ಇಂದು ನಿಲಗಾರ ಗಣಪತಿ ವಿಸರ್ಜನೆ
ಲೋಕದರ್ಶನ ವರದಿ
ಸಂಕೇಶ್ವರ 05 : ನಿಲಗಾರ ಗಣಪತಿ ಹಬ್ಬವು ಕಳೆದ 22 ದಿನಗಳಿಂದ ಭಕ್ತಿಭಾವ ಹಾಗೂ ಸಂಭ್ರಮದಿಂದ ನಡೆಯುತ್ತಿದ್ದು, ಸುಮಾರು 7 ಲಕ್ಷ ಭಕ್ತರು ಗಣಪತಿ ದರ್ಶನ ಪಡೆದು ಹರಕೆ ತೀರಿಸಿದ್ದಾರೆ. ನಗರದ ಪೇಡಾ ಅಂಗಡಿಗಳು ಹಾಗೂ ಹೋಟೆಲ್ಗಳಲ್ಲಿ ವ್ಯಾಪಾರ-ವಹಿವಾಟು ಕೂಡ ಭರ್ಜರಿಯಾಗಿ ನಡೆದಿದೆ.
ಸೋಮವಾರ ರಾತ್ರಿ ನಿಲಗಾರ ಗಣಪತಿ ವಿಸರ್ಜನೆ ನಡೆಯಲಿದೆ. ಶಿವಪುತ್ರ ಈಶ್ವರ್ಪ ಹೆದ್ದೂರಶೆಟ್ಟಿ ಅವರ ಸ್ವಗೃಹದಲ್ಲಿ ರಾತ್ರಿ 10ರಿಂದ 12 ಗಂಟೆಯವರೆಗೆ ಪೂಜೆ ನೆರವೇರಲಿದೆ. ಬಳಿಕ ರಾತ್ರಿ 12 ಗಂಟೆಗೆ ವಿಸರ್ಜನಾ ಮೆರವಣಿಗೆ ಆರಂಭವಾಗಲಿದೆ. ಹೆದ್ದೂರಶೆಟ್ಟಿ ಗಲ್ಲಿಯಿಂದ ಮಠಗಲ್ಲಿಗೆ ತೆರಳಿ, ಶಂಕರಲಿಂಗ ಮಠದ ಮೂಲಕ ಹಿರಣ್ಯಕೇಶಿ ನದಿಯಲ್ಲಿ ರಾತ್ರಿ 1ರಿಂದ 2 ಗಂಟೆಯೊಳಗೆ ಗಣಪತಿ ಮೂರ್ತಿಯನ್ನು ವಿಸರ್ಜಿಸಲಾಗುವುದು.
ವಿಸರ್ಜನಾ ಕಾರ್ಯಕ್ರಮದ ವೇಳೆ ಭಕ್ತರು ಪಟಾಕಿಗಳನ್ನು ಇತರರ ಮೈಮೇಲೆ ಸಿಡಿಸದಂತೆ ಹಾಗೂ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.
ವಿಸರ್ಜನಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರಿ್ಡಸಲಾಗಿದೆ. 7 ಸಿಪಿಐ, 44 ಪಿಎಸ್‌ಐ, 10 ಎಎಸ್‌ಐ ಹಾಗೂ 60 ಹೆಡ್ಕಾನ್ಸ್ಟೆಬಲ್ ಸೇರಿದಂತೆ ಪೊಲೀಸರನ್ನು ನಿಯೋಜಿಸಲಾಗಿದೆ.