ಜಗತ್ತಿಗೆ ಮಹಾಕಾವ್ಯ ನೀಡಿದ ಮಹರ್ಷಿ ವಾಲ್ಮೀಕಿ ಅವರ ಜ್ಞಾನಸಾಧನೆ ಪ್ರೇರಣೆಯಾಗಿದೆ
ಗದಗ : ಮಹರ್ಷಿ ವಾಲ್ಮೀಕಿಯವರ ತಪಸ್ಸು ಮತ್ತು ಸಾಧನೆ ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕವಾದದುಸಮಾಜಕ್ಕೆ ನೀಡಿದ ಮಹರ್ಷಿ ವಾಲ್ಮೀಕಿ ಅವರ ಆದರ್ಶಗಳು ಹಾಗೂ ಮೌಲ್ಯಗಳು ಸಾರ್ವಕಾಲಿಕವಾದುದು, ಪ್ರತಿಯೊಬ್ಬರೂ ಅವರ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜದ ಪ್ರಗತಿಗೆ ಶ್ರಮಿಬೇಕೆಂದು ಕಾಂಗ್ರೆಸ್ ಮುಖಂಡ ಕುಬೇರಡ್ಡಿ ಬಂಗಾರಿ ಹೇಳಿದರು. ಅವರು ತಾಲೂಕಿನ ನೀಲಗುಂದ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಸೇವಾ ವೇದಿಕೆ ಇವರ ಸಹಯೋಗದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.ಜಗತ್ತಿಗೆ ಮಹಾಕಾವ್ಯ ನೀಡಿದ ಮಹರ್ಷಿ ವಾಲ್ಮೀಕಿ ಅವರ ಜ್ಞಾನಸಾಧನೆ ಪ್ರೇರಣೆಯಾಗಿದೆ ಎಂದರು.
ಪತ್ರಕರ್ತ ಲೋಕೇಶ ಮಲ್ಲಿಗವಾಡ ಮಾತನಾಡಿ ಮಹರ್ಷಿ ಜೀವನ ಸ್ಮರಿಸುವುದು ಕೇವಲ ಜಯಂತಿ ಆಚರಣೆಗೆ ಸೀಮಿತವಾಗಬಾರದು. ಅವರ ಹೆಸರಿನಲ್ಲಿ ಗುರುತಿಸಿಕೊಂಡಿರುವ ಸಾಹಿತ್ಯ ಪರಂಪರೆ, ಜ್ಞಾನಸಾಧನೆ ಮತ್ತು ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ ಮಹರ್ಷಿ ವಾಲ್ಮೀಕಿಯವರ ತತ್ವಗಳು ಮತ್ತು ಅವರು ನೀಡಿದ ಮಹಾಕಾವ್ಯದ ಸಂದೇಶಗಳು ಸಮಾಜಕ್ಕೆ ಸದಾ ದಾರೀದೀಪವಾಗಿವೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಶಂಕ್ರ್ಪ ಕಾಟೋಳ್ಳಿ, ಸುನಿಲ ಬಂಗಾರಿ, ನವೀನ್ ಬಂಗಾರಿ, ಮಹೇಶ ಹಿರೇಮಠ, ಮಂಜುನಾಥ ತುಂಬಣ್ಣವರ, ಉಮೇಶ ವೀರಾಪುರ, ಶರೀಫ ನದಾಫ, ಶಿವಾನಂದ ಜಿನಗಿ, ಬೂದಪ್ಪ ಮಲ್ಲಿಗವಾಡ, ಶಂಕ್ರ್ಪ ಜಿನಗಿ, ಮಲ್ಲಪ್ಪ ಮಲ್ಲಿಗವಾಡ, ಶಂಕ್ರ್ಪ ಜಿನಗಿ ಮಲ್ಲಪ್ಪ ಮಲ್ಲಿಗವಾಡ, ಬೂದಪ್ಪ ಜಿನಗಿ, ಭೀಮಪ್ಪ ಚಿಕ್ಕಗಸಿ, ಶಿವಪ್ಪ ಮಲ್ಲಿಗವಾಡ, ರಮೇಶ ಚಿಕ್ಕಗಸಿ, ಶರೀಫ್ ಸಾಬ್ ಬೆಂತೂರ , ಮುತ್ತಪ್ಪ ಮಲ್ಲಿಗವಾಡ, ಮಾನಪ್ಪ ಮಲ್ಲಿಗವಾಡ ಹಾಗೂ ಗ್ರಾಮದ ಗುರುಹಿರಿಯರು ಸಮಾಜದ ಮುಖಂಡರು ಪಾಲ್ಗೊಂಡಿದ್ದರು.