ಗದಗ

ಇನ್ನೊಬ್ಬರ ಜೀವಕ್ಕೆ ಆರೋಗ್ಯ ಸಂಜೀವಿನಿಯಾಗಲಿದೆ ಸ್ವಯಂಪ್ರೇರಿತ ರಕ್ತದಾನ

ಇನ್ನೊಬ್ಬರ ಜೀವಕ್ಕೆ ಆರೋಗ್ಯ ಸಂಜೀವಿನಿಯಾಗಲಿದೆ ಸ್ವಯಂಪ್ರೇರಿತ ರಕ್ತದಾನ

ಲೋಕದರ್ಶನ ವರದಿ 


ಗದಗ 05:- ಅಗತ್ಯವಿರುವವರಿಗೆ ರಕ್ತ ಪೂರೈಕೆಯ ಕೊರತೆಯನ್ನು ಎದುರಿಸುತ್ತಿರುವ  ಜನರಿಗೆ ಜೀವ ರಕ್ಷಕವಾಗಿ  ತುರ್ತು ಸಂಧರ್ಭದಲ್ಲಿ ರಕ್ತಲಭ್ಯವಾಗುವಂತೆ ಮಾಡಲು, ಜಾಗತಿಕವಾಗಿ ರಕ್ತದಾನಕ್ಕೆ ಜನರನ್ನು ಪ್ರೋತ್ಸಾಹಿಸಲು ಡಬ್ಲ್ಯೂ ಎಚ್ ಓ ವಿಶ್ವ ರಕ್ತದಾನಿಗಳ ದಿನವನ್ನಾಗಿ  ಜೂನ್ 14 ರಂದು ಆಚರಿಸಲಾಗುತ್ತದೆ. 

ಜನಸಾಮಾನ್ಯರ ಆರೋಗ್ಯ ರಕ್ಷಕವಾದ ರಕ್ತದಾನ ಮಹಾ ದಾನದ ಅಭಿಯಾನದ ಅಡಿಯಲ್ಲಿ ಗದಗ ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿರುವ ಎಚ್ ಕೆ ಪಾಟೀಲ್ ಸೇವಾ ತಂಡ (ರಿ) ಹಾಗೂ ಆಯ್ ಎಮ್ ಎ ರಕ್ತ ಭಂಡಾರ ಗದಗ ಇವರುಗಳಸಂಯುಕ್ತಾಶ್ರಯದಲ್ಲಿ  ಇಂದು ದಿನಾಂಕ 05/10/2026 ರಂದು ಸೇವಾ ತಂಡದ ಕಚೇರಿಯಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. 

ಈ ಒಂದು ಸಾಮಾಜಿಕ ಕಳಕಳಿಯ ಮಹತ್ವಪೂರ್ಣ ಕಾರ್ಯಕ್ರಮದಲ್ಲಿ ಹಲವಾರು ಜನಸು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು. ಈ ಸಂಧರ್ಭದಲ್ಲಿ ಮಾತನಾಡಿದ ಡಾಕ್ಟರ್ ಪ್ಯಾರಾಲಿ ನೂರಾನಿ ರವರು ಸಾಮಾನ್ಯ ಮತ್ತು ಆರೋಗ್ಯವಂತ ವ್ಯಕ್ತಿ 18-60 ವರ್ಷ ವಯಸ್ಸಿನ ನಡುವೆ ಸುಲಭವಾಗಿ ಹಲವಾರು ಬಾರಿ ರಕ್ತದಾನ ಮಾಡಬಹುದು. ಸರಿಯಾದ ಸಮಯದಲ್ಲಿ ರಕ್ತದಾನ ಮಾಡುವುದರಿಂದ ಪ್ರತಿ ವರ್ಷ ಪ್ರಪಂಚದಾದ್ಯಂತ ಲಕ್ಷಾಂತರ ಜೀವಗಳನ್ನು ಉಳಿಸಬಹುದು ಎಂದು ನುಡಿದರು. 

ಅದರಂತೆ ಸೇವಾ ತಂಡದ ಅಧ್ಯಕ್ಷರಾದ ಪ್ರಭು ಬುರಬುರೆರವರು ಸ್ವಯಂ ಪ್ರೇರಿತ ರಕ್ತದಾನದಂತಹ ಮಹಾನ್ ಸಾಮಾಜಿಕ ಕಳಕಳಿ ಬೇರೊಂದಿಲ್ಲ ರಕ್ತದಾನವು ಮಾನವಕುಲಕ್ಕೆ ಅತ್ಯಂತ ಮುಖ್ಯವಾದ ಸಾಮಾಜಿಕ ಸೇವೆಯಾಗಿದೆ.

ಒಬ್ಬ ಮನುಷ್ಯನಾಗಿ, ನಾವು ಇತರರ ಜೀವವನ್ನು ಉಳಿಸಲು ರಕ್ತದಾನ ಮಾಡಬೇಕು. ರಕ್ತದಾನದ ಮೂಲಕ, ನಾವು ವಿವಿಧ ಅಗತ್ಯವಿರುವವರಿಗೆ ಸಹಾಯ ಮಾಡಬಹುದು ಮತ್ತು ಅವರ ಅಮೂಲ್ಯ ಜೀವವನ್ನು ಉಳಿಸಬಹುದು. ಆದ್ದರಿಂದ ದಯವಿಟ್ಟು ಸ್ವಯಂಪ್ರೇರಿತ ರಕ್ತದಾನಿಗಳಾಗಿರಿ  ಸ್ವಯಂಪ್ರೇರಿತ ರಕ್ತದಾನ ಇನ್ನೊಬ್ಬರ ಜೀವಕ್ಕೆ ಆರೋಗ್ಯ ಸಂಜೀವಿನಿಯಾಗಲಿದೆ ಎಂದು ಕರೆ ನೀಡಿದರು. 

ಈ ಸಂಧರ್ಭದಲ್ಲಿ ಡಾಕ್ಟರ್ ಎಚ್ ಕೆ ಪಾಟೀಲ್ ಸೇವಾ ತಂಡದ ಅಧ್ಯಕ್ಷರಾದ್ ಪ್ರಭು ಎಲ್ ಬುರಬುರೆ, ಎಮ್ ಸಿ ಶೇಖ್, ದೇವೇಂದ್ರ ಕಳಸಾಪೂರ, ಜಾಫರ್ ಖಾಜಿ, ನವೀನ್ ಜಾಲಿಹಾಳ್ ಉಸ್ಮಾನ್ ಮಾಳೇಕೋಪ್ಪ, ರಾಘವೇಂದ್ರ ಪಾಲನಕರ, ಪೃಥ್ವಿ ಪರಾಪೂರ, ದಾದಾಪೀರ್ ಮುಂಡರಗಿ, ನಾಗರಾಜ್ ಕುರಗೋಡ, ಸಾಗರ ಬಳ್ಳಾರಿ, ಶಿವು ಚವಾಣ್,ಸಾಹಿಲ್ ಮುಲ್ಲಾ ಕಿರಣ ಬೋರ್ಕರ್  ಅನಿಲ ಭಜಂತ್ರಿ .ಇಸ್ಮಾಯಿಲ್ ಚಿಳ್ಕವಾಡ ರಾಘವೇಂದ್ರ ಹೊಸಳ್ಳಿ ಅಕ್ಷತಾ ಅಣ್ಣಿಗೇರಿ, ರವಿ ಬಡಿಗೇರ, ಹಾಗೂ ಇನ್ನಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ