ಗದಗ

ಡಾ.ವೀರೇಂದ್ರ ಹೆಗಡೆ ಅವರ ಹುಟ್ಟು ಹಬ್ಬದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಡಾ.ವೀರೇಂದ್ರ ಹೆಗಡೆ ಅವರ ಹುಟ್ಟು ಹಬ್ಬದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ

           ಲಕ್ಷ್ಮೇಶ್ವರ"  25 ; ತಾಲೂಕು ಹಿರಿಯ ನಾಗರಿಕರ ಮತ್ತು ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಬಿಸಿ ಟ್ರಸ್ಟ್‌ ವತಿಯಿಂದ ಪ್ರತಿ ತಿಂಗಳು ನಡೆಯುವ ನಾಗರಿಕರ ಮಾಸಿಕ ಸಭೆಯ ಅಂಗವಾಗಿ ಪಟ್ಟಣದ ಚಂಬಣ್ಣ ಬಾಳಿಕಾಯಿ ಯವರ ಜೀನಿಂಗ್ ಫ್ಯಾಕ್ಟರಿಯಲ್ಲಿ   ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗಡೆಯವರ ಹುಟ್ಟು ಹಬ್ಬವನ್ನು ನಾಗರಿಕರೊಂದಿಗೆ ಕೇಕ ಕತ್ತರಿಸುವ ಮೂಲಕ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ ನಡೆಯಿತು.

            ಕಾರ್ಯಕ್ರಮವನ್ನು ಉದ್ದೇಶಿಸಿ ಹಿರಿಯ ನಾಗರಿಕರ ಮತ್ತು ನಿವೃತ್ತಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಸಿ ಆರ್ ಲಕ್ಕುಂಡಿಮಠ ಅವರು ಮಾತನಾಡಿ ಪ್ರತಿ ತಿಂಗಳು ನಮ್ಮ ಹಿರಿಯ ನಾಗರಿಕರ ಸಂಘದಿಂದ ಮಾಸಿಕ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದು ಇದರ ಮೂಲ ಉದ್ದೇಶ ಎಲ್ಲ ಹಿರಿಯ ನಾಗರಿಕರಿಗೂ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ತಲುಪಿಸುವುದು ಈ ಸಂಘದ ಉದ್ದೇಶವಾಗಿದೆ.

             ಎಲ್ಲ ಹಿರಿಯ ನಾಗರಿಕರು ಪ್ರತಿ ತಿಂಗಳು 25 ತಾರೀಕಿನಂದು ನಡೆಯುವ ಮಾಸಿಕ ಸಭೆಯಲ್ಲಿ ಪಾಲ್ಗೊಂಡು ತಮ್ಮ ಸಮಸ್ಯೆಗಳನ್ನು ತಿಳಿಸುವ ಮೂಲಕ ಸರ್ಕಾರದ ಪ್ರಯೋಜನವನ್ನು ಪಡೆದುಕೊಳ್ಳಲು ಅಂಕುಲಕರವಾಗುತ್ತದೆ ಅದಕ್ಕಾಗಿ ಎಲ್ಲ ಹಿರಿಯ ನಾಗರಿಕರು ಪ್ರತಿ ತಿಂಗಳು ಸಭೆಗೆ ಕಡ್ಡಾಯವಾಗಿ ಬರಬೇಕು ಎಂದರು.

           ಹಿರಿಯ ಮುಖಂಡರಾದ ಶಿವಪ್ರಕಾಶ್ ಮಹಾಜನಶೆಟ್ಟರ್ ಅವರು ಮಾತನಾಡಿ ಡಾ. ವೀರೇಂದ್ರ ಹೆಗಡೆಯವರು ತಮ್ಮ ಧರ್ಮಸ್ಥಳ ಸಂಘದಿಂದ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ರಾಜ್ಯದ ಅಭಿವೃದ್ಧಿಗೆ ಸಹಕಾರ ನೀಡುತ್ತಿದ್ದಾರೆ ಅದರೊಂದಿಗೆ ಬಡವರಿಗೆ ನಿರ್ಗತಿಕರಿಗೆ ದೇವಸ್ಥಾನಗಳಿಗೆ ಗ್ರಾಮದ ಕೆರೆಗಳ ಅಭಿವೃದ್ಧಿಗೆ ಸಾಕಷ್ಟು ಶ್ರಮವಹಿಸುತ್ತಿದ್ದಾರೆ ಅವರ ಕಾರ್ಯ ನಿಜವಾಗಿಯೂ ಹೆಮ್ಮೆ ಪಡುವಂಥದ್ದಾಗಿದೆ. 

             ಅವರ ಹುಟ್ಟು ಹಬ್ಬದ ಅಂಗವಾಗಿ ಎಲ್ಲ ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿದ್ದು ತುಂಬಾ ಸಂತೋಷದ ವಿಷಯವಾಗಿದೆ ಎಲ್ಲ ಹಿರಿಯ ನಾಗರಿಕರು ಈ ಉಚಿತ ಆರೋಗ್ಯ ತಪಾಸಣೆಯ ಶಿಬಿರದ ಸದುಪಯೋಗ ಪಡೆದುಕೊಂಡು ತಮ್ಮ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಧರ್ಮಸ್ಥಳ ಕ್ಷೇಮಾಭಿವೃದ್ಧಿ ಯೋಜನಾಧಿಕಾರಿ ಪುನೀತ್ ಓಲೇಕಾರ ಚಂಬಣ್ಣ ಬಾಳಿಕಾಯಿ ದೇವಣ್ಣ ಬಳಿಗಾರ                            ಪುಲಿಕೇಶಿ ಉಪನಾಳ ಸೋಮಣ್ಣ ಡಾಣಗಲ್ಲ ರಾಜು ಕುಂಬಿ ಆಯ್ ಎಸ್ ಮಡಿವಾಳರ ಸೇರಿದಂತೆ ಹಿರಿಯ ನಾಗರಿಕರ ಸಂಘದ ಎಲ್ಲಾ ಪದಾಧಿಕಾರಿಗಳು ಹಿರಿಯ ಮುಖಂಡರು ಪಾಲ್ಗೊಂಡಿದ್ದರು ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಡಾ ಪ್ರಕಾಶ್ ಹೊಸಮನಿ ಅವರು ರೋಗಿಗಳ ಆರೋಗ್ಯ ತಪಾಸಣೆ ಮಾಡಿದರು ಅಪಾರ ಜನರು ಬಂದು ಆರೋಗ್ಯ ತಪಾಸಣೆ ಶಿಬಿರದ ಸದುಪಯೋಗ ಪಡೆದುಕೊಂಡರು 


ಸುದ್ದಿ ಓದಿ