ಬೆಳಗಾವಿ

ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಮಂಜುನಾಥಗೆ ಹುಟ್ಟೂರಿನಲ್ಲಿ ಅದ್ಧೂರಿ ಸ್ವಾಗತ

ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಮಂಜುನಾಥಗೆ ಹುಟ್ಟೂರಿನಲ್ಲಿ ಅದ್ಧೂರಿ ಸ್ವಾಗತ



ಘಟಪ್ರಭಾ 25 : ಭಾರತೀಯ ಸೇನೆಯಲ್ಲಿ  17 ವರ್ಷ ಗಳ ಕಾಲ ಸೇವೆ ತಾಯ್ನಾಡಿಗೆ ಮರಳಿದ ಯೋಧ ಲೆಪ್ಟೆನೆಂಟ ಕರ್ನಲ್ ಮಂಜುನಾಥ ಹಣಮಂತ ಶಾಸ್ತ್ರೀ (ಭಟ್ಟರ) ಅವರನ್ನು ಘಟಪ್ರಭಾದ ರೈಲು ನಿಲ್ದಾಣದಲ್ಲಿ ಭವ್ಯವಾಗಿ ಸ್ವಾಗತ ಮಾಡಿ ಅವರ ಮನೆಯ ವರೆಗೆ ತೆರೆದ ವಾಹನ ಮೆರವಣಿಗೆ ಮಾಡಿ  ಅದ್ದೂರಿಯಾಗಿ ಸ್ವಾಗತ ಮಾಡಲಾಯಿತು. ಘಟಪ್ರಭಾದ ಸಾಮಾಜಿಕ ಧಾರ್ಮಿಕ ಮುಖಂಡರಾದ  ಹಣಮಂತ ಶಾಸ್ತ್ರೀಯವರ  ಸುಪುತ್ರನಾದ ಮಂಜುನಾಥ ಭಟ್ಟರ ಅವರು 2009  ರಲ್ಲಿ ಭಾರತೀಯ ಸೇನೆಗೆ ಸೇರೆ​‍್ಡ ಆಗಿ ಬೆಂಗಳೂರಿನಲ್ಲಿ ತರಬೇತಿ ಪಡೆದು ನಂತರಮಣಿಪುರ ಅಲಹಾಬಾದ್ ಪ್ರಯಾಗ ರಾಜ, ಡೆಹ್ರಾಡೂನ್ ಛತ್ತೀಸ್ ಗಡ್ ಮೀರತ್, ಕೋಟಾ (ರಾಜಸ್ಥಾನ) ಮತ್ತು ಪಾಕಿಸ್ತಾನ ದ ಗಡಿಯಲ್ಲಿ ಸೇವೆ ಸಲ್ಲಿಸಿದ ಅವರು 2026 ರಲ್ಲಿ ನಿವೃತ್ತ ರಾಗಿ  ಇತ್ತೀಚೆಗೆ ಘಟಪ್ರಭಾ ನಗರಕ್ಕೆ ಮರಳಿ ಬಂದಾಗ  ಅವರ ಪಾಲಕರು ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ ಜೈಂಟ್ಸ್‌ ಗ್ರೂಪ್ ಘಟಪ್ರಭಾ ಮತ್ತು ಊರಿನ ಎಲ್ಲಾ ನಾಗರೀಕರು ಭವ್ಯವಾದ ಮೆರವಣಿಗೆ ಮೂಲಕ ಸ್ವಾಗತ ಮಾಡಿದರು. ಈ ಸಂದರ್ಭದಲ್ಲಿ ಹಿರಿಯರಾದ ಸುರೇಶ ಪಾಟೀಲ, ಗುರುಬಸಯ್ಯ ಕಪುರಮಠ, ಬಸವರಾಜ ಕತ್ತಿ, ಮಲ್ಲು ಮಾನಗಾವಿ, ಶ್ರೀಕಾಂತ ಮಹಾಜನ್ ಸೇರಿದಂತೆ ನಿವೃತ್ತ ಸೈನಿಕರು, ಕುಟುಂಬದ ಸದಸ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ