ಬೆಳಗಾವಿ

ಮಾನವಕುಲಕ್ಕೆ ರಾಮಾಯಣವೇ ಆದರ್ಶ ಮಾರ್ಗದರ್ಶಿ: ಶಾಸಕ ವಿಶ್ವಾಸ ವೈದ್ಯ

ಮಾನವಕುಲಕ್ಕೆ ರಾಮಾಯಣವೇ ಆದರ್ಶ ಮಾರ್ಗದರ್ಶಿ: ಶಾಸಕ ವಿಶ್ವಾಸ ವೈದ್ಯ


        ಸವದತ್ತಿ : ಮಹಾತ್ಮ ಮಹರ್ಷಿ ವಾಲ್ಮೀಕಿ ಅವರು ರಚಿಸಿದ ಪವಿತ್ರ ರಾಮಾಯಣ ಮಹಾಗ್ರಂಥವು ಇಡೀ ಮಾನವಕುಲಕ್ಕೆ ಧರ್ಮ, ನೈತಿಕತೆ ಮತ್ತು ಆದರ್ಶ ಜೀವನದ ಮಾರ್ಗವನ್ನು ತೋರಿಸಿಕೊಟ್ಟಿದೆ ಎಂದು ಶಾಸಕ ವಿಶ್ವಾಸ ವೈದ್ಯ ಅಭಿಪ್ರಾಯಪಟ್ಟರು.

            ಇಲ್ಲಿನ ರಾಮಾಪೂರಸೈಟ್ನಲ್ಲಿರುವ ಶ್ರೀ ಮಹರ್ಷಿ ವಾಲ್ಮೀಕಿ ಸಭಾಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ ಹಾಗೂ ನಗರಸಭೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

         ಮಹಾಕಾವ್ಯ ರಾಮಾಯಣವು ಕೇವಲ ಒಂದು ಧಾರ್ಮಿಕ ಗ್ರಂಥವಲ್ಲ. ಅದು ತಂದೆ-ತಾಯಿ, ಅಣ್ಣ-ತಮ್ಮಂದಿರು ಹಾಗೂ ಸಮಾಜದ ನಡುವಿನ ಕರ್ತವ್ಯ ಮತ್ತು ಬಾಂಧವ್ಯ ಹೇಗಿರಬೇಕು ಎಂಬುದನ್ನು ತಿಳಿಸಿಕೊಡುವ ಜೀವಂತ ಮಾರ್ಗದರ್ಶಿಯಾಗಿದೆ. ತಮ್ಮ ತಪಸ್ಸು ಮತ್ತು ಶ್ರೇಷ್ಠ ಚಿಂತನೆಗಳಿಂದ ವಾಲ್ಮೀಕಿಯವರು ಜಗತ್ತಿಗೆ ಅಮೂಲ್ಯ ವಿಚಾರಗಳನ್ನು ಧಾರೆ ಎರೆದಿದ್ದಾರೆ.

           ವಾಲ್ಮೀಕಿ ಸಮುದಾಯದ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೆ ಸರ್ಕಾರ ಹಾಗೂ ಶಾಸಕನಾಗಿ ನಾನು ಸದಾ ಬೆಂಬಲವಾಗಿ ನಿಲ್ಲುತ್ತೇನೆ. ಯುವಜನತೆ ಮತ್ತು ವಿದ್ಯಾರ್ಥಿಗಳು ಮಹರ್ಷಿ ವಾಲ್ಮೀಕಿ ಅವರ ತತ್ತ್ವಗಳಿಂದ ಪ್ರೇರಣೆ ಪಡೆದು, ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು.ಎಂದರು.

             ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ ಮಾತನಾಡಿದ ಅವರು, ರಾಮಾಯಣವು ಕೇವಲ ಧಾರ್ಮಿಕ ಗ್ರಂಥವಾಗಿರದೆ, ವ್ಯಕ್ತಿ ವಿಕಸನ ಮತ್ತು ಆದರ್ಶ ಸಮಾಜ ನಿರ್ಮಾಣಕ್ಕೆ ಅಗತ್ಯವಿರುವ ಸತ್ಯ, ತ್ಯಾಗ ಹಾಗೂ ಕರ್ತವ್ಯ ಪ್ರಜ್ಞೆಯನ್ನು ಬೋಧಿಸುತ್ತದೆ. ವಾಲ್ಮೀಕಿ ರಾಮಾಯಣದ ಪ್ರತಿಯೊಂದು ಸನ್ನಿವೇಶ ಮತ್ತು ಪಾತ್ರಗಳು ನಮಗೆ ಸನ್ಮಾರ್ಗದಲ್ಲಿ ನಡೆಯಲು ಸ್ಪೂರ್ತಿಯಾಗಿವೆ.

             ಇಂದಿನ ಯುವ ಪೀಳಿಗೆಗೆ ಈ ಮೌಲ್ಯಗಳನ್ನು ತಲುಪಿಸುವ ಅಗತ್ಯವಿದೆ" ಎಂದು ಹೇಳಿದರು.ಕಾರ್ಯಕ್ರಮದ ಆರಂಭದಲ್ಲಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಶಾಸಕ ವಿಶ್ವಾಸ ವೈದ್ಯ, ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಹಾಗೂ ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ ಸೇರಿದಂತೆ ವಿವಿಧ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಪುಷ​‍್ಾರೆ್ಪಣ ಮಾಡಿ ಗೌರವ ನಮನ ಸಲ್ಲಿಸಿದರು.

            ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ತಾಲೂಕು ಪಂಚಾಯತ ಇಒ ಆನಂದ ಬಡಕುಂದ್ರಿ, ನಗರಸಭೆ ಪೌರಾಯುಕ್ತ ಸಂಗನಬಸಯ್ಯ ಗದಗಿಮಠ, ಬಿಇಒ ಎ.ಎ. ಖಾಜಿ, ಪಶುವೈದ್ಯಾಧಿಕಾರಿ ಅನಿಲ ಮರಲಿಂಗಣ್ಣವರ, ವಾಲ್ಮೀಕಿ ಸಮಾಜದ ಅಧ್ಯಕ್ಷ ರಾಘವೇಂದ್ರ ಪೂಜೇರ, ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ವಾಲ್ಮೀಕಿ ಸಮುದಾಯದ ಹಿರಿಯ ನಾಯಕರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. 


ಸುದ್ದಿ ಓದಿ