ಬೆಳಗಾವಿ

ಡಾ. ಹಿರೇಮಠ ಅವರಿಗೆ ಕೃಷಿ ವಿಸ್ತರಣೆಯಲ್ಲಿ ಶ್ರೇಷ್ಠ ಸಾಧನೆ ಪ್ರಶಸ್ತಿ

ಡಾ. ಹಿರೇಮಠ ಅವರಿಗೆ ಕೃಷಿ ವಿಸ್ತರಣೆಯಲ್ಲಿ ಶ್ರೇಷ್ಠ ಸಾಧನೆ ಪ್ರಶಸ್ತಿ

ಲೋಕದರ್ಶನ ವರದಿ 

   ನೆಸರಗಿ 28 : ಏಷಿಯನ್ ಪಿಜಿಪಿಆರ್ ಸೊಸೈಟಿ ಫಾರ್ ಸಸ್ಟೆನೇಬಲ್ ಅಗ್ರಿಕಲ್ಚರ್ ಇವರು ಆಯೋಜಿಸಿದ 9ನೇಯ ಏಷಿಯನ್ ಪಿಜಿಪಿಆರ್ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಬಯೋಎಜಿ ಇನ್‌ಪುಟ್ಸ್‌ (ಬಯೋಸೊಲ್ಯುಷನ್ಸ್‌) ಫಾರ್ ದ್ ಗ್ರೀನ್ ರೆವೊಲ್ಯುಷನ್ಸ್‌ ಇವರು ಡಾ. ಎಸ್‌. ಎಸ್‌. ಹಿರೇಮಠ, ವಿಜ್ಞಾನಿಗಳು, ಸಸ್ಯ ಸಂರಕ್ಷಣೆ ವಿಭಾಗದಲ್ಲಿ ರೈತರ ಅಭಿವೃದ್ಧಿಗಾಗಿ ಸಲ್ಲಿಸಿದ ಸೇವೆ, ವಿಸ್ತರಣಾ ಚಟುವಟಿಕೆಗಳ ಧನಾತ್ಮಕ ಪ್ರಭಾವ ಹಾಗೂ ಗಣನೀಯ ಸೇವೆಗಳನ್ನು ಗುರುತಿಸಿ ದಿನಾಂಕ 24.10.2026 ರಂದು ಪಣಜಿ, ಗೋವದಲ್ಲಿ ನಡೆದ ಸಮ್ಮೇಳನದಲ್ಲಿ ಕೃಷಿ ವಿಸ್ತರಣೆಯಲ್ಲಿ ಶ್ರೇಷ್ಠ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಐಸಿಎಆರ್‌-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಾಧ್ಯಕ್ಷ ಹಾಗೂ ಕೆಎಲ್‌ಇ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕ ಬಿ. ಆರ್‌. ಪಾಟೀಲ, ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಮಂಜುನಾಥ ಚೌರಡ್ಡಿ ಮತ್ತು ಎಲ್ಲ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ. 


ಸುದ್ದಿ ಓದಿ