ತಾಳಿಕೋಟಿ

ಎಸ್ ಎಸ್ ವಿದ್ಯಾಸಂಸ್ಥೆಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ

ಎಸ್ ಎಸ್ ವಿದ್ಯಾಸಂಸ್ಥೆಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ

 

              ತಾಳಿಕೋಟಿ 26: ಪಟ್ಟಣದ ಪ್ರತಿಷ್ಠಿತ ಎಸ್ ಎಸ್ ವಿದ್ಯಾಸಂಸ್ಥೆಯಲ್ಲಿ ಮಹರ್ಷಿ ವಾಲ್ಮೀಕಿಯವರ ಜಯಂತಿಯನ್ನು ಅರ್ಥಪೂರ್ಣವಾಗಿ ಸೋಮವಾರ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುನ್ನ ಮಹರ್ಷಿ ವಾಲ್ಮೀಕಿ ಅವರ ಭಾವ ಚಿತ್ರಕ್ಕೆ ಸಂಸ್ಥೆಯ ಸಂಸ್ಥಾಪಕರಾದ ಎಚ್‌.ಎಸ್‌.ಪಾಟೀಲರು ಪೂಜೆ ಸಲ್ಲಿಸಿದರು.


               ಈ ಸಂದರ್ಭದಲ್ಲಿ ಅವರು ಮಾತನಾಡಿ ಮಹರ್ಷಿ ವಾಲ್ಮೀಕಿ ಅವರು ವಿಶ್ವ ಶ್ರೇಷ್ಠ ಗ್ರಂಥವಾದ ರಾಮಾಯಣವನ್ನು ರಚಿಸಿ ಮಾನವ ಕುಲಕ್ಕೆ ಉಪಕಾರವನ್ನು ಮಾಡಿದ್ದಾರೆ. ಇವತ್ತು ನಾವು ಅವರ ಜೀವನದ ಆದರ್ಶಗಳನ್ನು ತಿಳಿದುಕೊಂಡು ಅವುಗಳ ಪ್ರಾಮಾಣಿಕ ಅನುಸರಣೆಯನ್ನು ಮಾಡುವ ಅಗತ್ಯವಿದೆ ಎಂದರು.


         ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಸಚಿನ.ಎಚ್‌.ಪಾಟೀಲ, ಬಿಪಿಎಡ್ ಕಾಲೇಜಿನ ಪ್ರಚಾರ್ಯ ಶಿವಕುಮಾರನಾಯಕ, ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ.ಎಚ್‌.ಬಿ.ನಡುವಿನಕೇರಿ, ಪ ಪೂ ಕಾಲೇಜಿನ ಎಸ್‌.ಬಿ.ಮಂಗ್ಯಾಳ. ಪ್ರೌಢಶಾಲೆಯ ಮುಖ್ಯಸ್ಥ ಅಶೋಕ.ಕಟ್ಟಿ, ಬಿ.ಆಯ್‌.ಹಿರೇಹೊಳಿ, ಎಸ್‌.ಸಿ.ಗುಡಗುಂಟಿ,  ಎಚ್‌. ಬಿ.ಪಾಟೀಲ, ಎಮ್‌.ಎಸ್‌.ರಾಯಗೊಂಡ,  ಶರಣು ಬಿರಾದಾರ ಹಾಗೂ ಎಸ್‌.ಎಸ್‌.ವಿದ್ಯಾಸಂಸ್ಥೆ ಯ ಸಮಸ್ತ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ