ಹೂವಿನ ಹಡಗಲಿ

ಸಾಧಕರಿಗೆ ಶಿಕ್ಷಕರೇ ಸ್ಪೂರ್ತಿ ಗ್ಲೋಬಲ್ ಎಕ್ಸೆಲೆನ್ಸ್‌ ಟೀಚರ್ ಅವಾರ್ಡ್‌

ಸಾಧಕರಿಗೆ ಶಿಕ್ಷಕರೇ ಸ್ಪೂರ್ತಿ ಗ್ಲೋಬಲ್ ಎಕ್ಸೆಲೆನ್ಸ್‌ ಟೀಚರ್ ಅವಾರ್ಡ್‌

         ಹೂವಿನ ಹಡಗಲಿ:ಅ. 28-  ಸಾಧಕರಿಗೆ ಶಿಕ್ಷಕರೇ ಸದಾ ಸ್ಪೂರ್ತಿ ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿ ಹನುಮಂತಪ್ಪ ಅಭಿಮತ ವ್ಯಕ್ತಪಡಿಸಿದರು.ತಾಲೂಕಿನ ಹೊಳಗುಂದಿ ಗ್ಲೋಬಲ್ ಪಿ ಯು ಕಾಲೇಜಿನಲ್ಲಿ ದಲಾಯತ್ ಸುಭಾನಸಾಬ್ ವೆಲ್ ಫೇರ್ ಎಜುಕೇಶನಲ್ ಟ್ರಸ್ಟ್‌ ವತಿಯಿಂದ ಬುಧವಾರ ಆಯೋಜಿಸಿದ್ದ ಗ್ಲೋಬಲ್ ಎಕ್ಸೆಲೆನ್ಸ್‌ ಟೀಚರ್ ಅವಾರ್ಡ್‌ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

         ಉತ್ತಮ ವಿದ್ಯಾರ್ಥಿಗಳ ನಿರ್ಮಾಣದಲ್ಲಿ ಶಿಕ್ಷಕರ ಪರಿಶ್ರಮದ ಅಪಾರ. ವೈದ್ಯ,ವಕೀಲ, ಇಂಜಿನಿಯರ್ ಮೊದಲಾದ ಕ್ಷೇತ್ರಗಳಲ್ಲಿ ಪ್ರತಿಭೆ ಅರಳಲು ಶಿಕ್ಷಕರೇ ಮೂಲ ಕಾರಣ ಎಂದು ತಿಳಿಸಿದರು.ಭಾರತೀಯ ಪರಂಪರೆಯಲ್ಲಿ ಗುರುವಿಗೆ ಮಹತ್ವದ ಸ್ಥಾನ ಇದೆ. ವರ್ತಮಾನದಲ್ಲಿ ಕೊರತೆಗಳ ಮಧ್ಯೆಯೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದಾರೆ ಎಂದರು.

              ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಾ ಕೆ ಕಳೆದ ವರ್ಷ ಕಲಬುರ್ಗಿ ವಿಭಾಗದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಲಭಿಸಿದೆ.ಈ ವರ್ಷವೂ ಪ್ರಥಮ ಸ್ಥಾನ ಬರುವ ನಿಟ್ಟಿನಲ್ಲಿ ಬೋಧನೆ ಅನುಪಾಲನೆ ಆಗಬೇಕು ಎಂದು ತಿಳಿಸಿದರು.ಕ್ಷೇತ್ರ ಸಮನ್ವಯಾಧಿಕಾರಿ ಎ ಕೋಟೆಪ್ಪ ಮುಖ್ಯ ಗುರುಗಳು ಸಹ ಶಿಕ್ಷಕರು ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಯೋಜನೆ ರೂಪಿಸಿ ಜಾರಿಗೆ ತರಲು ಮುಂದಾಗಿ ಎಂದು ಹೇಳಿದರು.

            ಪ್ರೌಢಶಾಲಾ ಮುಖ್ಯ ಗುರುಗಳ ಸಂಘದ ಅಧ್ಯಕ್ಷ ಸೂರ್ಯಕಾಂತ ಬಾರಿಕರ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಂ ಶಿವಲಿಂಗಪ್ಪ ಆಂಗ್ಲ ಭಾಷಾ ವೇದಿಕೆ ಅಧ್ಯಕ್ಷ ಚಂದ್ರ​‍್ಪ ಎಸ್ ಮಾತನಾಡಿದರು.ಸಂಸ್ಥೆಯ ಅಧ್ಯಕ್ಷ ಅಬ್ದುಲ್ ರಫಿ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರತಿ ವರ್ಷ ಶಿಕ್ಷಕರನ್ನು ಗೌರವಿಸುವ ಪರಂಪರೆ ಮುಂದುವರೆಸಲಾಗುವುದು ಎಂದು ತಿಳಿಸಿದರು.'

             ಪ್ರಾಚಾರ್ಯರಾದ ಥಾಮಸ್ ಸಂತೋಷ್, ಮಹೇಶ್ ಕುಮುತಿಮಠ, ಶಿಕ್ಷಣ ಸಂಯೋಜಕ ಸುನೀಲ್ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಸುರೇಶ ಅಂಗಡಿ ಉಪಸ್ಥಿತರಿದ್ದರು.ಉಪನ್ಯಾಸಕ ಎಂ ದಯಾನಂದ ,ಎಚ್ ಬಸವರಾಜ, ಸಮೃದ್ಧಿ ಜೈನರ, ಕೆ ಖೂಬ್ರಾ ನಿರ್ವಹಿಸಿದರು.ಹೂವಿನ ಹಡಗಲಿ ಮುಂಡರಗಿ ಹಗರಿಬೊಮ್ಮನಹಳ್ಳಿ ತಾಲೂಕುಗಳು ಸರ್ಕಾರಿ ಅನುದಾನಿತ ಅನುದಾನರಹಿತ ಮೊರಾರ್ಜಿ ಪ್ರೌಢಶಾಲೆಗಳ ಮುಖ್ಯ ಗುರುಗಳು ಹಾಗೂ ಆಂಗ್ಲ ಭಾಷಾ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. 


ಸುದ್ದಿ ಓದಿ