ಎಸ್.ಕೆ. ಮಹಾವಿದ್ಯಾಲಯದಲ್ಲಿ ವಾಲ್ಮೀಕಿ ಜಯಂತಿ ಆಚರಣೆ
ತಾಳಿಕೋಟಿ 27 : ಪಟ್ಟಣ ಪ್ರತಿಷ್ಠಿತ ವಿ.ವಿ. ಸಂಘದ ಅಡಿಯಲ್ಲಿ ನಡೆಯುತ್ತಿರುವ ಎಸ್.ಕೆ.ಕಲಾ,ವಾಣಿಜ್ಯ ಹಾಗು ವಿಜ್ಞಾನ ಮಹಾವಿದ್ಯಾಲಯ ಇದರ ಕನ್ನಡ ವಿಭಾಗದ ವತಿಯಿಂದ ಸೋಮವಾರ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಸುಜಾತಾ ಚಲವಾದಿ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಕೃತದ ಮೊದಲ ಮಹಾಕಾವ್ಯವಾದ ’ರಾಮಾಯಣ’ವನ್ನು ರಚಿಸಿದ ಮಹರ್ಷಿ ವಾಲ್ಮೀಕಿ ಅವರ ಜನ್ಮದಿನದ ಸ್ಮರಣಿಯವಾಗಿದೆ.
ರತ್ನಾಕರನು ತನ್ನ ಆರಂಭಿಕ ಜೀವನದಲ್ಲಿ ದಾರಿಹೋಕರನ್ನು ದರೋಡೆ ಮಾಡುವ ಕ್ರೂರ ದರೋಡೆಕೋರನಾಗಿದ್ದನು. ಒಮ್ಮೆ ಅವರಿಗೆ ನಾರದ ಮುನಿಗಳು ಭೇಟಿಯಾದರು. ಜೀವನದಲ್ಲಿ ತಾವು ಮಾಡುತ್ತಿರುವ ಪಾಪಗಳಿಗೆ ಕುಟುಂಬದವರು ಭಾಗಿಯಾಗುತ್ತಾರೆಯೇ ಎಂದು ನಾರದರು ಕೇಳಿದಾಗ, ರತ್ನಾಕರನಿಗೆ ಸತ್ಯದ ಅರಿವಾಗಿ ತಮ್ಮನ್ನು ತಾವು ಬದಲಾಯಿಸಿಕೊಳ್ಳುತ್ತಾರೆ. ಬದಲಾವಣಿ ಜಗದ ನಿಯಮ ಅದರಂತೆ ಬದುಕಿದರೆ ದರೋಡೆಕೊರನು ಮಹಾನ್ ವ್ಯಕ್ತಿಯಾಗಲು ಸಾಧ್ಯವೆಂದು ಮಾತನಾಡಿದರು.
ಮಹಾವಿದ್ಯಾಲಯದ ಪ್ರಾಚಾರ್ಯರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಡಾ.ಡಿ.ಬಿ.ಮೂಗಡ್ಲಿಮಠ ಅವರು ಮಹರ್ಷಿ ವಾಲ್ಮೀಕಿಯು ನಾರದ ಮುನಿಗಳ ಮಾರ್ಗದರ್ಶನದಂತೆ ’ಮರಾ’ ಎಂಬ ಶಬ್ದವನ್ನು ಜಪಿಸುತ್ತಾ ತಪಸ್ಸು ಮಾಡಿದಾಗ, ಅದು ನಿರಂತರ ಜಪದಿಂದ ರಾಮ ನಾಮವಾಯಿತು. ಅವರ ತಪಸ್ಸಿನ ನಿಷ್ಠೆಯಿಂದ ಮೈಮೇಲೆ ಹುಟ್ಟಿದ ಹುತ್ತದಿಂದ ಹೊರಬಂದಿದ್ದರಿಂದ ಅವರಿಗೆ ’ವಾಲ್ಮೀಕಿ’ಎಂಬ ಹೆಸರು ಬಂದಿತು ಎಂದು ಮಾತನಾಡಿದರು. ಕಾರ್ಯಕ್ರಮ ಡಾ.ಅಜೇಯ ಅಬ್ಬಾರ, ಡಾ.ಅಶೋಕ ರಾಠೋಡ, ಲಲಿತಾ ಗೌಡರ,ಐಶ್ವರ್ಯ, ಯಲ್ಲಾಲಿಂಗ ಚಿಗರಿ ಯು.ಎ.ಖಾಜಿ ಗೊನಾಳ, ಬನುದೇವಿ ಹಿರೇಮಠ ವಿದ್ಯಾರ್ಥಿಗಳಾದ ಮಮತಾಜ ನಾಯಕ್ಕೋಡಿ,ನೇಹಾ ಮರ್ಜಿ ಹಾಗೂ ಬೋದಕ ಬೋದಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು.