ಬೆಳಗಾವಿ

ಇಂದಿನಿಂದ ಗುರ್ಲಾಪೂರ ಕ್ರಾಸ್ದಲ್ಲಿ ರೈತರ ಹೋರಾಟ ಪ್ರಾರಂಭ ; 26ರ ಸಭೆ ವಿಫಲವಾದಲ್ಲಿ 27 ರಂದು ಸಂಪೂರ್ಣ ಕರ್ನಾಟಕ ಬಂದ್ಗೆ ಕರೆ

ಇಂದಿನಿಂದ ಗುರ್ಲಾಪೂರ ಕ್ರಾಸ್ದಲ್ಲಿ  ರೈತರ ಹೋರಾಟ ಪ್ರಾರಂಭ ; 26ರ ಸಭೆ ವಿಫಲವಾದಲ್ಲಿ 27 ರಂದು ಸಂಪೂರ್ಣ ಕರ್ನಾಟಕ ಬಂದ್ಗೆ ಕರೆ
Farmers' protest begins today at Gurlapura Cross; a call for a complete Karnataka Bandh on the 27th


 ಗುರ್ಲಾಪುರ್ 25 : ಕಬ್ಬಿನ ಬೆಲೆ ನಿಗದಿಗಾಗಿ ರಾಜ್ಯ ರೈತ ಸಂಘದ ಮತ್ತು ಹಸೀರು ಸೇನೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ, ಗೌರಾಧ್ಯಕ್ಷ ಶಶಿಕಾಂತ ಗುರೂಜಿ ನೇತೃತ್ವದಲ್ಲಿ ಭಾನುವಾರ ಹೋರಾಟ ಪ್ರಾರಂಭವಾಯಿತು.  ಅ.26 ರಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಕರೆದಿರುವ ಸಭೆಯಲ್ಲಿ  ನಮ್ಮ ರೈತರ  ಬೇಡಿಕೆಗಳು  ಇಡೇರಬೇಕು.


ಒಂದು ವೇಳೆ ಸಭೆ ವಿಫಲವಾದಲ್ಲಿ  ನಮ್ಮ ಹೋರಾಟ ಮುಂದುವರೆಯುವದೆಂದು ರೈತ ಸಂಘದ ಗೌರವಾಧ್ಯಕ್ಷ  ಶಶಿಕಾಂತ ಗುರೂಜಿ ಹೇಳಿದರು.   ರಾಜ್ಯ ರೈತ ಸಂಘ, ಹಸೀರು ಸೇನೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ ಮಾತನಾಡಿ, ಅ.26ರಂದು ನಡೆಯುವ  ಸಭೆಯಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರು  ಪ್ರತಿ ಟನ್ಗೆ  ರೂ. 4,500/ಬಿಲ್ಲ ಘೋಷಣೆ ಮಾಡಬೇಕು. ಮುಖ್ಯಮಂತ್ರಿಗಳು ಎಸ್‌ಎಪಿ ಜಾರಿಗೆ ತಂದು ಪ್ರತಿ ಟನ್ಗೆ  ರೂ. 1000/ ಕ್ಕಿಂತ ಹೆಚ್ಚಿಗೆ ಪ್ರೋತ್ಸಾಹ ಧನ ಕೋಡಬೇಕು.


ಈ ಸಭೆಯಲ್ಲಿ ರೈತರ ಬೇಡಿಕೆಗಳು ವಿಫಲವಾದಲ್ಲಿ. ಮತ್ತೆ  ಗುರ್ಲಾಪೂರ ಕ್ರಾಸ್ದಲ್ಲಿ ಹೋರಾಟ ನಿರಂತರವಾಗಿರುವದು. ಅ.27 ರಿಂದ ಕರ್ನಾಟಕ ಸಂಪೂರ್ಣ ಬಂದ್ಗೆ ಕರೆ ಕೊಡಲಾಗುವದು. ಈ ದೇಶದಲ್ಲಿ 80ಅ ರಷ್ಟು ಸಕ್ಕರೆಯನ್ನು ವಾಣಿಜ್ಯವಾಗಿ ಕೊಕಾಕೋಲ, ಬಿಸ್ಕೀಟ  ಅಂತಹ ಕಂಪನಿಗಳು ಉಪಯೋಗಿಸುತ್ತವೆ.


20ಅ ರಷ್ಟು ಜನಸಾಮಾನ್ಯರು ಉಪಯೋಗಿಸುತ್ತಾರೆ. ಆದ ಕಾರಣ ಸಕ್ಕರೆ ಉಪಯೋಗಿಸುವ ಕಂಪನಿಗಳಿಗೆ ಕೆಜಿಗೆ ರೂ. 100/ ಮಾಡಬೇಕು ಎನ್ನುವದು ನಮ್ಮ ಆಗ್ರಹವಾಗಿದೆ ಎಂದು ಎಂದರು. ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ ರೈತ ಮುಖಂಡರು ಮಾತನಾಡಿದರು.ಮುಧೋಳ-ನಿಪ್ಪಾಣಿ ಹೆದ್ದಾರಿ ಬಂಧ್ಮಾಡಿ ಬೃಹತ್ತ ಪೆಂಡಾಲ ಹಾಕಿ, ಸ್ಥಳದಲ್ಲಿಯೆ ಅಡುಗೆಗೆ ಒಲಿ ಹತ್ತಿಸಿ, ಊಟ ಪ್ರಾರಾಂಭವಾಗಿದೆ.


ರೈತರ ಆಹಾರಕ್ಕಾಗಿ, ಖರ್ಚಿಗಾಗಿ ದವಸ-ಧಾನ್ಯಅಕ್ಕಿ, ಹಣ ಹರಿದುಬರುತ್ತಿದೆ. ರಾಜ್ಯ ಕಾರ್ಯಾಧ್ಯಕ್ಷ ರಾಜು ಪವಾರ, ಬೆಳಗಾವಿ ಜಿಲ್ಲಾಧ್ಯಕ್ಷ ಕುಮಾರಣ್ಣ, ಚಿಕ್ಕೋಡಿ,  ಜಿಲ್ಲಾಧ್ಯಕ್ಷರು ಮಲ್ಲಪ್ಪ ಅಂಗಡಿ, ಪರಸಣ್ಣ ಚಿನಗುಂಡಿ, ಬಾಗಲಕೋಟಿ ಜಿಲ್ಲಾಧ್ಯಕ್ಷ ಮಾನಿಂಗ ತೇಲಿ, ಕೆಂಪಣ್ಣ ಅಗಡಿ, ಈರಣ್ಣ ಸಸಾಲಟ್ಟಿ, ಮನೂ ಹುಣಶ್ಯಾಳ, ಶ್ರೀಶೈಲ ಅಂಗಡಿ, ಶಿವಾನಂದ ದೊಣವಾಡ, ಸಿದ್ದಪ್ಪ ಅಂಗಡಿ, ರಾಜ್ಯ ಉಪಾಧ್ಯಕ್ಷ ಸತ್ಯಪ್ಪ ಮಲ್ಲಾಪೂರೆ,


ಕುಮಾರ್ ಮಾಲಾಡಿ, ಗುರುನಾಥ್ ಹುಕ್ಕೇರಿ, ನೀತೀನ ಹುಕ್ಕೇರಿ,  ಶಿವಲಿಂಗ ಕೌಜಲಗಿ, ಪರಸಪ್ಪ ಚಿನಗೊಂಡಿ, ರಮೇಶ ಕಲಾಲ, ಹಾಗೂ ಬಂಡಿಗಣಿ ಬಸವ ಗೋಪಾಲ ಮಠದ ಭಕ್ತರು ಈ ಒಂದು  ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.  ಗುರ್ಲಾಪುರದ ರೈತ ಬಾಂಧವರು ಯುವ ಮುಖಂಡರು ರೈತರ ಪ್ರತಿಭಟನೆಗೆ ಆಗಮಿಸಿದ. ರೈತ ಸಮೂಹಕ್ಕೆ ಮಹಾಪ್ರಸಾದ ಮಾಡಿದರು. 


ಸುದ್ದಿ ಓದಿ