ಬಳ್ಳಾರಿ

ಸಾಫ್ಟ್‌ ವೇರ್ ಉದ್ಯಮಕ್ಕೆ ಮಾರಕವಾಗಲಿರುವ ಎ ಐ ತಂತ್ರಜ್ಞಾನ : ಬಸವರಾಜ ರಾಯರೆಡ್ಡಿ

ಸಾಫ್ಟ್‌ ವೇರ್ ಉದ್ಯಮಕ್ಕೆ ಮಾರಕವಾಗಲಿರುವ ಎ ಐ ತಂತ್ರಜ್ಞಾನ : ಬಸವರಾಜ  ರಾಯರೆಡ್ಡಿ

 ಬಳ್ಳಾರಿ 24 ( ಕಿಷ್ಕಿಂದ  ವಿ. ವಿ) : ಮುಂದಿನ ದಿನಗಳಲ್ಲಿ ಎಐ ತಂತ್ರಜ್ಞಾನ ಸಾಫ್ಟ್‌ ವೇರ್ ಉದ್ಯಮಕ್ಕೆ ಮಾರಕವಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ಅಭಿಪ್ರಾಯ ಪಟ್ಟರು. ಅವರು ಜಿಲ್ಲೆಯ ಸಿರುಗುಪ್ಪ ತಾಲೂಕಿನ ಮೌಂಟ್ ವಿವ್ ಪ್ರದೇಶದಲ್ಲಿರುವ ಕಿಸ್ಕಿಂದ  ವಿಶ್ವವಿದ್ಯಾಲಯದ ಎರಡನೇ ಘಟಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿ, ಶಿಕ್ಷಣ ಎಂಬುದು ನಿಂತ ನೀರಾಗಬಾರದು ಮತ್ತು ಕೇವಲ ಸರ್ಕಾರಿ ಹುದ್ದೆಗೆ ಮಾತ್ರ ಸೀಮಿತವಾಗಬಾರದು , ಶಿಕ್ಷಣ ಪ್ರತಿಯೊಬ್ಬರಿಗೂ ಉನ್ನತವಾದ ಹೊಸ ಅವಕಾಶಗಳನ್ನು ಸೃಷ್ಟಿಸುವ ವ್ಯವಸ್ಥೆಯಾಗಬೇಕು, ಶಿಕ್ಷಣದಲ್ಲಿ ಭಾಷೆಯ ತೊಡಕಾಗಬಾರದು ಕೇವಲ ಇಂಗ್ಲೀಷಿನಿಂದ ಮಾತ್ರ ಉನ್ನತವಾದ ಹುದ್ದೆ ಸಾಧ್ಯ ಎನ್ನುವುದು ಭ್ರಮೆಯಾಗಿದೆ ಚೀನಾ ಜಪಾನ್ ಉತ್ತರ ಕೋರಿಯಾ ಸೇರಿದಂತೆ ಹಲವಾರು ಅಭಿವೃದ್ಧಿ ಶೀಲಾ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ತಮ್ಮದೇ ಭಾಷೆಯಲ್ಲಿ ಶಿಕ್ಷಣ ಮತ್ತು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿಕೊಂಡಿವೆ ಕಾರಣ ಇಂಗ್ಲಿಷ್ ವ್ಯಾಮೋಹ ಅಷ್ಟೊಂದು ಒಳ್ಳೆಯದಲ್ಲ ಎಂದರು. ದೇಶದಲ್ಲಿ ಇರುವ ವಿದೇಶಿ ವಿದ್ಯಾರ್ಥಿಗಳು 40ಅ ರಷ್ಟು ಬೆಂಗಳೂರಿನಲ್ಲಿ ತಮ್ಮ ಶಿಕ್ಷಣವನ್ನು ಪಡೆಯುತ್ತಿದ್ದಾರೆ ಬೆಂಗಳೂರು ದೇಶದ ಅತಿ ದೊಡ್ಡ ಶಿಕ್ಷಣದ ಹಬ್ಬ ಎಂದರೂ ತಪ್ಪಾಗಲಿಕ್ಕಿಲ್ಲ, ದೇಶಕ್ಕೆ ಸ್ವತಂತ್ರ ಬಂದಾಗ ಶೇಕಡಾ 18ರಷ್ಟಿದ್ದ ಶೈಕ್ಷಣಿಕ ಪ್ರಗತಿ ಇಂದು ಶೇಕಡಾ 80ಕ್ಕೆ ಏರಿದೆ ಇದಕ್ಕೆ ಮುಖ್ಯ ಕಾರಣ ದೇಶದ ಮೊದಲ ಪ್ರಧಾನಿ ನೆಹರು ಇಂದಿರಾಗಾಂಧಿ ಮನಮೋಹನ್ ಸಿಂಗ್ ಅವರ ಯೋಜನೆಗಳಾಗಿವೆ ಅದೇ ರೀತಿಯಲ್ಲಿ ರಾಜ್ಯದಲ್ಲಿ ಸಿದ್ದರಾಮಯ್ಯನವರು ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚಿನ ಅನುದಾನವನ್ನು ನೀಡಿದ್ದರು ಈಗ ಡಿಕೆ ಶಿವಕುಮಾರ್ ಸಹ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ ಯಾವುದೇ ವಿಶ್ವವಿದ್ಯಾಲಯದಲ್ಲಿ ಅನುದಾನದ ಕೊರತೆ ಇಲ್ಲ ಮುಂದಿನ ದಿನಗಳಲ್ಲಿ  ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿರುವ ಎಲ್ಲಾ ಖಾಲಿ ಹುದ್ದೆಗಳನ್ನು ತುಂಬಲಾಗುವುದು ಜೊತೆಗೆ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಕ್ಕೆ ವಿ  ಸಿ ಗಳನ್ನು ಸಹ ನೇಮಕ ಮಾಡಲಾಗುವುದು ಎಂದು ತಿಳಿಸಿದರು . ಇಂದಿನ ಸರ್ಕಾರದಲ್ಲಿ ನನ್ನ ಆಯ್ಕೆ ಹಣಕಾಸು ಇಲಾಖೆ ಆಗಿತ್ತು ಡಿ ಕೆ ಶಿವಕುಮಾರ್ ಅವರ ಶೈಕ್ಷಣಿಕ ಪ್ರಗತಿಯ ಉದ್ದೇಶದಿಂದ ನನ್ನನ್ನು ಉನ್ನತ ಶಿಕ್ಷಣ ಸಚಿವರನ್ನಾಗಿ ಮಾಡಿದ್ದಾರೆ ನಮ್ಮ ಸರ್ಕಾರಕ್ಕೆ ಸಮಯದ ಅಭಾವ ಬಹಳ ಕಡಿಮೆ ಇದೆ ಅಷ್ಟರಲ್ಲಿ ಆ ಹುದ್ದೆಗೆ ನಾನು ನ್ಯಾಯ ದೊರಕಿಸಿ ಕೊಡುವ ಕೆಲಸವನ್ನು ಮಾಡುತ್ತೇನೆ ಎಂದ ರಾಯರೆಡ್ಡಿ. ಇಂತಹ ಶೈಕ್ಷಣಿಕ ಪ್ರಗತಿಯ ಕಾಳಜಿ ಉಳ್ಳ ನಾಯಕರಿಂದಾಗಿ 1950ರಲ್ಲಿ ಕೇವಲ 20-25 ಇದ್ದ ವಿಶ್ವವಿದ್ಯಾಲಯಗಳು ಇಂದು ದೇಶದಲ್ಲಿ 600ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಿವೆ ಜೊತೆಗೆ ಖಾಸಗಿ ವಿಶ್ವವಿದ್ಯಾಲಯಗಳು ಸಹ ಕಾರ್ಯನಿರ್ವಹಿಸುತ್ತಿವೆ ಇದರಿಂದಾಗಿ ದೇಶ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮವಾದ ಪ್ರಗತಿಯನ್ನು ಸಾಧಿಸಿದೆ, ಜೊತೆಗೆ ರಾಜ್ಯದಲ್ಲಿರುವ ಮಠಮಾನ್ಯಗಳು ಸಹ ಶಿಕ್ಷಣಕ್ಕೆ ಅತಿ ಹೆಚ್ಚಿನ ಒತ್ತುಕೊಟ್ಟು ಮಕ್ಕಳಿಗೆ ವಿದ್ಯಾದಾನ ಮಾಡುವ ಮೂಲಕ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ ಎಂದು ಸ್ಮರಿಸಿದರು. ಕಿಸ್ಕಿಂದ ವಿಶ್ವವಿದ್ಯಾಲಯವು  ಕಲ್ಯಾಣ ಕರ್ನಾಟಕದ ಗ್ಲೋಬಲ್ ವಿಶ್ವವಿದ್ಯಾಲಯ ವಾಗಲಿದೆ ಎಂದು ಅಭಿಪ್ರಾಯಪಟ್ಟ ರಾಯರೆಡ್ಡಿ ಅವರು ವಿಶ್ವ ದರ್ಜೆಯ ಗುಣಮಟ್ಟವನ್ನು ಹೊಂದಿದ ಶಿಕ್ಷಣ ಮತ್ತು ಸೌಲಭ್ಯಗಳನ್ನು ನೀಡುತ್ತಿದೆ ಶಿಕ್ಷಣ ಕ್ಷೇತ್ರಕ್ಕೆ ಜಾಗೀರ್ದಾರ್ ಅವರ ಕುಟುಂಬ ಅತಿ ಹೆಚ್ಚು ಪ್ರಾಶಸ್ತ್ರವನ್ನು ನೀಡುತ್ತಿದೆ ವಿದ್ಯಾರ್ಥಿಗಳು ಇಲ್ಲಿನ ಅನುಕೂಲಗಳನ್ನು ಪಡೆದುಕೊಂಡು ಉದ್ಯೋಗ ಕ್ಷೇತ್ರದಲ್ಲಿ ಸ್ಪರ್ಧೆಯನ್ನು ಒಡ್ಡುವಂತೆ ಆಗಬೇಕು ಎಂದರು. ಕಾರ್ಯಕ್ರಮದಲ್ಲಿ ಗೀರೀಶ್ ರಾಮಣ್ಣ ಅವರಿಗೆ ಗೌರವ ಡಾಕ್ಟರೇಟ್ ಪದವಿ ಎಂದು ಪ್ರಧಾನ ಮಾಡಲಾಯಿತು ಮತ್ತು  ಕಿಷ್ಕಿಂದಾ ವಿಶ್ವವಿದ್ಯಾಲಯದ  155 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು ಮತ್ತು ಬಿಸಿಎ, ಎಂಬಿಎ, ಎಂಸಿಎ ಮತ್ತು ಎಂಟೆಕ್ ವಿಭಾಗಗಳಲ್ಲಿ ಎಂಟು ವಿದ್ಯಾರ್ಥಿಗಳಿಗೆ ಚಿನ್ನ, ಬೆಳ್ಳಿ ಪದಕಗಳನ್ನು ನೀಡಿ  ಗೌರವಿಸಲಾಯಿತು. ಈ ಗಟಿಕೋತ್ಸವ ಕಾರ್ಯಕ್ರಮದಲ್ಲಿ ಇಸ್ರೋದ ಪ್ರಾಜೆಕ್ಟ್‌ ಆಫೀಸರ್ ರೂಪ, ಮಾಜಿ ಸಚಿವ ಬಿ ಆರ್ ಯಾವಗಲ್ ಭಾಗವಹಿಸಿ ಮಾತನಾಡಿದರು. ಈ ಘಟಿಕೋತ್ಸವ ಕಾರ್ಯಕ್ರಮದಲ್ಲಿ  ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಎಸ್‌.ಬಿ. ಅಶೋಕ್ ಭೂಪಾಲ್, ಸಹ ಕುಲಾಧಿಪತಿ ವೈ.ಜೆ. ಪೃಥ್ವಿರಾಜ್ ಭೂಪಾಲ್, ಕುಲಪತಿ ಡಾ. ಟಿ.ಎನ್‌. ನಾಗಭೂಷಣ, ಕುಲಸಚಿವ ಡಾ. ಯು. ಈರಣ್ಣ, ಮೌಲ್ಯಮಾಪನ ಕುಲಸಚಿವ ಡಾ. ರಾಜು ಜಾಡರ, ಹಣಕಾಸು ಅಧಿಕಾರಿ ನಮ್ರತಾ ಬಿ. ಯಾವಗಲ್ ಸೇರಿದಂತೆ ವಿಶ್ವವಿದ್ಯಾಲಯದ ಅಧಿಕಾರಿಗಳು ಹಾಗೂ ಟಿ.ಇ.ಹೆಚ್‌.ಆರಿ​‍್ಡ. ಟ್ರಸ್ಟ್ನ ಪದಾಧಿಕಾರಿಗಳು ಸೇರಿದಂತೆ ವಿದ್ಯಾರ್ಥಿಗಳು ಪೋಷಕರು  ಉಪಸ್ಥಿತರಿದ್ದರು. 


ಸುದ್ದಿ ಓದಿ