" ಶಿಗ್ಲಿಯ ಕೂಡ್ಲಮಠ ಪ್ರೌಢಶಾಲೆ ಸತತ 28 ವರ್ಷ ರಾಜ್ಯ ಮಟ್ಟಕ್ಕೆ "
ಲಕ್ಷ್ಮೇಶ್ವರ " 27 ; ಗದಗನಲ್ಲಿ ನಡೆದ ಜಿಲ್ಲಾಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಶಿಗ್ಲಿಯ ಎಸ್ ಎಸ್ ಕೂಡ್ಲಮಠ ಪ್ರೌಢಶಾಲೆಯ ಐದು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ರೀತಿಯಾಗಿ ಸತತ 28 ವರ್ಷಗಳಿಂದ ರಾಜ್ಯಮಟ್ಟವನ್ನು ಪ್ರತಿನಿಧಿಸುತ್ತಿರುವದು ಶಾಲೆಗೆ ಹಾಗೂ ಊರಿಗೆ ಹೆಮ್ಮೆಯ ಸಂಗತಿಯಾಗಿದೆ.
ಸರಪಳಿ ಗುಂಡು ಎಸತದಲ್ಲಿ ಕುಮಾರ. ಆಜಾದ.ಸೂರಣಗಿ ಪ್ರಥಮ, ಚಕ್ರ ಎಸೆತದಲ್ಲಿ ದ್ವಿತೀಯ, ಕುಮಾರಿ ರೇಣುಕಾ ಹುಳ್ಳಿ ಕೊಪ್ಪಿ ಸರಪಳಿ ಗುಂಡು ಎಸೆತದಲ್ಲಿ ಪ್ರಥಮ ಹಾಗೂ ಕುಮಾರ್ ಅಲ್ತಾಫ್ ಸುಂಕದ ಅಡೆತಡೆ ಓಟದಲ್ಲಿ ಪ್ರಥಮ. ಹಾಗೂ ಸರಪಳಿ ಗುಂಡು ಎಸೆತದಲ್ಲಿ ಕುಮಾರ್ ಫಯಾಜ್ ನದಾಫ್ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇವರ ಈ ಸಾಧನೆಗೆ ಗ್ರಾಮ ಭಾರತಿ ಶಿಕ್ಷಣ ಸಮಿತಿಯ ಆಡಳಿತ ಮಂಡಳಿಯ ಚೇರ್ಮನ್ನರಾದ ಎಸ್ ಪಿ ಬಳಿಗಾರ, ವಾಯ್ಸ್ ಚೇರ್ಮನ್ನರಾದ ಎಚ್ಎಫ್ ತಳವಾರ್,ಗೌರವ ಕಾರ್ಯದರ್ಶಿಗಳಾದ ಸಿ.ಎಂ. ರಾಗಿ ಆಡಳಿತ ಮಂಡಳಿಯ ಸದಸ್ಯರುಗಳಾದ ಡಿ ವೈ ಹುನಗುಂದ್, ಬಿ.ಎಂ ಕಳಸದ ಹಾಗೂ ಆಡಳಿತ ಮಂಡಳಿಯ ಸರ್ವ ಸದಸ್ಯರುಗಳು ಜೊತೆಗೆ ಶಾಲೆಯ ಮುಖ್ಯಾದ್ಯಾಪಕರಾದ ಸಿ. ಬಿ. ಮೊಗಲಿ ಹಾಗೂ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು,
ಹಾಗೂ ಗ್ರಾಮ ಭಾರತಿ ಶಿಕ್ಷಣ ಸಮಿತಿಯ ಎಲ್ಲಾ ಅಜೀವ ಸದಸ್ಯರುಗಳು ಶಾಲೆಯ ಹಳೆಯ ವಿದ್ಯಾರ್ಥಿಗಳು ಶುಭ ಹಾರೈಸಿದ್ದಾರೆ. ಈ ಎಲ್ಲ ಮಕ್ಕಳ ಸಾಧನೆಗೆ ತರಬೇತಿ ನೀಡಿ ರಾಜ್ಯಮಟ್ಟಕ್ಕೆ ಆಯ್ಕೆಯಾಗುವಲ್ಲಿ ತರಬೇತಿ ನೀಡಿದ ದೈಹಿಕ ಶಿಕ್ಷಕರಾದ ಕೆ.ಆರ್ ಲಮಾಣಿ ಇವರನ್ನು ಅಭಿನಂದಿಸಿದ್ದಾರೆ.