ಕೈಗಾದಲ್ಲಿ ವಿಚಕ್ಷಣಾ ಜಾಗೃತಿ ಸಪ್ತಾಹಕ್ಕೆ ಚಾಲನೆ: ಭ್ರಷ್ಟಾಚಾರ ಮುಕ್ತ ಸಮಾಜಕ್ಕಾಗಿ ಜನಜಾಗೃತಿ
ಕಾರವಾರ 26: ಕೈಗಾ ಟೌನ್ಶಿಪ್ನಲ್ಲಿ ’ವಿಚಕ್ಷಣಾ ಜಾಗೃತಿ ಸಪ್ತಾಹ’ಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗಿದ್ದು, ಇದರ ಅಂಗವಾಗಿ ಕೈಗಾ ಆಸುಪಾಸಿನ ಗ್ರಾಮಗಳಲ್ಲಿ ಸೋಮವಾರ ಭ್ರಷ್ಟಾಚಾರ ವಿರೋಧಿ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.ಸಪ್ತಾಹದ ಅಂಗವಾಗಿ ಗ್ರಾಮಸ್ಥರಿಗೆ ಕರಪತ್ರಗಳನ್ನು ಹಂಚುವ ಮೂಲಕ ಭ್ರಷ್ಟಾಚಾರದ ವಿರುದ್ಧ ಹೇಗೆ ಹೋರಾಡುವುದು ಮತ್ತು ಅದರ ವಿರುದ್ಧ ಎಲ್ಲಿ ದೂರು ದಾಖಲಿಸಬೇಕು ಎಂಬುದರ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.
ವಿಶೇಷವಾಗಿ, ಸೆಂಟ್ರಲ್ ವಿಜಿಲೆನ್ಸ್ ಕಮಿಷನ್ ಗೆ ಪಿಡಿಪಿ ಮುಖಾಂತರ ಆನ್ಲೈನ್ ಮೂಲಕ ಸುಲಭವಾಗಿ ದೂರುಗಳನ್ನು ನೀಡುವುದರ ಬಗ್ಗೆ ವಿವರವಾದ ಮಾಹಿತಿ ನೀಡಲಾಯಿತು.ಈ ಜಾಗೃತಿ ಕಾರ್ಯಕ್ರಮದಲ್ಲಿ ಸ್ಟೇಷನ್ ಡೈರೆಕ್ಟರ್ ಸುಪ್ರದ್ ದಾಸ್, ವಿಜಿಲೆನ್ಸ್ ಆಫೀಸರ್ ಮುಕೇಶ್ ಸೇರಿದಂತೆ ಇತರ ಗಣ್ಯರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು. ಸ್ಥಳೀಯ ಗ್ರಾಮಸ್ಥರಿಂದ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರೆಯಿತು.