ಬೆಳಗಾವಿ

ಗುರ್ಲಾಪೂರ ಶಾಲೆಯಲ್ಲಿ ಆದಿಕವಿ ವಾಲ್ಮೀಕಿ ಮಹರ್ಷಿ ಜಯಂತಿ ಆಚರಣೆ

ಗುರ್ಲಾಪೂರ ಶಾಲೆಯಲ್ಲಿ ಆದಿಕವಿ ವಾಲ್ಮೀಕಿ ಮಹರ್ಷಿ ಜಯಂತಿ ಆಚರಣೆ


              ಗುರ್ಲಾಪೂರ 27 : ಸ್ಥಳೀಯ ಪಿಎಂಶ್ರೀ ಕರ್ನಾಟಕ ಪಬ್ಲಿಕ್ ಶಾಸಕರ ಮಾದರಿ ಶಾಲೆ ಗುರ್ಲಾಪೂರದಲ್ಲಿ ಇಂದು ದಿನಾಂಕ 26 ಅಕ್ಟೋಬರ 2026 ರಂದು ಆದಿ ಕವಿ ವಾಲ್ಮೀಕಿ ಮಹರ್ಷಿ ಇವರ ಜಯಂತಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷರು ಎಲ್ ಪಿ ನೇಮಗೌಡರ ಅಧ್ಯಕ್ಷತೆ ವಹಿಸಿ ಆದಿ ಕವಿ ವಾಲ್ಮೀಕಿ ಮಹರ್ಷಿ ಇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

          ಬಿ ವಾಯ್ ಮೋಮಿನ್ ಗುರುಗಳು ಮಕ್ಕಳಿಗೆ ವಾಲ್ಮೀಕಿ ಜಯಂತಿಯು ಸಂಸ್ಕೃತ, ಸಾಹಿತ್ಯ, ಆಧ್ಯಾತ್ಮಿಕ ಭೋಧನೆಗಳು ಮತ್ತು ಭಾರತೀಯ ಸಾಂಸ್ಕೃತಿಕ ಪರಂಪರೆಗೆ ಮಹರ್ಷಿ ವಾಲ್ಮೀಕಿ ನೀಡಿದ ಕೊಡುಗೆಯನ್ನು ಸ್ಮರಿಸುವಂತಹ ವಿಶೇಷ ದಿನವಾಗಿದೆಯನ್ನುತ್ತಾ. ಮಹರ್ಷಿ ವಾಲ್ಮೀಕಿಯವರು ಸಮಾಜಕ್ಕೆ ಪುರುಷಾರ್ತದ ಅರ್ಥ ಸಾರಿದ ಮಹಾಕವಿ ಎಂದು ಹೇಳಿದರು.  

            ಕಾರ್ಯಕ್ರಮದಲ್ಲಿ ಎ ಡಿ ಪಡಗಾನೂರ, ಎಸ್ ಬಿ ದರೂರ, ಎಲ್ ಆರ್ ಸಾಲಿಮಠ, ಶ್ರೀಕಾಂತ ನಾಯಿಕ, ಕವಿತಾ ಕಟಗಿ, ಜ್ಯೋತಿ ಕಲ್ಯಾಣಿ, ಗಂಗಾ ಕಂಬಾರ, ಸವಿತಾ, ಕುಮಾರಿ ಪ್ರೇಮಾ ಹಳ್ಳೂರ ಹಾಗೂ ಮಕ್ಕಳು ಭಾಗವಹಿಸಿದ್ದರು. ಕಾರ್ಯಕ್ರಮದ ಸ್ವಾಗತ ಹಾಗೂ ನಿರೂಪಣೆಯನ್ನು ಡಿ ವಿ ನಡೋನಿ ನೇರವೆರಿಸಿದರು. 


ಸುದ್ದಿ ಓದಿ