ಬೆಳಗಾವಿ

ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲೂ ಚಾಂಪಿಯನ್; ವೈಭವಿ ಬುಡ್ರುಕ್‌ಗೆ ಮಹಿಳಾ ವೈಯಕ್ತಿಕ ಚಾಂಪಿಯನ್ ಗೌರವ

ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲೂ ಚಾಂಪಿಯನ್; ವೈಭವಿ ಬುಡ್ರುಕ್‌ಗೆ ಮಹಿಳಾ ವೈಯಕ್ತಿಕ ಚಾಂಪಿಯನ್ ಗೌರವ
Champions in both men’s and women’s categories; Vaibhavi Budruk earns the women’s individual champio

ಲೋಕದರ್ಶನ ವರದಿ 

        ಬೆಳಗಾವಿ 27 : ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ಅಕ್ಟೋಬರ್ 23ರಿಂದ 25ರವರೆಗೆ ನಡೆದ ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 10ನೇ ಅಂತರ್‌ಕಾಲೇಜು ಅಥ್ಲೆಟಿಕ್ ಮೀಟ್ 2026ಹಿ27ರಲ್ಲಿ ಕೆಎಲ್‌ಇ ಸಂಸ್ಥೆಯ ಲಿಂಗರಾಜ ಕಾಲೇಜು (ಸ್ವಾಯತ್ತ), ಬೆಳಗಾವಿ, ಸತತ 10ನೇ ಬಾರಿಗೆ ಸಮಗ್ರ ಚಾಂಪಿಯನ್‌ಶಿಪ್ ಗೆಲ್ಲುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ.

         ಕಾಲೇಜು ಒಟ್ಟು 212 ಅಂಕಗಳೊಂದಿಗೆ ಸಮಗ್ರ ಚಾಂಪಿಯನ್‌ಶಿಪ್ ಪಡೆಯುವುದರ ಜೊತೆಗೆ ಪುರುಷರ ಹಾಗೂ ಮಹಿಳೆಯರ ವಿಭಾಗಗಳಲ್ಲಿಯೂ ತಂಡದ ಚಾಂಪಿಯನ್‌ಶಿಪ್ ತನ್ನದಾಗಿಸಿಕೊಂಡಿದೆ. ಕ್ರೀಡಾಪಟುಗಳು 19 ಚಿನ್ನ, 9 ಬೆಳ್ಳಿ ಹಾಗೂ 3 ಕಂಚಿನ ಪದಕಗಳನ್ನು ಗೆದ್ದಿದ್ದು, ಮೂರು ಕೂಟ ದಾಖಲೆಗಳನ್ನು ನಿರ್ಮಿಸಿದ್ದಾರೆ. ಮಹಿಳಾ ವಿಭಾಗದಲ್ಲಿ ವೈಭವಿ ಬಾಲು ಬುಡ್ರುಕ್ ವೈಯಕ್ತಿಕ ಚಾಂಪಿಯನ್ ಗೌರವಕ್ಕೆ ಪಾತ್ರರಾಗಿದ್ದಾರೆ. 


ಸುದ್ದಿ ಓದಿ