿ ರಾಮಾಯಣ ರಚಿಸುವ ಮೂಲಕ ಇಡೀ ಪ್ರಪಂಚಕ್ಕೆ ಮನೆ ಮಾತಾದರು ಎಂದು ಅಭಿಪ್ರಾಯ ಪಟ್ಟರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಈ ಮಾನಯ್ಯ, ಮಾಜಿ ಮಹಾನಗರ ಪಾಲಿಕೆ ಸದಸ್ಯ ಬುಜ್ಜಿ ಸೇರಿದಂತೆ ಇತರರಿದ್ದರು.