ಮಾರ್ಕಬ್ಬಿನಹಳ್ಳಿ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು: ಶಾಸಕ ರಾಜುಗೌಡ
ಲೋಕದರ್ಶನ ವರದಿ
ದೇವರಹಿಪ್ಪರಗಿ 27: ತಾಲೂಕಿನ ಮಾರ್ಕಬ್ಬಿನಹಳ್ಳಿ ಗ್ರಾಮದಲ್ಲಿ ರಸ್ತೆ, ಸೇತುವೆ ಹಾಗೂ ಧಾರ್ಮಿಕ ಮತ್ತು ಸಮುದಾಯ ಮೂಲಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದ್ದು, ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ತಿಳಿಸಿದ್ದಾರೆ. ಗ್ರಾಮದಲ್ಲಿ ಮಂಗಳವಾರ ಸುಮಾರು 3 ಕೋಟಿ ವೆಚ್ಚದ ಹಳ್ಳದ ಸೇತುವೆ, 25 ಲಕ್ಷ ರೂ ವೆಚ್ಚದ ಸಿ.ಸಿ ರಸ್ತೆ, ಮಲ್ಲಿಕಾರ್ಜುನ ದೇವಸ್ಥಾನದ ಸಮುದಾಯ ಭವನಕ್ಕೆ 10 ಲಕ್ಷ ಹಾಗೂ ಅಮಿನ್ ಸಾಬ್ ದರ್ಗಾ ಹತ್ತಿರ ಸಮುದಾಯ ಭವನಕ್ಕೆ 5ಲಕ್ಷ ರೂ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮದ ಜನರಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಒದಗಿಸುವುದು, ಸಂಚಾರ ವ್ಯವಸ್ಥೆಯನ್ನು ಸುಧಾರಿಸುವುದು ಹಾಗೂ ಸಾರ್ವಜನಿಕರ ಬೇಡಿಕೆಗಳಿಗೆ ಸ್ಪಂದಿಸುವ ಮೂಲಕ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಸ್ಪಂದಿಸಿದ್ದೇನೆ,
ಗ್ರಾಮದ ಸರ್ವ ಜನರು ನನ್ನನ್ನು ಇಲ್ಲಿಯವರೆಗೆ ಪ್ರೀತಿಸುತ್ತಾ ಬಂದಿದ್ದಾರೆ. ಅವರ ಋಣ ತೀರಿಸಲು ದೋಣಿ ನದಿಗೆ ಸೇತುವೆ ನಿರ್ಮಾಣ ಮಾಡುವ ಕನಸು ಇದೆ, ಬೀರ್ಪ ದೇವರ ಸಮುದಾಯ ಭವನ ನಿರ್ಮಾಣದ ಜೊತೆ ಮಹಿಳೆಯರಿಗಾಗಿ ಹೈಟೆಕ್ ಶೌಚಾಲಯ ನಿರ್ಮಾಣ ಮಾಡಲು ತಮ್ಮೆಲ್ಲರ ಸಹಕಾರ ಇರಲಿ ಎಂದು ಹೇಳಿದರು. ಪ್ರಾಸ್ತಾವಿಕವಾಗಿ ಪಿಡಬ್ಲ್ಯೂಡಿ ಎಇಇ ಎಸ್.ಜಿ.ಡೋಡಮನಿ ಅವರು ಮಾತನಾಡಿ, ಸುಮಾರು 3ಕೋಟಿ ರೂ ವೆಚ್ಚದಲ್ಲಿ ಸೇತುವೆ ನಿರ್ಮಾಣದಿಂದ ವಾಹನಗಳ ಸುಗಮ ಸಂಚಾರ ಹಾಗೂ ರೈತರ ಜಮೀನುಗಳಿಗೆ ಸರಾಗವಾಗಿ ನೀರು ಹರಿಸಬೇಕು ಎಂಬ ಉದ್ದೇಶದಿಂದ ಸೇತುವೆ ಮಾಡಲಾಗುತ್ತಿದೆ ನಿಗದಿತ ಅವಧಿಯ ಒಳಗೆ ಕೆಲಸ ಮಾಡಲು ಗುತ್ತಿಗೆದಾರರಿಗೆ ತಿಳಿಸಲಾಗಿದೆ.