ಶ್ರೀ ಸಂತ ಸೇವಾಲಾಲ್ ಸಮಾಜದಿಂದ ಶಾಸಕರಿಗೆ ಸನ್ಮಾನ
ತಾಳಿಕೋಟಿ 26: ತಾಲೂಕಿನ ಬಿ. ಸಾಲವಾಡಗಿ ತಾಂಡಾದ ಶ್ರೀ ಸಂತ ಸೇವಾಲಾಲ್ ದೇವಸ್ಥಾನದ ಹತ್ತಿರ ನೂತನವಾಗಿ ನಿರ್ಮಾಣ ಗೊಳ್ಳಲಿರುವ ಸಮುದಾಯ ಭವನಕ್ಕೆ ಅನುದಾನವನ್ನು ಬಿಡುಗಡೆಗೊಳಿಸಿದ ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕರಾದ ರಾಜುಗೌಡ ಪಾಟೀಲ ಇವರನ್ನು ರವಿವಾರ ಸಮಾಜದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕ ಅಧ್ಯಕ್ಷ ಮಡುಸೌಕಾರ ಬಿರಾದಾರ, ತಾಪಂ ಮಾಜಿ ಅಧ್ಯಕ್ಷ ರಾಜುಗೌಡ ಕೋಳೂರ, ನಾನಾಗೌಡ ಅನಂತರೆಡ್ಡಿ, ನಿಂಗಣ್ಣ ಕಲಬುರ್ಗಿ, ಅಶೋಕ ಅಸ್ಕಿ, ಪ್ರಭುಗೌಡ ನಾಡಗೌಡ, ರಾಜುಗೌಡ ಯಾಳಗಿ, ಸೇವಾಲಾಲ್ ಸಮಾಜದ ಅಧ್ಯಕ್ಷ ಬಾಸು ಜಾಧವ, ಶ್ರೀಕಾಂತಗೌಡ ದೊಡ್ಡಮನಿ, ಸಾಹೇಬ ಗೌಡ ಅನಂತರೆಡ್ಡಿ, ರಮೇಶ ಚೌಹಾಣ, ಹಣಮಂತ ರಾಥೋಡ, ಬಾಬು ಚೌಹಾಣ, ಮೋಹನ ರಾಥೋಡ ಹಾಗೂ ಸೇವಾಲಾಲ್ ಸಮಾಜದ ಬಾಂಧವರು ಉಪಸ್ಥಿತರಿದ್ದರು.