ವಿಶ್ವ ದಾಖಲೆ ಪುಸ್ತಕಕ್ಕೆ ಹುಲಕೋಟಿಯ ಕವಿತಾ ರಾಥೋಡ್ ಹೆಸರು ; ಕವಿತಾ ಸಾಧನೆಗೆ ಗೋರ್ ಸೇನಾ ರಾಜ್ಯಾಧ್ಯಕ್ಷ, ವಕೀಲ ರವಿಕಾಂತ ಅಂಗಡಿ ಮೆಚ್ಚುಗೆ
ಗದಗ 27 : ಗದಗ ಜಿಲ್ಲೆಯ ಹುಲಕೋಟಿಯ ಬಂಜಾರ ಸಮುದಾಯದ ಮಹಿಳೆ ಕವಿತಾ ಮಹಾದೇವ ರಾಥೋಡ್ ಅವರು ಮಹಿಳಾ ಸುರಕ್ಷತೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಜಿಸಿದ್ದ ಸಾಮೂಹಿಕ ಕೈಹೊಲಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಆಸ್ಕರ್ಸ್ ಬುಕ್ ಆಫ್ ರೆಕಾಡ್ರ್ಸ್ನಿಂದ ಪ್ರಮಾಣಪತ್ರ ಪಡೆದಿದ್ದಾರೆ. ಅವರ ಸಾಧನೆಗೆ ಗೋರ್ ಸೇನಾ ರಾಜ್ಯಾಧ್ಯಕ್ಷ ಹಾಗೂ ವಕೀಲ ರವಿಕಾಂತ ಅಂಗಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಕ್ಟೋಬರ್ 25ರಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ, ಒಂದು ಗಂಟೆ 30 ನಿಮಿಷಗಳ ಅವಧಿಯಲ್ಲಿ ಅತಿ ಹೆಚ್ಚು ಸಂಖ್ಯೆಯ ಟೈಲರ್ಗಳು ಏಕಕಾಲದಲ್ಲಿ ಮಹಿಳೆಯರ ಉಡುಪುಗಳನ್ನು ಕೈಯಿಂದ ಹೊಲಿಯುವ ಮೂಲಕ ದಾಖಲೆ ನಿರ್ಮಿಸುವ ಪ್ರಯತ್ನದಲ್ಲಿ ಭಾಗವಹಿಸಿದ್ದರು. ಮಹಿಳಾ ಸುರಕ್ಷತೆ ಕುರಿತು ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು.
ಈ ಪ್ರಯತ್ನವನ್ನು ಆಸ್ಕರ್ಸ್ ಬುಕ್ ಆಫ್ ರೆಕಾಡ್ರ್ಸ್ನ ದಾಖಲೆಗಳ ನೋಂದಣಿಯಲ್ಲಿ ದಾಖಲಿಸಲಾಗಿದ್ದು, ಪ್ರಮಾಣಪತ್ರದಲ್ಲಿ /2026/023 ಎಂಬ ದಾಖಲೆ ಸಂಖ್ಯೆ ನಮೂದಿಸಲಾಗಿದೆ. ಈ ಕುರಿತು ಗೋರ್ ಸೇನಾ ರಾಜ್ಯಾಧ್ಯಕ್ಷ ಹಾಗೂ ವಕೀಲ ರವಿಕಾಂತ ಅಂಗಡಿ ಅವರು, “ಗದಗ ಜಿಲ್ಲೆಯ ಹುಲಕೋಟಿಯ ಬಂಜಾರ ಸಮುದಾಯದ ಮಹಿಳೆ ಕವಿತಾ ಮಹಾದೇವ ರಾಥೋಡ್ ಅವರು ಸಾಮೂಹಿಕ ಕೈಹೊಲಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಧನೆ ಮಾಡಿರುವುದು.
ಹೆಮ್ಮೆಯ ಸಂಗತಿ. ಮಹಿಳೆಯರ ಕೌಶಲ್ಯ, ಆತ್ಮವಿಶ್ವಾಸ ಮತ್ತು ಸಾಮಾಜಿಕ ಜಾಗೃತಿಯನ್ನು ಉತ್ತೇಜಿಸುವ ಇಂತಹ ಪ್ರಯತ್ನಗಳು ಇತರ ಮಹಿಳೆಯರಿಗೂ ಪ್ರೇರಣೆಯಾಗುತ್ತವೆ ಮತ್ತು ಬಂಜಾರ ಸಮುದಾಯಕ್ಕೆ ಹೆಮ್ಮೆಯ ಸಂಗತಿ ಎಂದು ಹೇಳಿದರು. ಕವಿತಾ ರಾಥೋಡ್ ಅವರ ಸಾಧನೆಗೆ ಹುಲಕೋಟಿ ಸೇರಿದಂತೆ ಗದಗ ಜಿಲ್ಲೆಯ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.