ಕಾಲುವೆಗೆ ನೀರು ಹರಿಸಲು ರಸ್ತೆ ತಡೆದು ರೈತರಿಂದ ಪ್ರತಿಭಟನೆಲೋಕದರ್ಶನ ವರದಿ
ಇಂಡಿ 23: ತಾಲೂಕಿನ ತಾಂಬಾ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಮತ್ತು ಗ್ರಾಮಸ್ಥರು ನೀರಿನ ತೀವ್ರ ಅಭಾವದಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಕೃಷಿ ಚಟುವಟಿಕೆಗಳಿಗೆ ನೀರಿಲ್ಲದೆ ಹಾಗೂ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯೇ ತೆಲೆದೊರುವ ಸಂಭವ ಇದ್ದು. ರೈತರು ತೊಂದರೆ ಅನುಭವಿಸುತ್ತಿದ್ದು, ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವುದೂ ಕಷ್ಟಕರವಾಗಿದೆ. ಈ ಕುರಿತು ಸಂಬಂಧಪಟ್ಟ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ, ಇಲ್ಲಿಯವರೆಗೆ ಯಾವುದೇ ಸೂಕ್ತ ಸ್ಪಂದನೆ ದೊರೆತಿರುವ ಹಿನ್ನೆಲೆಯಲ್ಲಿ ತಾಂಬಾ ಗ್ರಾಮದಲ್ಲಿ ಇಂದು ಹಸೀರು ಸೇನೆ ರೈತ ಸಂಘದ ಕಾರ್ಯಕರ್ತರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಹಾಗೂ ರೈತರು ಮತ್ತು ಗ್ರಾಮಸ್ಥರು ಸೇರಿ ಲಿಂಗಸೂರು -ಶಿರಾಡೊನ ರಾಜ್ಯ ಹೆದ್ದಾರಿ ತಡೆದು ರೈತರಿಂದ ಬೃಹತ್ ಪ್ರತಿಭಟನೆ ಮಾಡಲಾಯಿತು. ಈ ಹೋರಾಟಕ್ಕೆ ಶಿರಶ್ಯಾಡದ ಅಭಿನವ ಮುರುಘೇಂದ್ರ ಶಿವಾಚಾರ್ಯ ಹಾಗೂ ಬಂಥನಾಳದ ಅಭಿನವ ಸಂಗನಬಸವ ದೇವರು ರೈತ ಹೋರಾಟಕ್ಕೆ ಬೆಂಬಲ ನೀಡಿ ಮಾತನಾಡಿದರು. ಹಾಗೂ ವಿಜಯಪೂರ ಜಿಲ್ಲಾ ಹಸೀರು ಸೇನೆ ರೈತ ಸಂಘದ ಜಿಲ್ಲಾ ಅಧ್ಯಕ್ಷರಾದ ಎಸ್ ಬಿ ಕೆಂಬೋಗಿ ಹಾಗೂ ಕರವೇ ತಾಂಬಾ ಗ್ರಾಮ ಘಟಕ ಅಧ್ಯಕ್ಷರಾದ ಶಿವರಾಜ ಕೆಂಗನಾಳ ಹಸಿರು ಸೇನೆ ರೈತ ಸಂಘದ ಗ್ರಾಮ ಘಟಕ ಅಧ್ಯಕ್ಷರಾದ ರೇವಪ್ಪ ಖೇಡ ಹಾಗೂ ಟಿ ಆರ್ ಆಸಂಗಿ ಅದೃಷ್ಟಪ್ಪ ವಾಲಿ ಅನೇಕರು ಮಾತನಾಡಿದರು, ಈ ಸುದ್ದಿ ತಿಳಿದು ತಕ್ಷಣ ಸ್ಥಳಕ್ಕಾಗಮಿಸಿದ ಕೆಬಿಜೆಎನ್ ಎಲ್ ಅಭಿಯಂತರಾದ ರವಿ ಸೋಲ್ಲಾಪುರ ಅವರು ತಕ್ಷಣ ಗುತ್ತಿ ಬಸವಣ್ಣ ಕಾಲುವೆಗೆ ಮೂಲಕ ಕಾಲುವೆಗೆ ನೀರು ಹರಿಸಿದ ತಕ್ಷಣ ಹೋರಾಟ ವಾಪಸ್ ಪಡೆದರು. ಸಂದರ್ಭದಲ್ಲಿ ರೈತ ಮುಖಂಡರಾದ ಬಸವರಾಜ ಹಟ್ಟಿ ಜಿ ವಾಯ್ ಗೋರನಾಳ ಆರ್ ಎಸ್ ಪೂಜಾರಿ ರಾಜಶೇಖರ ಗಂಗನಹಳ್ಳಿ ಸುರೇಶ ನಡಗಡ್ಡಿ ಮಲ್ಲಿಕಾರ್ಜುನ ಹೋರ್ತಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ರೈತರು ಉಪಸ್ಥಿತರಿದ್ದರು. ಹಾಗೂ ಮುಂಜಾಗ್ರತಾ ಕ್ರಮವಾಗಿ ಇಂಡಿ ಗ್ರಾಮೀಣ ಪೋಲಿಸ್ ಠಾಣೆ ಸಿಪಿಐ ಸುನೀಲ ಪಾಟೀಲ ಮತ್ತು ಪಿಎಸ್ಐ ರಾಜು ಮಮದಾಪೂರ ಅವರ ನೇತೃತ್ವದಲ್ಲಿ ಸೂಕ್ತ ಪೋಲಿಸ್ ಬಂದು ಬಸ್ತ ಕೈಗೋಳ್ಳಲಾಯಿತು. ಆದರೆ ಈ ಹೋರಾಟದಿಂದ ಕೆಲ ಹೊತ್ತು ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಯಿತು.