ಇಂಡಿ

ಕರ್ತವ್ಯದಲ್ಲಿ ಮಾನವಿಯತೆ ತೋರಿದ ಅಗ್ನಿಶಾಮಕ ಸಿಬ್ಬಂದಿ

ಕರ್ತವ್ಯದಲ್ಲಿ ಮಾನವಿಯತೆ ತೋರಿದ ಅಗ್ನಿಶಾಮಕ ಸಿಬ್ಬಂದಿ


ಲೋಕದರ್ಶನ ವರದಿ 

             ಇಂಡಿ 28: ಅಗ್ನಿಶಾಮಕ ಠಾಣೆ ಇಂಡಿಯ ಅಗ್ನಿಶಾಮಕ ಸಿಬ್ಬಂದಿಯವರು ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದಲ್ಲಿ ಹತ್ತಿದ ಬೆಂಕಿಯನ್ನು ನಂದಿಸಿಕೊಂಡು ವಿಜಯಪುರ ರಸ್ತೆ ಮಾರ್ಗವಾಗಿ ಬರುತ್ತಿರುವಾಗ ಇಂಡಿ ಪಟ್ಟಣದ ಡಿಗ್ಗಿ ಬಾವಿ ಹತ್ತಿರ ರಸ್ತೆ ಬದಿಯಲ್ಲಿ ಇಬ್ಬರು ಬೈಕ್ ಸವಾರರು ಅಪಘಾತಗೊಂಡು ಬಿದ್ದಿರುವ.  ಅದನ್ನು ಆಲಿಸಿದ  ಅಗ್ನಿಶಾಮಕ ಸಿಬ್ಬಂದಿಗಳು ವಾಹನದಿಂದ ಗಮನಿಸಿ ಅವರು ಅವರಿಗೆ ಸ್ಥಳದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಅಗ್ನಿಶಾಮಕ ಜಲವಾಹನ ದಲ್ಲಿ ಅವರನ್ನು ಕರೆತಂದು ಸಾರ್ವಜನಿಕ ಆಸ್ಪತ್ರೆ ಇಂಡಿಯ ತುರ್ತು  ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ಸಲುವಾಗಿ ದಾಖಲಿಸಲಾಗಿದೆ.

           ರಕ್ಷಣಾ ಕರ್ತವ್ಯದಲ್ಲಿದ್ದ ಸಿಬ್ಬಂದಿಯವರ ವಿವರ ಭೀಮಾಶಂಕರ್ ಎಂ ಬಿ ಠಾಣಾಧಿಕಾರಿ ರವರು ರಾಜು ರಾಥೋಡ್ ಪ್ರಮುಖ ಫೈರ್ ಫೈಟರ್ರವಿ ರಾಠೋಡ್ ಅಗ್ನಿಶಾಮಕ ಚಾಲಕ ಮಹಮ್ಮದ್ ಅಲಿ ಬಂತನಾಳ, ಶರಣಬಸಪ್ಪ ಹೊನವಾಡ ಫೈಯರ್ ಫೈಟರ್ ರವರ ಇವರ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.ಬೈಕ್ ಸವಾರರಾದ ಗಾಯಾಳುಗಳಾದ ಇಬ್ಬರು ಯುವಕರನ್ನು ಸ್ಥಳೀಯ ಇಂಡಿ ಪಟ್ಟಣದ ದೇಶಪಾಂಡೆ ತಾಂಡಾದ ದರ್ಶನ್ ಯುವರಾಜ್ ಪವಾರ್ 22 ವರ್ಷ  ಪ್ರೀತಂ ರಾಮು ರಾಥೋಡ್ 22 ವರ್ಷ ನಿವಾಸಿಗಳೆಂದು ಗುರುತಿಸಲಾಗಿದೆ. 


ಸುದ್ದಿ ಓದಿ