ಹಾವೇರಿ

ಮಕ್ಕಳ ದಿನಾಚರಣೆ ಅಂಗವಾಗಿ ವಿವಿಧ ಸ್ಪರ್ಧೆಗಳು

ಮಕ್ಕಳ ದಿನಾಚರಣೆ ಅಂಗವಾಗಿ ವಿವಿಧ ಸ್ಪರ್ಧೆಗಳು

ಲೋಕದರ್ಶನ ವರದಿ 


ಹಾವೇರಿ:ಅ.27(ಕರ್ನಾಟಕ ವಾರ್ತೆ):  ಬೆಂಗಳೂರು ಬಾಲಭವನ ಸೊಸೈಟಿ,  ಹಾವೇರಿ ಜಿಲ್ಲಾಡಳಿತ, ಜಿಲ್ಲಾ ಸಹಯೋಗದಲ್ಲಿ  ಮಕ್ಕಳ ದಿನಾಚರಣೆ ಅಂಗವಾಗಿ 09 ರಿಂದ 16 ವರ್ಷದೊಳಗಿನ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು   ನವೆಂಬರ್ 4 ರಂದು  ಹಾವೇರಿ ಜಿಲ್ಲಾ ಬಾಲಭವನ ಸೊಸೈಟಿಯಲ್ಲಿ ಆಯೋಜಿಸಲಾಗಿದೆ.   

ಸೃಜನಾತ್ಮಕ ಕಲೆ- ಚಿತ್ರಕಲೆ,ಜೇಡಿ ಮಣ್ಣಿನ ಕಲೆ,ಕರಕುಶಲ ಕಲೆ (ಮೂರರಲ್ಲೂ ಕಡ್ಡಾಯವಾಗಿ ಭಾಗವಹಿಸಬೇಕು),ಸೃಜನಾತ್ಮಕ ಬರವಣಿಗೆ -ಕಥೆ,ಕವನ,ಪ್ರಬಂಧ ಬರೆಯುವುದು (ಮೂರರಲ್ಲೂ ಕಡ್ಡಾಯವಾಗಿ ಭಾಗವಹಿಸಬೇಕು),ಸೃಜನಾತ್ಮಕ ಪ್ರದರ್ಶನ ಕಲೆ- ಶಾಸ್ತ್ರೀಯ ನೃತ್ಯ, ಜಾನಪದ ನೃತ್ಯ, ಕರ್ನಾಟಕ ಹಾಗೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಯಕ್ಷಗಾನ, ವಾಧ್ಯ ಸಂಗೀತ,  ಯಕ್ಷಿಣಿ ಪ್ರದರ್ಶನ, ವಾಧ್ಯ ಸಂಗೀತ, ಏಕಪಾತ್ರಾಭಿನಯ, ಯೋಗನೃತ್ಯ, ಮ್ಯಾಜಿಕ್ (ಯಾವುದಾದರೊಂದು ಕಲೆಯಲ್ಲಿ ಮಾತ್ರ ಪ್ರದರ್ಶಿಸಲು ಅವಕಾಶವಿರುತ್ತದೆ ಗುಂಪು ಪ್ರದರ್ಶನಕ್ಕೆ ಅವಕಾಶವಿಲ್ಲ).  

ವಿಜ್ಞಾನದಲ್ಲಿ ನೂತನ ಆವಿಷ್ಕಾರ- ವಿಜ್ಞಾನಕ್ಕೆ ಸಂಬಂಧಪಟ್ಟಂತೆ ಒಂದು ವಿಷಯದ ಬಗ್ಗೆ ಮಾದರಿ ಪ್ರದರ್ಶನ ಹಾಗೂ ವಿವರಣೆ ಮತ್ತು ಪ್ರಶ್ನೆಗಳಿಗೆ ಉತ್ತರ ನೀಡಬೇಕು ಹಾಗೂ ಭಾಷಣ ಸ್ಪಧೆ-  ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಬಡವರ ಬದುಕಿನಲ್ಲಿ ಸಕಾರಾತ್ಮಕ ಬೆಳವಣಿಗೆ ಈ ವಿಷಯದ ಕುರಿತು ಭಾಷಣ ಸ್ಪರ್ಧೆ ಇರುತ್ತದೆ.  

ಈ ಮೇಲಿನ ಸ್ಪರ್ಧೇಗಳನ್ನು ಆಯೋಜಿಸಲಾಗುವುದು,  ಭಾಷಣ ಸ್ಪರ್ಧೆ ಹೊರತುಪಡಿಸಿ ನಾಲ್ಕು  ಪ್ರತಿ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವೀತಿಯ ಸ್ಥಾನ ಗಳಿಸಿದ 08 ಮಕ್ಕಳಿಗೆ ರಾಜ್ಯ ಮಟ್ಟದ ಕಲಾಶ್ರೀ ಪ್ರಶಸ್ತಿ ಆಯ್ಕೆ ಶಿಬಿರದಲ್ಲಿ ಭಾಗವಹಿಸಲು ಕರೆದುಕೊಂಡು ಹೋಗಲಾಗುವುದು. ಅಂಗವಿಕಲ ಹಾಗೂ ಬುಡಕಟ್ಟು ಜನಾಂಗದ ಮಕ್ಕಳಿಗೆ ವಿಶೇಷ ಆಧ್ಯತೆ ನೀಡಲಾಗುವುದು. 

ಆಸಕ್ತ ಮಕ್ಕಳು ದಿನಾಂಕ 03-11-2026ರ ಸಂಜೆ 5 ಗಂಟೆಯ ಒಳಗಾಗಿ ಹೆಸರು ನೊಂದಾಯಿಸಬೇಕು. ಹೆಚ್ಚಿನ ಮಾಹಿತಿಗಾಗಿ  ಹಾವೇರಿ ಜಿಲ್ಲಾ ಬಾಲಭವನ ಕಾರ್ಯಕ್ರಮ ಸಂಯೋಜಕ ಸೋಮನಗೌಡ ಗಾಳಿಗೌಡ್ರ ಮೊ.8970727355,  ಸಹಾಯಕ  ರಾಮು ಪಾಟೀಲ್  ಅಥವಾ ಮೊ.6361704213  ಸಂಪರ್ಕಿಸಬಹುದೆಂದು  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ಹಾಗೂ ಜಿಲ್ಲಾ ಬಾಲಭವನ ಸೊಸೈಟಿ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ