ಎಸ್ ವಿ ಸಂಕನೂರ ಗೆಲವು ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ
ಲಕ್ಷ್ಮೇಶ್ವರ " 28 ; ವಿಧಾನ ಪರಿಷತ್ತಿನ 2 ಪದವೀಧರ ಕ್ಷೇತ್ರ 2 ಶಿಕ್ಷಕರ ಕ್ಷೇತ್ರಗಳಲ್ಲಿ ಬಿಜೆಪಿ ಜೆಡಿಎಸ್ ಅಭ್ಯರ್ಥಿಗಳ ಗೆಲುವು ಸಾಧಿಸಿದ ಹಿನ್ನೆಲೆ ಪಟ್ಟಣದ ಶಿಗ್ಲಿ ಕ್ರಾಸ್ ನಲ್ಲಿ ಬಿಜೆಪಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು ವಿಜಯೋತ್ಸವ ಕುರಿತು ಮಾತನಾಡಿದ ಶಾಸಕ ಡಾ ಚಂದ್ರು ಲಮಾಣಿ ಅವರು ರಾಜ್ಯದಲ್ಲಿ ನಡೆದ ನಾಲ್ಕು ವಿಧಾನ ಪರಿಷತ್ ಚುನಾವಣೆಯಲ್ಲಿ ಪ್ರಜ್ಞಾವಂತ ಮತದಾರರು ಎನ್.ಡಿ.ಎ ಬೆಂಬಲಿತ ಅಭ್ಯರ್ಥಿಗಳಿಗೆ ಮತ ನೀಡುವ ಮೂಲಕ ಸೂಕ್ತ ಅಭ್ಯರ್ಥಿಗಳ ಗೆಲುವಿಗೆ ಕಾರಣಿ ಕರ್ತರಾಗಿದ್ದಾರೆ.
ಈ ಚುನಾವಣೆಯಿಂದ ಕಾಂಗ್ರೆಸ್ಸಿಗೆ ಪ್ರಜ್ಞಾವಂತ ಮತದಾರರು ತಕ್ಕ ಪಾಠವನ್ನು ಕಲಿಸಿದ್ದಾರೆ ಮುಂಬರುವ ತಾಲೂಕ ಪಂಚಾಯತಿ ಜಿಲ್ಲಾ ಪಂಚಾಯಿತಿ ಗ್ರಾಮ ಪಂಚಾಯಿತಿ ಸ್ಥಳೀಯ ನಗರಸಭೆ ಪುರಸಭೆ ಮತ್ತು ಮುಂಬರುವ 2028 ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಮುನ್ಸೂಚಿಯಾಗಿದೆ ಎಂದರು ಶಿರಹಟ್ಟಿ ಮಂಡಲ ಅಧ್ಯಕ್ಷ ಸುನಿಲ್ ಮಹಾಂತಶೆಟ್ಟರ ಅವರು ಮಾತನಾಡಿರಾಜ್ಯದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಇದೆ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂದು ಬೀಗುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆಪ್ರಜ್ಞಾವಂತ ಮತದಾರರು ಪಕ್ಕ ಪಾಠವನ್ನು ನೀಡಿದ್ದಾರೆ ಮುಂಬರುವ ಎಲ್ಲಾ ಚುನಾವಣೆಯಲ್ಲಿ ನಮ್ಮ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಈ ಚುನಾವಣೆ ಗೆಲುವು ಸಹಕಾರಿಯಾಗಲಿದೆ ಎಂದರು.
ಈ ಸಮಯದಲ್ಲಿ ನಿಂಗಪ್ಪ ಬನ್ನಿ ಎಂಎಸ್ ದೊಡ್ಡಗೌಡರು ರಮೇಶ ದನದಮನಿ ಪ್ರವೀಣ ಬಾಳಿಕಾಯಿ ಜಗದೀಶಗೌಡ್ರು ಪಾಟೀಲ್ ಡಿ ವೈ ಹುನಗುಂದ ಪೂರ್ಣಾಜಿ ಖರಾಟೆ ಭೀಮಣ್ಣ ಯಂಗಾಡಿ ಪ್ರವೀಣ್ ಒಡವಿ ಹೊಸೂರು ಗಂಗಾಧರ ಮೆಣಸಿನಕಾಯಿ ಲಿಂಬಣ್ಣ ಮಡಿವಾಳರ ವಿಜಯಕುಮಾರ್ ಕುಂಬಾರ ಪ್ರವೀಣ ಬೊಮಲೆ ದುಂಡೇಶ್ ಕೊಟೀಗಿ ರಾಮು ನಾಯಕ್ ಮಂಜು ಗಜಕೋಶ ಸಂತೋಷ ಲಮಾಣಿ ವಿಶಾಲ ಬಟಕುರ್ಕಿ ಅಶ್ವಿನಿ ಅಂಕಲ ಕೋಟೆ ಶೋಭಾ ಮೆಣಸಿನಕಾಯಿ ಸೇರಿದಂತೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮುಖಂಡರು ಕಾರ್ಯಕರ್ತರು ಇದ್ದರು.