ಬೆಳಗಾವಿ

ಹಾರೂಗೇರಿ ದೇವರಕೊಂಡಜ್ಜನವರ ವೇದಾಂತ ಪರಿಷತ್ ಸಂಪನ್ನ : ಇಂಚಲಶ್ರೀಗಳ 86ನೇ ಜನ್ಮದಿನ ನಿಮಿತ್ತ ತೊಟ್ಟಿಲೋತ್ಸವ

ಹಾರೂಗೇರಿ ದೇವರಕೊಂಡಜ್ಜನವರ ವೇದಾಂತ ಪರಿಷತ್ ಸಂಪನ್ನ : ಇಂಚಲಶ್ರೀಗಳ 86ನೇ ಜನ್ಮದಿನ ನಿಮಿತ್ತ ತೊಟ್ಟಿಲೋತ್ಸವ
Vedanta Parishat by Harugeri Devarakondajja Concludes; 'Thottilotsava' Held to Mark the 86th Birthda

ಲೋಕದರ್ಶನ ವರದಿ 

          ಹಾರೂಗೇರಿ 27: ಸಮರ್ಥ ಗುರುವಿನಲ್ಲಿ ಪರಿಪೂರ್ಣತೆಯ ಶಕ್ತಿಯಿದೆ. ವೇದಾಂತ ಪರಿಷತ್‌ಗಳ ಮೂಲಕ ಲಕ್ಷ್ಯಾಂತರ ಭಕ್ತರಿಗೆ ಆಧ್ಯಾತ್ಮ ಜ್ಞಾನವನ್ನು ನೀಡಿ, ಧರ್ಮ, ಸನ್ಮಾರ್ಗದ ದಾರಿ ತೋರುವ ಡಾ.ಶಿವಾನಂದ ಭಾರತಿ ಶ್ರೀಗಳು ಪರಿಪೂರ್ಣ ಜ್ಞಾನಿಯಾಗಿದ್ದಾರೆ ಎಂದು ಹಂಪಿ ಹೇಮಕೂಟದ ವಿದ್ಯಾನಂದ ಭಾರತಿ ಸ್ವಾಮೀಜಿ ಹೇಳಿದರು. 

        ಇಲ್ಲಿನ ಶ್ರೀಗುರು ಚನ್ನವೃಷಭೇಂದ್ರ ದೇವರಕೊಂಡಜ್ಜ ಮಹಾರಾಜರ ಲೀಲಾಮಠದಲ್ಲಿ ಸೋಮವಾರ ರಾತ್ರಿ ನಡೆದ ಸದ್ಗುರು ಡಾ.ಶಿವಾನಂದ ಭಾರತಿ ಮಹಾಸ್ವಾಮಿಗಳ 86ನೇ ಜಯಂತ್ಯೋತ್ಸವ ನಿಮಿತ್ತ ತೊಟ್ಟಿಲೋತ್ಸವ ಹಾಗೂ 43ನೇ ವೇದಾಂತ ಪರಿಷತ್ ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು. 

           ವೇದಾಂತ ಪರಿಷತ್ತಿನ ದಿವ್ಯ ಸಾನಿಧ್ಯ ವಹಿಸಿದ್ದ ಸದ್ಗುರು ಡಾ.ಶಿವಾನಂದ ಭಾರತಿ ಮಹಾಸ್ವಾಮಿಗಳು ಸಮಾರೋಪ ಆಶೀರ್ವಚನ ನೀಡುತ್ತ ಬದುಕು ಪವಿತ್ರ, ದಿವ್ಯತ್ವದಿಂದ ಕೂಡಿರಲು ಮಹಾತ್ಮರ ದರ್ಶನ ಭಾಗ್ಯದಿಂದ ಸಾಧ್ಯವಿದೆ. ಆಧ್ಯಾತ್ಮದಿಂದ ಸ್ವರ್ಗ ಸೃಷ್ಠಿಸುವ ಸಾಮರ್ಥ್ಯ ಮಹಾತ್ಮನಲ್ಲಿದೆ. ಒಳ್ಳೆಯದನ್ನು ಕೇಳುತ್ತ, ಮಾಡುತ್ತ, ನೀಡುತ್ತ ಅಂತರಂಗವನ್ನು ಪರಿಶುದ್ಧವಾಗಿಟ್ಟುಕೊಳ್ಳಬೇಕು.

         ಮನಸ್ಸನ್ನು ಪರಿವರ್ತನೆ ಮಾಡಿ, ಅವಗುಣಗಳನ್ನು ಕಳೆಯುವ ಶಕ್ತಿ ಮಹಾತ್ಮರಲ್ಲಿದೆ ಎಂದು ಶ್ರೀಗಳು ಹೇಳಿದರು. ಶ್ರೀಗುರು ಚನ್ನವೃಷಭೇಂದ್ರ ದೇವರಕೊಂಡಜ್ಜನವರ ಮಹಾರಾಜರ ಲೀಲಾಮಠದ ಸದ್ಭಕ್ತರು ಹಾಗೂ ಪೂಜ್ಯರು ಡಾ.ಶಿವಾನಂದ ಭಾರತಿ ಸ್ವಾಮೀಜಿಯರವ 86ನೇ ಜಯಂತ್ಯೋತ್ಸವ ನಿಮಿತ್ತ ತೊಟ್ಟಿಲಲ್ಲಿ ತೂಗಿ ಹುಟ್ಟುಹಬ್ಬ ಆಚರಿಸಿದರು. ಶ್ರೀಗಳನ್ನು ತೊಟ್ಟಿಲಲ್ಲಿ ತೂಗುತ್ತ ಜೋಗುಳ ಪದಗಳನ್ನು ಹಾಡಿದರು.

            ನಂತರ ಶ್ರೀಗಳಿಗೆ ಸುವರ್ಣ ಕೀರೀಟ ಧಾರಣೆ, ಮಹಾಪೂಜೆ ಹಾಗೂ ಮಹಾಮಂಗಳಾರತಿ ನಡೆಯಿತು.  ಈವೇಳೆ ಶ್ರೀಮಠ ಹಾಗೂ ವೇದಾಂತ ಪರಿಷತ್‌ಗೆ ತನು, ಮನ, ಧನದಿಂದ ಸಹಾಯ ಮಾಡಿದ ಸದ್ಭಕ್ತರು, ಸಮಾಜದ ಗಣ್ಯರು ಹಾಗೂ ಜನಪ್ರತಿನಿಧಿಗಳನ್ನು ಶ್ರೀಮಠದ ವತಿಯಿಂದ ಸತ್ಕರಿಸಲಾಯಿತು. ನಂತರ ನಾನಾ ಕಲಾಮೇಳಗಳಿಂದ ರಾತ್ರಿಪೂರ್ತಿ ಡೊಳ್ಳಿನ ಪದಗಳು ನಡೆದವು. ಇಂಚಲದ ಪೂರ್ಣಾನಂದ ಭಾರತಿ ಸ್ವಾಮೀಜಿ, ಮಾತೋಶ್ರೀ ನೀಲಮ್ಮ ತಾಯಿ, ಶಿವಾನಂದ ಸ್ವಾಮೀಜಿ, ಸಚ್ಚಿದಾನಂದ ಸ್ವಾಮೀಜಿ, ಡಾ.ಅಭಿನವ ಬ್ರಹ್ಮಾನಂದ ಸ್ವಾಮೀಜಿ,

            ಮಾತೋಶ್ರೀ ಅನುಸೂಯಾ ತಾಯಿ, ನಿಂಗಾನಂದ ಸ್ವಾಮೀಜಿ, ಮಲ್ಲೇಶ್ವರ ಶರಣರು, ಹುಮಾಯೂನ ಇಬ್ರಾಹಿಂ ಸಾಹೇಬರು, ಬಿ.ಎಂ.ಮುಜಾವರ ಸಾಹೇಬರು ಆಶೀರ್ವಚನ ನೀಡಿದರು. ಕಸಾಪ ತಾಲೂಕು ಅಧ್ಯಕ್ಷ ಈರನಗೌಡ ಪಾಟೀಲ, ಶ್ರೀಮಠದ ಸದ್ಭಕ್ತರಾದ ಶಿವಗೊಂಡ ಧರ್ಮಟ್ಟಿ, ವಿಠ್ಠಲರಾವ ಬಂತಿ, ನೇಮಣ್ಣ ಕೊತ್ತಲಗಿ, ಬಾಬು ಪರಮಗೌಡರ, ರಾಜು ಕರ್ಣವಾಡಿ, ವಿಜಯ ಬಂತಿ, ರಾಘವೇಂದ್ರ ದೇಶಪಾಂಡೆ,

           ಶಶಿಧರ ಶಿಂಗೆ, ಗೋಪಾಲ ಧರ್ಮಟ್ಟಿ, ಜ್ಯೋತೆಪ್ಪ ಉಮರಾಣಿ, ಸುರೇಶ ಧರ್ಮಟ್ಟಿ, ಮಲಗೌಡ ಉಮರಾಣಿ, ಚನ್ನಬಸು ಸದಲಗಿ, ಭಗವಂತ ಸೂರಣ್ಣವರ, ತಮ್ಮಣ್ಣಿ ಕುರಿ, ಶ್ರೀಶೈಲಗೌಡ ಉಮರಾಣಿ, ಲಾಲಸಾಬ ಜಮಾದಾರ, ಸಿದ್ದಪ್ಪ ಗವಣ್ಣವರ, ಅಪ್ಪಾಸಾಬ ಹಿಡಕಲ್ಲ, ಮಹಾವೀರ ಅಸ್ಕಿ, ಯಮನಪ್ಪ ಭಂಡಗಾರ ಮೊದಲಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ