ಬೆಳಗಾವಿ

ಉತ್ತರ ಕರ್ನಾಟಕದ ಕಲಾವಿದರ ಪ್ರೋತ್ಸಾಹಕ್ಕೆ ‘ಅಂಚೆಗೆ ಹೋಗದ ಪತ್ರ’ ಚಿತ್ರ ಸಹಕಾರಿ: ಶಾಸಕ ಪಾಟೀಲ

ಉತ್ತರ ಕರ್ನಾಟಕದ ಕಲಾವಿದರ ಪ್ರೋತ್ಸಾಹಕ್ಕೆ ‘ಅಂಚೆಗೆ ಹೋಗದ ಪತ್ರ’ ಚಿತ್ರ ಸಹಕಾರಿ: ಶಾಸಕ ಪಾಟೀಲ


          ಬೆಳಗಾವಿ 28 :  ಉತ್ತರ ಕರ್ನಾಟಕದ ಭಾಗದ ಕಲಾವಿದರು ಸೇರಿ  ನಿರ್ಮಾಪಕರಾದ ಶಕುಂತಲಾ ಹುಲಮನಿ, ವೀಣಾ ಮುಂಗರವಾಡಿ ನೇತೃತ್ವದ ಅಂಚೆಗೆ ಹೋಗದ ಪತ್ರ ಚಲನಚಿತ್ರಕ್ಕೆ ಕಲಾಭಿಮಾನಿಗಳ ಪ್ರೋತ್ಸಾಹ ಅಗತ್ಯ ಎಂದು ಕಿತ್ತೂರ ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು. ನಗರದ ಕನ್ನಡ ಭವನದಲ್ಲಿ ಮಂಗಳವಾರದಂದು  ಅಂಚೆಗೆ ಹೋಗದ ಪತ್ರ ಕನ್ನಡ ಚಲನ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

          ಹಳ್ಳಿಯಲ್ಲಿ ಹಿಂದೆ ನಾಟಕ ಮಾಡಲು ಸಾಕಷ್ಟು ಪರಿಶ್ರಮದಿಂದ ಪಾತ್ರ ಮಾಡುತ್ತಿದ್ದರು ಈ ಗ ಕಾಲ ಬದಲಾಗಿದೆ ಎಷ್ಟೊಂದು ತಂತ್ರಜ್ಞಾನದಿಂದ ಬೆಳವಣಿಗೆಯಿಂದ ನಾಟಕ, ಚಲನಚಿತ್ರಗಳು ಉತ್ತಮವಾಗುತ್ತಿವೆ. ಉ.ಕ ಕಲಾವಿದರ ಚಿತ್ರಗಳು ಹೆಚ್ಚಾಗಬೇಕೆಂದರು. ಹಿರಿಯ ಸಾಹಿತಿ ಯ.ರು. ಪಾಟೀಲ ಮಾತನಾಡಿ,  ಬೆಳಗಾವಿ ಜಿಲ್ಲೆಯಲ್ಲಿ ಹಲವು ಪ್ರೇಕ್ಷಣೀಯ ಸ್ಥಳಗಳು, ಗುಹೆಗಳು,ಕೋಟೆ, ಕೊಟ್ಟಲುಗಳು ಚಲನಚಿತ್ರ ಮಾಡಲು ಹೇಳಿ ಮಾಡಿಸಿದ ಸ್ಥಳಗಳು ಇಲ್ಲಿ ಚಲನಚಿತ್ರ ಚೀತ್ರಿಕರಣವಾಗ ಬೇಕೆಂದರು.      

              ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ ಮಾತನಾಡಿ , ಅಂಚೆಗೆ ಹೋಗದ ಪತ್ರ  ಒಳ್ಳೆಯ ಚಿತ್ರವಾಗಿದೆ ಇದನ್ನು ಜನ ಮೆಚ್ಚಿ ಆಶೀರ್ವಾದ  ಮಾಡಬೇಕೆಂದರು.   ನಟ, ನಿರ್ದೇಶಕ ಪ್ರವೀಣ್ ಸುತಾರ ಮಾತನಾಡಿ,  ಗ್ರಾಮೀಣ ಶೈಲಿಯ ಕಥಾ ಹಂದರ, ಒಳ್ಳೆಯ ಹಾಡುಗಳ, ವಿನೂತನ ಪ್ರಯೋಗಗಳಿಂದ ಕೂಡಿದ ಚಲನಚಿತ್ರಕ್ಕೆ ಪ್ರೇಕ್ಷಕರ ಪ್ರೋತ್ಸಾಹ ಅಗತ್ಯವಾಗಿದೆ.ಉ.ಕ ಕಲಾವಿದರು ಸೇರಿ ನಿರ್ಮಿಸಿದ ಅಂಚೆಗೆ ಹೋಗದ ಪತ್ರ ನೋಡಿ ಪ್ರೋತ್ಸಾಹ ನೀಡಬೇಕೆಂದರು.   

           ಕಾರ್ಯಕ್ರಮದಲ್ಲಿ  ಯುವ ಮುಖಂಡ ಸಚಿನ ಪಾಟೀಲ, ನೇಸರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗಪ್ಪ ಅರಿಕೇರಿ, ನ್ಯಾಯವಾದಿ ಆರ್‌. ಸಿ.ಪಾಟೀಲ, ಬಾಳಾಸಾಹೇಬ ದೇಸಾಯಿ, ನಿರ್ಮಾಪಕರಾದ ಶಕುಂತಲಾ ಹುಲಮನಿ, ವೀಣಾ ಮುಂಗರವಾಡಿ, ಬಸವರಾಜ ತಿಗಡಿ, ಚೇತನ ಹಿರೇಮಠ, ಮಹಾಂತೇಶ ಹಲಗಿಮರಡಿ,ರಾಜೇಂದ್ರ ಪಾಟೀಲ,  ನಿವೃತ್ತ ಮುಖ್ಯೋಪಾದ್ಯಾಯ ಸಿದ್ದಯ್ಯ ಧಾರವಾಡ, ಮಂಜುನಾಥ ಹುಲಮನಿ, ಪ್ರಕಾಶ ಮುಂಗರವಾಡಿ, ನಾಯಕಿಯರಾದ ಸಹನಾ ಪ್ರಕಾಶ  ಹಾಗೂ ಸೌಮ್ಯ ಉಪಸ್ಥಿತರಿದ್ಧರು. 


ಸುದ್ದಿ ಓದಿ