ಬೆಳಗಾವಿ

ಗಾರಾಣಿ ಗಲ್ಲಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ಗಾರಾಣಿ ಗಲ್ಲಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ


           ಯಮಕನಮರಡಿ 26: ಗಾರಾಣಿ ಗಲ್ಲಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಮಹರ್ಷಿ ವಾಲ್ಮೀಕಿ ಅವರ ಮೂರ್ತಿಗೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ದೇವಪ್ಪ ಹುನ್ನೂರಿ ಅವರು ಮಕ್ಕಳಿಗೆ ನೋಟ್ಬುಕ್ ಹಾಗೂ ಪೆನ್ನುಗಳನ್ನು ವಿತರಿಸುವ ಮೂಲಕ ಶೈಕ್ಷಣಿಕ ಪ್ರೋತ್ಸಾಹ ನೀಡಿದರು.

           ಕಾರ್ಯಕ್ರಮದಲ್ಲಿ ಕಿರಣ್ ಸಿಂಗ್ ರಜಪೂತ್, ವೀರಣ್ಣ ಬಿ.ಸಿ., ರೊಟ್ಟಿ, ಸಂಜು ಭಂಡಾರಿ, ಆನಂದ್ ಬಾಹುಲಿ, ಲಕ್ಕಪ್ಪ ಪೂಜಾರಿ, ಬೈರೂ ಮುಂಡಲಿ, ಗುಲಾಬಸಿಂಗ್ ರಜಪೂತ್, ಲಗಮಣ್ಣ ದಾಸನಟ್ಟಿ, ವಿಜಯ ಜನರಾಳಿ ಹಾಗೂ ಯಲ್ಲಪ್ಪ ಬರಗಾಲಿ ಸೇರಿದಂತೆ ಸುತ್ತಮುತ್ತಲಿನ ಯುವಕರು ಮತ್ತು ಸಮಾಜದ ಮುಖಂಡರು ಉಪಸ್ಥಿತರಿದ್ದರು.  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಸಮಾಜದ ಮುಖಂಡರು ಹಾಗೂ ಯುವಕರ ಸಹಭಾಗಿತ್ವದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. 


ಸುದ್ದಿ ಓದಿ