ವಿಜಯಪುರ

ಅಥರ್ಗಾ ಗ್ರಾಮದಲ್ಲಿ ಕೆರೆ, ಹಳ್ಳಕ್ಕೆ ಮತ್ತು ಗುತ್ತಿಬಸವಣ್ಣ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ಅಧಿಕಾರಿಗಳಿಗೆ ಮನವಿ

ಅಥರ್ಗಾ ಗ್ರಾಮದಲ್ಲಿ ಕೆರೆ, ಹಳ್ಳಕ್ಕೆ ಮತ್ತು ಗುತ್ತಿಬಸವಣ್ಣ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ಅಧಿಕಾರಿಗಳಿಗೆ ಮನವಿ
A memorandum has been submitted to officials in Atharga village, demanding the release of water into

ಲೋಕದರ್ಶನ ವರದಿ 

         ತಾಂಬಾ 27: ಅಥರ್ಗಾ ಗ್ರಾಮದ ಇಂಡಿ-ವಿಜಯಪುರಕ್ಕೆ ಹೋಗುವ ವಾಹನಗಳನ್ನು ಬಂದು ಗೋಳಿಸಿ ಕೆರೆ ಮತ್ತು ಹಳ್ಳ ಕಾಲುವೆಗೆ ನೀರು ಹರಿಸಬೇಕೆಂದು ಆಗ್ರಹಿಸಿ ಬೃಹತ್ ಪ್ರತಿಭಟಣೆ ಮಾಡಲಾಯಿತ್ತು. ಬೆಳಿಗ್ಗೆ 9ರಿಂದ 3ಗಂಟೆಯವರೆಗೆ ಬೆರೆ ಪಟ್ಟಣ ಮತ್ತು ಗ್ರಾಮಳಿಗೆ ಹೊಗುವ ವಾಹನಗಳು ಹೋಗದೆ ಪ್ರಯಾಣಿಕರು ಪರದಾಡಬೇಕಾಯಿತ್ತು. ವ್ಯಾಪಾರಸ್ಥರು ಇದರಲ್ಲಿ ಭಾಗವಹಿಸಿ ಬೆಂಬಲ ನೀಡಿದರು.

         ರೈತ ಮುಖಂಡ ಬೀಮರಾಯಗೌಡ ಬೀರಾದಾರ ಮಾತನಾಡಿ ಗುತ್ತಿ ಬಸವಣ್ಣ ಕಾಲುವೆಯಿಂದ 97ಕೀ.ಮಿ ಮಾತ್ರ ನೀರು ಬರುತ್ತದೆ ಕಾಲುವೆಯಿಂದ ಕೋನೆಯ ಭಾಗದವರೆಗೂ ನೀರು ಹರಿಸಬೇಕು ಹಾಗೂ ಕೆರೆ, ಹಳ್ಳಕ್ಕೆ ನೀರು ಹರಿಸಬೆಕೆಂದು ಒತ್ತಾಯಿಸಿದರು. ಕೇವಲ ಪ್ರತಿಭಟಣೆ ಮಾಡಿದಾಗ ಒಂದು ದಿನ ನೀರು ಬಿಟ್ಟು ಮತ್ತೆ ನೀರು ಬುಡುವದಿಲ್ಲ ಹೀಗೆ ಮಾಡಿ ರೈತರಿಗೆ ಮೋಸ ಮಾಡಬಾರದು ನೀರು ಕುಡಿಯಲು ಅವಶ್ಯ ಇದೆ.

            ಜನ-ಜಾನೂವಾರಗಳಿಗೆ ತೊಂದರೆ ಆಗುತ್ತಿದ್ದು ಕುಡಲೆ ನೀರು ಹರಿಸಬೆಕೆಂದರು. ಪ್ರತಿಭಟಣೆಯಲ್ಲಿ ಈರ​‍್ಪ ಕುಡಗಿ, ಎಸಪ್ಪ ತಾಂಬೆ, ಬೀರ​‍್ಪ ಪೂಜಾರಿ, ರೇವಣಸಿದ್ದ ಮುರಗುಂಡಿ, ಲಕ್ಷ್ಮಣ ಪೂಜಾರಿ, ಹಣಮಂತರಾಯಗೌಡ ಬಿರಾದಾರ, ಚಂದ್ರಕಾಂತ ಝಳಕಿ, ಆನಂದ ದೇವೂರ, ಮಾಳು ಮೋಸಲಗಿ, ಗಣಪತಿ ಬಾಳಿಕೋಲ, ಪರಸುರಾಮ ಜಿಗಜಿಣಗಿ, ಪರಸುರಾಮ ಬೀರ​‍್ಪಗೋಳ,              ಮಾದೇವ ಕನ್ನೂರ ರವಿ ಕನ್ನೂರ, ಸಂತು ಕನ್ನೂರ, ಕುಲಪ್ಪ ವಟಾರ, ಮಹೇಶ ದೇಗಿನಾಳ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು. ಎಇಇ ಆರೀಫ್ ಇಂಜಿನಿಯರ್ ದೇಸಾಯಿ ಅವರು ಸ್ಥಳಕ್ಕೆ ಬೇಟೀನೀಡಿ ಶಿಘ್ರದಲ್ಲಿಯೆ ದೋಡ್ಡ ಹಳ್ಳಕ್ಕೆ, ಕೆರೆ ಹಾಗೂ ಗುತ್ತಿ ಬಸವಣ್ಣ ಕಾಲುವೆಗೆ ವಾರಬಂದಿ ಮುಗಿದ ನಂತರ ಕೆರೆ ಕಟ್ಟೆಗಳನ್ನು ತುಂಬಿಸಲಾಗುವದು ಎಂದು ಬರವಸೆ ನೀಡಿದರು. 


ಸುದ್ದಿ ಓದಿ