ಸಂಕೇಶ್ವರ

ಹುಕ್ಕೇರಿ ತಾಲೂಕವನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕು-ಶಾಸಕ ಕತ್ತಿಯವರಿಂದ ಒತ್ತಾಯ

ಹುಕ್ಕೇರಿ ತಾಲೂಕವನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕು-ಶಾಸಕ ಕತ್ತಿಯವರಿಂದ ಒತ್ತಾಯ


ಸಂಕೇಶ್ವರ 05 : ರಾಜ್ಯ ಸರ್ಕಾರದವರು ಹುಕ್ಕೇರಿ ತಾಲೂಕಾವನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡುವ ಪಟ್ಟಿಯಲ್ಲಿ ಕೈಬಿಟ್ಟಿದ್ದರಿಂದ ಇಂದು ಹುಕ್ಕೇರಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ರೈತರು ಸಿಡಿದೆದ್ದು ಹುಕ್ಕೇರಿ ಸರ್ಕಲ್‌ದಲ್ಲಿ ಮಾನವ ಸರಿ​‍್ಳ ನಿರ್ಮಾಣ ಮಾಡಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ಮಾಡಿದರು.

ಬಿಜೆಪಿಯ ಶಾಸಕ ಹುಕ್ಕೇರಿ ಮತಕ್ಷೇತ್ರದ ನೀಖೀಲ ಉಮೇಶ ಕತ್ತಿ ಮತ್ತು ಮಾಜಿ ಸಂಸದ ರಮೇಶ ವಿಶ್ವನಾಥ ಕತ್ತಿಯವರು, ರಾಜ್ಯದ ಡಿ.ಕೆ. ಶಿವಕುಮಾರ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಈ ಸರ್ಕಾರವನ್ನು ಕಿತ್ತೊಗೆಯಬೇಕೆಂದು ಒತ್ತಾಯಿಸಿದರು.

ಈ ಸರ್ಕಾರ ಭಿಕಾರಚೋಟ ಸರ್ಕಾರವಾಗಿದೆ ಎಂದು ತಮ್ಮ ಭಾಷಣದಲ್ಲಿ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಹುಕ್ಕೇರಿ ತಾಲೂಕಿನ ರೈತರು ಮಳೆಯ ಅಭಾವದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ರೈತರ ಸಂಕಷ್ಟಗಳನ್ನು ಅರಿತು ಸರ್ಕಾರವು ತಕ್ಷಣ ಕೂಡಲೇ ಹುಕ್ಕೇರಿ ತಾಲುಕವನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿ ರೈತರ ಬೆಳೆ ಸಾಲ ಮನ್ನಾ ಮಾಡಬೇಕು ಇಲ್ಲವಾದಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದು ಮಾಡಿ ರೈತರು ತಮ್ಮ ಆಕ್ರೋಶವನ್ನು ಹೊರಹಾಕುವುರು.

ಇಂತಹ ಉಗ್ರ ಸ್ವರೂಪದ ಚಳುವಳಿಗೆ ಅವಕಾಶ ಕೊಡಬಾರದೆಂದು ಮತ್ತೊಮ್ಮೆ ಸರ್ಕಾರದಲ್ಲಿ ಕತ್ತಿ ಸಹೋದರರು ಮನವಿ ಮಾಡಿಕೊಂಡು ರೈತರ ಸಂಕಷ್ಟಗಳಿಗೆ ಸಹಕರಿಸಬೇಕೆಂದು ತಮ್ಮ ಭಾಷಣದಲ್ಲಿ ಒತ್ತಿ ಹೇಳಿದರು.

ಪ್ರತಿಭಟನೆಯಲ್ಲಿ ಸುಮಾರು ಸಾವಿರಾರು ಸಂಖ್ಯೆಯಲ್ಲಿ ರೈತರು ಭಾಗವಹಿಸಿದ್ದರು. ಈ ಪ್ರತಿಭಟನೆಲ್ಲಿ ಗಜಾನನ ನಿಂಗಪ್ಪಾ ಕ್ವಳ್ಳಿ, ಸುನೀಲ ಪರ್ವತರಾವ, ಮಾರುತಿ ಅಷ್ಟಗಿ, ನಂದು ಮುಡಶಿ, ರೋಹನ ನೇಸರಿ, ಗುರು ಕುಲಕರ್ಣಿ, ಮುಂತಾದ ರೈತರ ಬಾಂಧವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 


ಸುದ್ದಿ ಓದಿ