ಗದಗ

ಪ್ರತಿಯೊಬ್ಬರು ಮೂರ್ಛೇ ರೋಗದ ಬಗ್ಗೆ ಎಚ್ಚರ ವಹಿಸುವದು ಅತಿಮುಖ್ಯ

ಪ್ರತಿಯೊಬ್ಬರು ಮೂರ್ಛೇ ರೋಗದ ಬಗ್ಗೆ ಎಚ್ಚರ ವಹಿಸುವದು ಅತಿಮುಖ್ಯ

          ಗದಗ   24:  ಮೂರ್ಛೆ ರೋಗ ಮೆದುಳಿನ ಅಸಹಜ ಚಟುವಟಿಕೆಯಿಂದ ಉಂಟಾದ ಪ್ರಜ್ಞಾ ರಹಿತ ಕೈ ಕಾಲುಗಳ ಸೆಳೆತ ತಲೆ ತಿರುಗುವಿಕೆ ಮತ್ತು ಕಣ್ಣು ಗುಡ್ಡೆಗಳು ಮೇಲ್ಮುಖ ವಾಗಿ ತಿರುಗುವ ಲಕ್ಷಣಗಳನ್ನು ಹೊಂದಿದೆ. ಇಂತಹ ಲಕ್ಷಣಗಳು ಕಂಡು ಬಂದಲ್ಲಿ ತಜ್ಞ ವೈದ್ಯರನ್ನು ಭೇಟಿಯಾಗಿ ತಪಾಸಣೆ ಸೂಕ್ತ ಚಿಕಿತ್ಸೆ ಪಡೆಯುವದು ಹಾಗೂ ಮೂರ್ಛೇ ರೋಗದ ಬಗ್ಗೆ ಎಚ್ಚರ ವಹಿಸುವದು ಅತಿಮುಖ್ಯ ಎಂದು ಕಭಿ ಕಾರ್ಯಕ್ರಮದ ಸಂಯೋಜಕರು ಪ್ರವೀಣ ರೋಣದ ಹೇಳಿದರು.   

             ನಗರದ ಅರುಣೋದಯ ವಿಶೇುಷ ಮಕ್ಕಳ ಶಾಲೆಯಲ್ಲಿ ಮಂಗಳವಾರ ನವಂಬರ್ (24) ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಐ.ಇ.ಸಿ ವಿಭಾಗ ಹಾಗೂ ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ಇವರುಗಳ ಸಂಯುಕ್ತಾಶ್ರಯದಲ್ಲಿ ವಿಶೇುಷ ಮಕ್ಕಳ ಪಾಲಕರಿಗಾಗಿ ಏರಿ​‍್ಡಸಿದ್ದ ಮೂರ್ಛೆ ರೋಗ ಜಾಗೃತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

               ಸೂಕ್ತ ಆಹಾರ, ನಿಯಮಿತ ವ್ಯಾಯಾಮ, ಸಾಕಷ್ಟು ನಿದ್ರೆ, ಒತ್ತಡ ರಹಿತ ಜೀವನ ಮತ್ತು ತಲೆಗೆ ಪೆಟ್ಟಾಗದಂತೆ ನೋಡಿಕೊಳ್ಳುವದು ಸೇರಿದಂತೆ ಆಗ್ಗಾಗೆ ನಿಗದಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವದು ಮುಖ್ಯವಾಗಿದೆ ಎಂದರು.  

               ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್‌.ಡಿ.ಬೆನ್ನೂರ ಮಾತನಾಡಿ ಬೆಳೆಯುತ್ತಿರುವ ದೇಶದಲ್ಲಿ ಅಪಸ್ಮಾರವು ಎನ್ನುವುದು ಜಾಗತಿಕ ಆರೋಗ್ಯ ಸಮಸ್ಯೆಯಾಗಿದೆ. ಈ ರೋಗದ ಬಗ್ಗೆ ಜನರಲ್ಲಿ ಇರುವ ಮೂಡನಂಬಿಕೆ ಹೋಗಲಾಡಿಸುವದು ಅರಿವು ಕಾರ್ಯಕ್ರಮದ ಉದ್ದೇಶವಾಗಿದೆ. ಹಾಗೆಯೇ ಆಧುನಿಕ ಜೀವನದ ಜಂಜಾಟದಲ್ಲಿ ಸಮತೋಲನ ಆಹಾರ ಸೇವಿಸುವದು ಅತ್ಯಂತ ಮುಖ್ಯವಾಗಿದೆ ಎಂದರು. 

             ವೈದ್ಯಾಧಿಕಾರಿ ಡಾ. ಅವಿನಾಶ ಮೂರ್ಛೆ ರೋಗದ ಆರಂಭಿಕ ಲಕ್ಷಣಗಳು, ಚಿಕಿತ್ಸೆ ಹಾಗೂ ಮುನ್ನೆಚ್ಚೆರಿಕೆ ಕ್ರಮಗಳ ಕುರಿತು ಉಪನ್ಯಾಸ ನೀಡಿದರು. ಸದರಿ ವೇಳೆ ಫಿಜಿಯೋಥೆರಾಪಿಸ್ಟ ಡಾ. ಅಶ್ವಿನಿ ಕುರಿಯವರ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. 

ಕಾರ್ಯಕ್ರಮವನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಮಲ್ಲಪ್ಪ ಹಕ್ಕಿ ಸರ್ವರನ್ನು ಸ್ವಾಗತಿಸಿ ನಿರೂಪಿಸಿದರು. 

              ಈ ಕಾರ್ಯಕ್ರಮದಲ್ಲಿ  ಸೇವಾ ಭಾರತಿ ಟ್ರಸ್ಟ್‌ (ರಿ) ಸಂಸ್ಥೆಯ  ಅಧ್ಯಕ್ಷ ಲುಕ್ಕಣಸಾ ರಾಜೋಳಿ, ಉಪಾದ್ಯಕ್ಷ ಪ್ರಕಾಶ ವೈಲಾಯ, ಕಾರ್ಯದರ್ಶಿ ಜಯರಾಜ ಮುಳಗುಂದ, ಕೋಶಾದ್ಯಕ್ಷ ಜಿತೆಂದ್ರ ಶಹಾ, ಸದಸ್ಯರಾದ ಬಸವರಾಜ ಪಟ್ಟಣಶೆಟ್ಟಿ, ವ್ಯವಸ್ಥಾಪಕ ಮಲ್ಲಿಕಾರ್ಜುನ ನಾಗಲಾಪೂರ ಹಾಗೂ ಕ್ಲಿನಿಕಲ್ ಸೈಕಾಲಾಜಿಷ್ಟ ರೇವಣ ಸಿದ್ದಪ್ಪ ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು. 


ಸುದ್ದಿ ಓದಿ