ಕಾರವಾರ

ಶಿಸ್ತು, ದೇಶಭಕ್ತಿಯೊಂದಿಗೆ ಆರ್‌ಎಸ್‌ಎಸ್ ಪಥಸಂಚಲನ

ಶಿಸ್ತು, ದೇಶಭಕ್ತಿಯೊಂದಿಗೆ ಆರ್‌ಎಸ್‌ಎಸ್ ಪಥಸಂಚಲನ

ಲೋಕದರ್ಶನ ವರದಿ 

     ದಾಂಡೇಲಿ ಅ  26  : ದಾಂಡೇಲಿಯ  ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾಖೆವತಿಯಿಂದ ವಿಜಯದಶಮಿ ಪ್ರಯುಕ್ತ ಸಂಘಟಿಸಿದ ಪಥಸಂಚಲನವು ರವಿವಾರ ನಗರದ ಪ್ರಮುಖ ಬೀದಿಗಳಲ್ಲಿ ಕೈಯಲಲಿ ಭಗವಾ ಧ್ವಜ ಹಿಡಿದು ಸಂಚರಿಸಿತು. ಅತ್ಯಂತ ಶಿಸ್ತು ಬದ್ದವಾಗಿ ನಡೆದ ಈ ಪಥಸಂಚಲನ ರವಿವಾರ ಸಂಜೆ ಸುಭಾಸನಗರದ ಮೈದಾನದಿಂದ ಪ್ರಾರಂಭವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಸೇವಕರು ಗಣವೇಷಧಾರಿಗಳಾಗಿ  ಶಿಸ್ತುಬದ್ದವಾಗಿ ಎಕತೆ ಹಾಗೂ ದೇಶ ಭಕ್ತಿಯ ಭಾವನೆ ಮೂಡಿಸುತ್ತಾ ಹೆಜ್ಜೆ ಹಾಕಿದರು. ಪಥಸಂಚಲನದ ಉದ್ದಕ್ಕೂ ಭಾರತ ಮಾತಾಕಿ ಜೈ ಘೋಷಣೆ ಮೊಳಗಿದವು ಕೊನೆಯಲ್ಲಿ ಸುಭಾಸ ನಗರದ ಮೈದಾನದಲ್ಲಿ ಪಥ ಸಂಚಲನವು ಕೊನೆಗೊಂಡಿತು. ಕಾರ್ಯಕ್ರಮದಲ್ಲಿ ಸಂಘದ ಹಿರಿಯ  ಪದಾಧಿಕಾರಿಗಳು ಹಾಗೂ ಸಂಘದ ಕಾರ್ಯಕರ್ತರು ಸಾರ್ವಜನಿಕರು ಉಸ್ಥಿತರಿದ್ದರು. 


ಸುದ್ದಿ ಓದಿ