ಖರ್ಗೆಯವರ ಹೇಳಿಕೆ ಕಾಂಗ್ರೆಸ್ ಪಕ್ಷದ ಸಂಸ್ಕೃತಿ ತೋರಿಸುತ್ತದೆ- ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ
ಬೀದರ್: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬಿಹಾರದ ಪಾಟ್ನಾದಲ್ಲಿ ನಡೆದ ಸಮಾರಂಭವೊಂದರಲ್ಲಿಪ್ರಧಾನಿ ನರೇಂದ್ರ ಮೋದಿ ಅವರ ತಂದೆಯವರ ಕುರಿತು ಆಡಿದಂಥ ಅಸಂಬದ್ಧ ಹೇಳಿಕೆ ಕಾಂಗ್ರೆಸ್ ಪಕ್ಷದ ಹೀನ ಮನಸ್ಥಿತಿಯ ಸಂಸ್ಕೃತಿಗೆ ನಿದರ್ಶನವಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿಯಾದ ಬೀದರ್ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದ್ದಾರೆ.ಖರ್ಗೆ ಹಿರಿಯ ರಾಜಕಾರಣಿಗಳು. ಸಾರ್ವಜನಿಕ ಜೀವನದಲ್ಲಿ ಐದು ದಶಕವನ್ನು ಸವೆಸಿದ್ದಾರೆ. ಅನೇಕ ಹುದ್ದೆಗಳನ್ನು ಸಜ ಅಲಂಕರಿಸಿದ್ದಾರೆ.
ಅಂಥ ಹಿರಿಯರ ಬಾಯಿಯಿಂದ ಪ್ರಧಾನಿ ಅವರ ತಂದೆಯವರ ಬಗ್ಗೆ ಆಕ್ಷೇಪಾರ್ಹ ಮಾತನಾಡಿರುವುದು ಅವರ ಘನತೆಗೆ ಕುಂದು ತರುವಂತೆ ಮಾಡಿದೆ. ಪ್ರಧಾನಿಯವರ ಸ್ವರ್ಗಿಯ ತಂದೆಯ ಕುರಿತು ಮಾತನಾಡುವುದು ಖರ್ಗೆಯವರಂಥ ಹಿರಿಯರಿಗೆ ಶೋಭೆ ತರುವಂಥದ್ದಲ್ಲ. ಈ ಹೇಳಿಕೆ ಖಂಡನೀಯ. ಪ್ರಧಾನಿ ಹಾಗೂ ದೇಶದ ಜನತೆಗೆ ಬಹಿರಂಗ ಕ್ಷಮೆಯಾಚಿಸಬೇಕು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಮೋದಿ ಎಲ್ಲೂ ಹೋಗಲ್ಲ ಎಂದು ಹೇಳಿದ್ದಕ್ಕೆ ಅಲ್ಲಿದ್ದವರು ಆಕ್ಷೇಪಿಸಿ ಆತನ ಮೇಲೆ ಹಲ್ಲೆ ಮಾಡಿರುವುದು ಸಹ ಕಾಂಗ್ರೆಸ್ ನೀತಿ, ಧೋರಣೆ ಎಂಥದ್ದು ಎಂಬುದು ತೋರಿಸಿಕೊಟ್ಟಿದೆ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಕಾರ್ಯಕರ್ತನ ಮಾತು ಕೇಳಿ ಖರ್ಗೆ ಆವೇಶಕ್ಕೊಳಗಾಗಿರುವುದು ನೋಡಿದರೆ, ಇವರೆಷ್ಟು ಹತಾಶ ಮನಸ್ಥಿತಿಯಲ್ಲಿದ್ದಾರೆ ಎಂಬುದು ಸಾಬೀತುಪಡಿಸಿದೆ ಎಂದು ಟೀಕಿಸಿದ್ದಾರೆ.