ಕಲಾಪ್ರತಿಭೋತ್ಸವ ಕಾರ್ಯಕ್ರಮ ಯಶಸ್ವಿ.
ಲೋಕದರ್ಶನ ವರದಿ
ಕಾರವಾರ 27: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕಾರವಾರದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಬಾಲಪ್ರತಿಭೆ/ ಕಿಶೋರ್ರತಿಭೆ/ ಯುವ ಪ್ರತಿಭೆಗಳಿಗೆ ಭಾನುವಾರ ಆಯೋಜಿಸಲಾದ ಕಲಾಪ್ರತಿಭೋತ್ಸವ-2026 ನ್ನು ಸಾಮಾಜಿಕ ಅರಣ್ಯ ಉಪ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಜಿ. ನಾವಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ರಾಮಾ ನಾಯ್ಕ, ಜಿಲ್ಲಾ ಆಯುಷ್ ಆಧಿಕಾರಿ ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಂಜೀವಕುಮಾರ್ ಎಸ್ ನಾಯ್ಕ, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ ವೆಂ ನಾಯ್ಕ ಮತ್ತಿತರರು ಇದ್ದರು.