ಫೋಲಿಯೊ ನಿರ್ಮೂಲನೆ ಜಾಗೃತಿಗಾಗಿ ರೋಟರಿ ಕ್ಲಬ್ನಿಂದ ಕಾರ್ ರಾ್ಯಲಿ
ಲೋಕದರ್ಶನ ವರದಿ
ದಾಂಡೇಲಿ 26 : ದಾಂಡೇಲಿಯ ರೋಟರಿ ಕ್ಲಬ್ ವತಿಯಿಂದ ಫೋಲಿಯೋ ನಿರ್ಮೂಲನಾ ಅಭಿಯಾನದ ಅಂಗವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕಾರ್ ರಾ್ಯಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ ರಾ್ಯಲಿಯನ್ನು ರೋಟರಿ ಕ್ಲಬ್ ಅಧ್ಯಕ್ಷ ಮಿಥುನ ನಾಯಕ ಚಾಲನೆ ನೀಡಿದರು. ಕಾರ್ ರಾ್ಯಲಿಯು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಫೋಲಿಯೊ ಮುಕ್ತ ಭಾರತ ನಮ್ಮ ಗುರಿ ಎನ್ನುವ ಘೋಷಣೆಯೊಂದಿಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ಡಾ. ಜ್ಙಾನದೀಪ್ ಗಾಂವಕರ್, ಖಚಾಂಚಿ ಅಭಿಷೇಕ್ ಕನ್ಯಾಡಿ ರೋಟರಿ ಪ್ರಮುಖರಾದ ಲಿಯೊ ಪಿಂಟೋ, ರಾಹುಲ್ ಭಾವಾಜಿ , ಎ.ಜಿ. ಬಿರಾದಾರ, ಆರ್.ಪಿ. ನಾಯ್ಕ, ರವಿಕುಮಾರ ನಾಯಕ, ಡಾ. ಅನುಪ ಮಾಡದೋಳಕರ್, ಮತ್ತಿತರರು ಉಪಸ್ಥಿತರಿದ್ದರು.