ಸಂಕೇಶ್ವರ

ಲಿಂ. ಶ್ರೀ. ಅಪ್ಪಣಗೌಡ ಪಾಟೀಲರ 52 ನೇ ಪುಣ್ಯಸ್ಮರಣೆ ಸಮಾರಂಭ

ಲಿಂ. ಶ್ರೀ. ಅಪ್ಪಣಗೌಡ ಪಾಟೀಲರ 52 ನೇ ಪುಣ್ಯಸ್ಮರಣೆ ಸಮಾರಂಭ

ಸಂಕೇಶ್ವರ 23: ಲಿಂ. ಅಪ್ಪಣಗೌಡ ಪಾಟೀಲರ 52 ನೇ ಪುಣ್ಯಸ್ಮರಣೆ ಸಮಾರಂಭವು  ದುರದುಂಡೀಶ್ವರ ವಿದ್ಯಾಸಂವರ್ಧಕ ಸಂಘದ ಎಸ್‌.ಡಿ. ಪ್ರೌಢ ಶಾಲೆ ಸೆಂಟರ ಹಾಲನಲ್ಲಿ 11.00 ಗಂಟೆಗೆ ಕಾರ್ಯಕ್ರಮವು ಜರುಗಿತು, ನಾಡನ್ನು ಕಟ್ಟುವ ಶಿಕ್ಷಕರು ದೊಡ್ಡ ಜವಾಬ್ದಾರಿಯನ್ನು ಹೊತ್ತು ನಿಭಾಯಿಸಿ ವಿದ್ಯಾರ್ಥಿಗಳಿಗೆ ಬೋಧನೆಯನ್ನು ನೀಡಿ ಆದರ್ಶ ಪ್ರತಿಭಾವಂತ ವಿದ್ಯಾರ್ಥಿಯನ್ನಾಗಿ ಮಾಡಲು ಶಿಕ್ಷಕರ ಪಾತ್ರ ಬಹಳ ಮಹತ್ವದು ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೋ. ಅಶೋಕ ಎಸ್‌. ಆಲೂರ, ಇವರು  ಸ್ವಾತಂತ್ರ್ಯ ಸೇನಾನಿ, ಸಹಕಾರಿ ಮಹರ್ಷಿ, ಶಿಕ್ಷಣ ಶಿಲ್ಪಿ ದಿ. ಅಪ್ಪಣಗೌಡ ಪಾಟೀಲರು ಸಹಕಾರಿ ಸಂಸ್ಥೆಗಳು ಹಾಗೂ ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕಿ ವಿದ್ಯಾರ್ಥಿಗಳಿಗೆ ಜ್ಞಾನದ ದೇಗುಗಲಗಳನ್ನು ಅರ​‍್ಿಸಿ ವಿದ್ಯಾರ್ಥಿಗಳ ಜೀವನಕ್ಕೆ ಕಾಮಧೇನು ಕಲ್ಪವೃಕ್ಷವಾಗಲೆಂದು ಕುಲಪತಿಗಳಾದ ಪ್ರೋ. ಅಶೋಕ ಎಸ್‌. ಆಲೂರ, ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದಲ್ಲದೇ, ಶಿಕ್ಷಕರು ನಿಸ್ವಾರ್ಥ ಅನುಭವ ಜ್ಞಾನ ಈ ಸೇವೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಅವರನ್ನು ಒಂದು ಉನ್ನತ ಮಟ್ಟದ ಸ್ಥಾನಕ್ಕೆ ಒಯ್ಯಲು ಶಿಕ್ಷಕರಿಂದಲೇ ಮಾತ್ರ ಸಾಧ್ಯ ಎಂದು ಹೇಳಿದರು.  ದಿ. ಅಪ್ಪಣಗೌಡ ಪಾಟೀಲರ ಅವರ ಜೀವನ ಶೈಲಿ ಮತ್ತು ಅವರ ಆದರ್ಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ತಮ್ಮ ಜೀವನವನ್ನು ಸಾರ್ಥಕ ಮಾಡಬೇಕೆಂದು ಎಸ್‌.ಡಿ.ವ್ಹಿ.ಎಸ್‌. ಸಂಘದ ನಿರ್ದೇಶಕರಾದ ವಿನಯಗೌಡಾ ಅಪ್ಪಯಗೌಡಾ ಪಾಟೀಲರು, ದಿ. ಅಪ್ಪಣಗೌಡ ಪಾಟೀಲರ ಪುಣ್ಯಸ್ಮರಣೆ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶೀಸಿ ಮಾತನಾಡಿದರು. ದಿ. ಅಪ್ಪಣಗೌಡ ಪಾಟೀಲರ ಕಾಯಕ ಹಾಗೂ ಯುವಕರ ಚಿಂತನೆ ದೇಶಕ್ಕಾಗಿ ಮುಡುಪು ಇಟ್ಟಿದ್ದಾರೆ ಅವರ ಸಾಧನೆಯನ್ನು ಶಿಕ್ಷಕರು ಗುರ್ತಿಸಿಕೊಂಡು ವಿದ್ಯಾರ್ಥಿಗಳಿಗೆ ಒಳ್ಳೆಯ ಗುಣಮಟ್ಟದ ಶಿಕ್ಷಣವನ್ನು ನೀಡಿ ಅವರನ್ನು ಒಳ್ಳೆಯ ನಾಗರಿಕರನ್ನಾಗಿ ಮಾಡಬೇಕೆಂದು ಈ ಸಮಾರಂಭದ ದಿವ್ಯ ಸಾನಿಧ್ಯವನ್ನು ನಿಡಸೋಶಿ ಮಠದ ಡಾ. ಶಿವಲಿಂಗೇಶ್ವರ ಮಹಾಸ್ವಾಮಿಗಳು, ತಮ್ಮ ಆಶೀರ್ವವಚನದಲ್ಲಿ ಮಾತನಾಡಿದರು. ಇದೆ ಸಂದರ್ಭದಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳ, ಪ್ರಾಧ್ಯಾಪಕರ ಹಾಗೂ ಸೇವಾ ನಿವೃತ್ತಿ ಸಿಬ್ಬಂದಿಯವರ ಸನ್ಮಾನವನ್ನು ನಿಡಸೋಶಿ ಮಠದ ಶ್ರೀಗಳಿಂದ ಹಾಗೂ ನಿರ್ದೇಶಕರಾದ ವಿನಯಗೌಡ ಅ. ಪಾಟೀಲರು, ಶಾಲು ಹೊದಿಸಿ ಸನ್ಮಾನ ಮಾಡಿದರು. ವೇದಿಕೆಯ ಮೇಲೆ ಸಂಘದ ಉಪಾಧ್ಯಕ್ಷರಾದ ಕಾಶೀನಾಥ ಶಿರಕೋಳಿ, ಹಿರಿಯ ನ್ಯಾಯವಾದಿ ಆರ್‌.ಬಿ. ಪಾಟೀಲ, ಸಂಘದ ನಿರ್ದೇಶಕರಾದ ಸುಭಾಷ ಕಾಸರಕರ, ಬಾಳಾಸಾಹೇಬ ವೈರಾಗಿ, ಸಂತೋಷ ಪಾಟೀಲ, ಸಂಘದ ಕಾರ್ಯದರ್ಶಿ ಜಿ.ಎಸ್‌. ಕೋಟಗಿ, ಸಂಘದ ಆಡಳಿತ ಅಧಿಕಾರಿ ಬಿ.ಎ. ಪೂಜಾರಿ, ಕೊನೆಗೆ ವ್ಹಿ.ಡಿ. ನಾಡಗೌಡಾ ಆಭಾರ ಮನ್ನಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. 


ಸುದ್ದಿ ಓದಿ