ಗದಗ

ಒಡೆದು ಹೋಗುತ್ತಿರುವ ಜಗತ್ತಿನಲ್ಲಿ ಜೀವಂತವಾಗಿದೆ ಮನುಷ್ಯತ್ವ: ಗದಗ-ಹುಬ್ಬಳ್ಳಿ ತೋರಿದ ಅಪೂರ್ವ ಜೀವಕಾರುಣ್ಯಕ್ಕೆ ಕೃಷ್ಣಾ ಎಚ್‌. ಹಡಪದ ಸಲಾಂ!

ಒಡೆದು ಹೋಗುತ್ತಿರುವ ಜಗತ್ತಿನಲ್ಲಿ ಜೀವಂತವಾಗಿದೆ ಮನುಷ್ಯತ್ವ: ಗದಗ-ಹುಬ್ಬಳ್ಳಿ ತೋರಿದ ಅಪೂರ್ವ ಜೀವಕಾರುಣ್ಯಕ್ಕೆ ಕೃಷ್ಣಾ ಎಚ್‌. ಹಡಪದ ಸಲಾಂ!
Humanity remains alive in a fractured world: A salute from Krishna H. Hadapad to the extraordinary


ಗದಗ 28: ತಾಂತ್ರಿಕವಾಗಿ ಮುಂದುವರಿಯುತ್ತಿರುವ, ಎಲ್ಲವೂ ಯಾಂತ್ರಿಕವಾಗುತ್ತಿರುವ ಇಂದಿನ ಆಧುನಿಕ ಯುಗದಲ್ಲಿ ಮನುಷ್ಯತ್ವ ಮತ್ತು ಒಳ್ಳೆತನ ಇನ್ನು ಸತ್ತಿಲ್ಲ ಎಂಬುದನ್ನು ಉತ್ತರ ಕರ್ನಾಟಕದ ಹೆಮ್ಮೆಯ ಅವಳಿ ನಗರಗಳಾದ ಗದಗ ಮತ್ತು ಹುಬ್ಬಳ್ಳಿಯ ಸಾರ್ವಜನಿಕರು ಸಾಬೀತುಪಡಿಸಿದ್ದಾರೆ. ತೀವ್ರವಾದ ಲಿವರ್ ಹಾಗೂ ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇತ್ತೀಚೆಗೆ ಇಹಲೋಕ ತ್ಯಜಿಸಿದ ಗದಗ ನಗರದ ಗಂಗಾಪುರಪೇಟೆ ಓಣಿಯ 22 ವರ್ಷದ ಯುವತಿ ವರ್ಷಾ ತಿಪ್ಪಣ್ಣ ನೀಲಗುಂದ ಅವರ ಜೀವ ಉಳಿಸಲು ಇಡೀ ಸಮಾಜವೇ ಜಾತಿ, ಧರ್ಮ, ಭಾಷೆಯ ಬೇಧ ಮರೆತು ಒಂದಾಗಿ ನಿಂತ ರೀತಿ ಇಡೀ ನಾಡಿಗೆ ಮತ್ತು ದೇಶಕ್ಕೆ ಒಂದು ಮಹತ್ತರವಾದ ಮಾನವೀಯ ಸಂದೇಶವನ್ನು ಸಾರಿದೆ ಎಂದು ಗದಗಿನ ಖ್ಯಾತ ಸಾಮಾಜಿಕ ಕಾರ್ಯಕರ್ತರಾದ ಕೃಷ್ಣಾ ಎಚ್‌. ಹಡಪದ ಅವರು ಅತ್ಯಂತ ಭಾವನಾತ್ಮಕವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.     ಬಡತನದ ಬೇಗೆಯಲ್ಲಿ ಬೆಂದಿದ್ದ ಕುಟುಂಬಕ್ಕೆ ಮಗಳ ದುಬಾರಿ ಲಿವರ್ ಚಿಕಿತ್ಸೆಯ ವೆಚ್ಚ ಭರಿಸುವುದು ಅಸಾಧ್ಯವಾಗಿತ್ತು. ಬೆಂಗಳೂರಿನ ಸಂಕಲ್ಪ ಹಾಗೂ ಬಿಎಂಡಿಆರ್ಸಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಪರದಾಡುತ್ತಿದ್ದಾಗ, ಈ ವಿಷಯ ತಿಳಿದು ತಕ್ಷಣವೇ ನೆರವಾಗಲೇಬೇಕು ಎಂದು ಕಂಕಣಬದ್ಧರಾಗಿ ನಿಂತಿದ್ದು ಕ್ರಾಂತಿ ಸೇನಾ ಸಂಘಟನೆ. 

ಸುದ್ದಿ ಓದಿ