ಇಂಡಿ

ಮೈಸೂರು ದಸರಾ ಕುಸ್ತಿಯಲ್ಲಿ ಸುನೀಲ ತಳಕೇರಿಗೆ ಪ್ರಥಮ ಸ್ಥಾನ

ಮೈಸೂರು ದಸರಾ ಕುಸ್ತಿಯಲ್ಲಿ ಸುನೀಲ ತಳಕೇರಿಗೆ ಪ್ರಥಮ ಸ್ಥಾನ


ಲೋಕದರ್ಶನ ವರದಿ  

ಇಂಡಿ 25 :  ನಾಡಹಬ್ಬ ಮೈಸೂರು ದಸರಾ ಕುಸ್ತಿ ಸ್ಪರ್ಧೆಯ 48 ಕೆ.ಜಿ. ವಿಭಾಗದಲ್ಲಿ ಇಂಡಿ ತಾಲ್ಲೂಕಿನ ಸಂಗೋಗಿ ಗ್ರಾಮದ ಸುನೀಲ ಮುತ್ತಪ್ಪ ತಳಕೇರಿ ಪ್ರಥಮ ಸ್ಥಾನ ಪಡೆದು ವಿಜಯಪುರ ಜಿಲ್ಲೆ ಹಾಗೂ ಇಂಡಿ ತಾಲ್ಲೂಕಿಗೆ ಕೀರ್ತಿ ತಂದಿದ್ದಾನೆ. ಬಡತನದ ನಡುವೆಯೂ ಗ್ರಾಮೀಣ ಭಾಗದಲ್ಲಿ ಅರಳಿದ ಈ ಪ್ರತಿಭೆಯನ್ನು ಜೆಡಿಎಸ್ ಮುಖಂಡರಾದ ಬಿ.ಡಿ. ಪಾಟೀಲರು ಗೌರವಿಸಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಬಿ.ಡಿ. ಪಾಟೀಲರು,


ಗ್ರಾಮೀಣ ಭಾಗದ ಬಾಲಕನ ಈ ಸಾಧನೆ ತಾಲ್ಲೂಕಿನ ಯುವಜನತೆಗೆ ಸ್ಫೂರ್ತಿಯಾಗಿದೆ. ಮುಂದಿನ ದಿನಗಳಲ್ಲಿ ಈತ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ನಾಡಿಗೆ ಕೀರ್ತಿ ತರಲಿ ಎಂದು ಹಾರೈಸಿದರು.ಈ ಸಂದರ್ಭದಲ್ಲಿ ಮಾಜಿ ಪುರಸಭಾ ಸದಸ್ಯ ಸಿದ್ದು ಡಂಗಾ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಶಿವಾನಂದ ಅಂಗಡಿ, ಹಣಮಂತ ಬೀಸನಾಳ, ಹೀರಗಪ್ಪ ಮದರಿ, ಹೀರಗಪ್ಪ ಬೂದಗುಳ್ಳಿ, ಶಿವಪ್ಪ ತಳಕೇರಿ, ಚನ್ನಪ್ಪ ಗುಣಕಿ, ಚಂದು ಪೂಜಾರಿ, ಹಿರಹಪ್ಪ ತಳಕೇರಿ ಹಾಗೂ ರಮೇಶ ಹಂಜಗಿ ಉಪಸ್ಥಿತರಿದ್ದರು. 


ಸುದ್ದಿ ಓದಿ