ಮಲ್ಲಿಗೆ ಯೋಗ ಟ್ರಸ್ಟ್ ನ ಸಾಧಕರಿಗೆ ರಾಷ್ಟ್ರೀಯ ಪ್ರಶಸ್ತಿ
ಲೋಕದರ್ಶನ ವರದಿ
ಹೂವಿನಹಡಗಲಿ : ಅ.28: ಇಲ್ಲಿನ ಮಲ್ಲಿಗೆ ಯೋಗ ಚಾರಿಟಬಲ್ ಟ್ರಸ್ಟ್ ನ ಎಂಟು ಜನ ಯೋಗ ಸಾಧಕರು ರೋಟರಿ ಬೆಂಗಳೂರು ಗ್ಲೋಬಲ್ ಯೋಗ ಸಂಘಟನೆಯ ‘ರಾಷ್ಟ್ರೀಯ ಯೋಗ ಶಿಕ್ಷಕ’ ಪ್ರಶಸ್ತಿಗೆ ಭಾಜನರಾಗಿದ್ದಾರೆಎಂದು ಅಧ್ಯಕ್ಷ ಕೋಡಿಹಳ್ಳಿ ಕೊಟ್ರೇಶ್ ತಿಳಿಸಿದ್ದಾರೆ.ನಿವೃತ್ತ ಶಿಕ್ಷಕರಾದ ಎ.ಅಶೋಕ, ಎಚ್.ಎಂ. ಶಿವಮೂರ್ತೆಯ್ಯ ಅವರು ‘ಜೀವಮಾನ ಯೋಗ ಸಾಧಕ’ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. ತನುಜಾ ಬಸವರಾಜ, ಕಮಲಾ ನಿಂಗಪ್ಪ, ರಿಹಾನಾ ಪರ್ವೀನ್ ಅವರಿಗೆ ‘ಯೋಗ ಜ್ಯೋತಿ’, ಎಚ್.ಲೋಕೇಶ ತಿಪ್ಪಾಪುರ, ಈಟಿ ಹನುಮೇಶ ಅವರಿಗೆ ‘ಯೋಗರತ್ನ’ ಹಾಗೂ ಶಿಕ್ಷಕ ಬಸವರಾಜ ಮಾಗಳದ ಅವರು ‘ಯೋಗಶ್ರೀ’ ಪ್ರಶಸ್ತಿ ಪಡೆದಿದ್ದಾರೆ.
ಬೆಂಗಳೂರು ಪುರಭವನದಲ್ಲಿ ಈಚೆಗೆ ಜರುಗಿದ ಕಾರ್ಯಕ್ರಮದಲ್ಲಿ ರಾಜ್ಯ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ, ಆರೋಗ್ಯ ಸಚಿವ ಯು.ಟಿ.ಖಾದರ್, ಹಿರಿಯ ಮುಖಂಡ ಬಸವರಾಜ ಪಾಟೀಲ್ ಸೇಡಂ, ರೋಟರಿ ಬೆಂಗಳೂರು ಗ್ಲೋಬಲ್ ಯೋಗ ಸಂಸ್ಥಾಪಕ ಡಾ. ಯೋಗಿ ದೇವರಾಜ, ಅಧ್ಯಕ್ಷ ಶರತ್ ಕುಮಾರ್ ಅವರು ಯೋಗ ಸಾಧಕನ್ನು ಸತ್ಕರಿಸಿದ್ದಾರೆ.‘ಮಲ್ಲಿಗೆ ಯೋಗ ಚಾರಿಟಬಲ್ ಟ್ರಸ್ಟ್ ಎರಡು ದಶಕದಿಂದ ಉಚಿತ ಯೋಗ ತರಬೇತಿ, ಆರೋಗ್ಯ, ನೈರ್ಮಲ್ಯ ಜಾಗೃತಿ ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸುವ ಕಾರ್ಯಕ್ರಮ ಸಂಘಟಿಸುತ್ತಿದೆ. ಯೋಗ ತರಬೇತಿಗಾಗಿ ಸಮರೆ್ಣ ಮಾಡಿಕೊಂಡಿರುವ ಸಾಧಕರಿಗೆ ಯೋಗ ಪುರಸ್ಕಾರ ದೊರೆತಿದೆ.ಅಭಿನಂದನೆ: ಎಲ್ಲಾ ಯೋಗ ಸಾಧಕರಿಗೆ ಟ್ರಸ್ಟ್ ಅಧ್ಯಕ್ಷ ಕೋಡಿಹಳ್ಳಿ ಕೊಟ್ರೇಶ್, ಸಂಚಾಲಕ ಗುರುರಾಜ ಹವಾಲ್ದಾರ್ ಇತರರು ಅಭಿನಂದಿಸಿದ್ದಾರೆ.