ಹಳೆ ಗುಡಗನಹಟ್ಟಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ
ಲೋಕದರ್ಶನ ವರದಿ
ಯಮಕನಮರಡಿ 26: ಸಮೀಪದ ಹಳೇ ಹುಡುಗನ ಹಟ್ಟಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು ಗ್ರಾಮದ ಪ್ರಮುಖರಾದ ರಾಯ ಗೌಡ ಪಾಟೀಲ ಮತ್ತು ಸಂತೋಷ್ ಪಾಟೀಲ್ ಉಪಸ್ಥಿತರಿದ್ದು ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು ಈ ಸಂದರ್ಭದಲ್ಲಿ ಗಣ್ಯರನ್ನು ಸನ್ಮಾನಿಸಲಾಯಿತು.
ವಾಲ್ಮೀಕಿ ಸಂಘದ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿ ಗೊಳಿಸಿದರು. ಪೂಜಾ ಸಮಾರಂಭದಲ್ಲಿ ಈರಣ್ಣ ಬಿಸಿ ರೊಟ್ಟಿ ಕಿರಣ್ ಸಿಂಗ್ ರಜಪೂತ್ ದೇವಪ್ಪ ಹೊನ್ನೂರಿ ಗುಲಾಬ್ ಸಿಂಗ್ ರಜಪೂತ ಹಾಗೂ ಎಸ್ ಟಿ ಸಮುದಾಯದ ಯುವಕ ಮಿತ್ರರು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.