ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ಸರ್ಕಾರಕ್ಕೆ ಮನವಿ
ದೇವರಹಿಪ್ಪರಗಿ 26: ಪರಿಶಿಷ್ಟ ಜಾತಿ (ಎಸ್ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್ಟಿ) ಮೀಸಲಾತಿ ಹೆಚ್ಚಳವನ್ನು ಎತ್ತಾವತ್ತಾಗಿ ಕಾಯ್ದುಕೊಳ್ಳುವಂತೆ ಒತ್ತಾಯಿಸಿ, ತಾಲೂಕು ಶ್ರೀ ಮಹರ್ಷಿ ವಾಲ್ಮೀಕಿ ಮಹಾಸಭಾ ವತಿಯಿಂದ ಸರ್ಕಾರಕ್ಕೆ ತಹಶೀಲ್ದಾರ್ ನಿಂಗಣ್ಣ ಬಿರಾದಾರ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ನಂತರ ತಾಲೂಕು ಶ್ರೀ ಮಹರ್ಷಿ ವಾಲ್ಮೀಕಿ ಮಹಾಸಭಾದ ಅಧ್ಯಕ್ಷ ಶರಣಗೌಡ ಪಾಟೀಲ ಅವರು ಮಾತನಾಡಿ, ಎಸ್ಸಿ ಮತ್ತು ಎಸ್ಟಿ ಸಮುದಾಯಗಳಿಗೆ ಹೆಚ್ಚಿಸಿರುವ ಮೀಸಲಾತಿಯನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಹಿಂದುಳಿದ ಸಮುದಾಯದ ಮಕ್ಕಳ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಲು ಈ ಕುರಿತು ಹಿರಿಯ ನ್ಯಾಯಾಧೀಶರ ಮೂಲಕ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟು, ಮೀಸಲಾತಿ ಮುಂದುವರಿಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಮುದಾಯದ ಮುಖಂಡರುಗಳಾದ ಚಂದ್ರಶೇಖರ ಗಣಜಲಿ, ರಾಮಣ್ಣ ನಾಯ್ಯೋಡಿ, ಸೋಮಲಿಂಗ ಜಮಾದಾರ, ರಮೇಶ ನಾಯ್ಕೋಡಿ, ಪ್ರವೀಣ ನಾಯ್ಯೋಡಿ, ಶಿವಾನಂದ ರೋಳ್ಳಿ, ಪರಶುರಾಮ ಬಾಗೇವಾಡಿ, ಗುಡದಪ್ಪ ಕವಲ್ದಾರ, ಮಡಿವಾಳ ನಾಯ್ಯೋಡಿ, ಮಾನಸಪ್ಪ ಗಣಜಲಿ,ರಾಜು ಎನ್. ಬಿರಾದಾರ,ಲಕ್ಷ್ಮಣ ದೋರೆ, ಮಲ್ಲು ಚಿಗರಿ, ಮಂಜು ದೋರೆ, ಮಲ್ಲಿಕಾರ್ಜುನ ಕಾಮನಕೇರಿ, ನಾರಾಯಣ ನಾಯ್ಕೋಡಿ, ಸುರೇಶ ದೋರೆ,ಅರ್ಜುನ ಸೋಲ್ಲಾಪೂರ, ಹಣಂತ ಯೆದಲಭಾವಿ, ಮಹೇಶ ಆಲಗೂರ ಸೇರಿದಂತೆ ಹಲವಾರು ಜನ ಮುಖಂಡರು ಉಪಸ್ಥಿತರಿದ್ದರು.