ಗದಗ

ಏಡ್ಸ್‌ ನಿಯಂತ್ರಣದಲ್ಲಿ ಗದಗ ಜಿಲ್ಲೆಗೆ ರಾಷ್ಟ್ರ ಮಟ್ಟದ ಮನ್ನಣೆ

ಏಡ್ಸ್‌ ನಿಯಂತ್ರಣದಲ್ಲಿ ಗದಗ ಜಿಲ್ಲೆಗೆ ರಾಷ್ಟ್ರ ಮಟ್ಟದ ಮನ್ನಣೆ

ಲೋಕದರ್ಶನ ವರದಿ  

            ಗದಗ   26:  ಎಚ್‌ಐವಿ / ಏಡ್ಸ್‌ ನಿಯಂತ್ರಣ ಮತ್ತು ಜಾಗೃತಿ ಕಾರ್ಯದಲ್ಲಿ ಮಹತ್ವದ ಸಾಧನೆ ಮಾಡಿರುವ ಗದಗ ಜಿಲ್ಲೆಗೆ ರಾಷ್ಟ್ರ ಮಟ್ಟದ ಮನ್ನಣೆ ದೊರೆತಿದೆ.  ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಷ್ಟ್ರೀಯ ಏಡ್ಸ್‌ ನಿಯಂತ್ರಣ ಸಂಸ್ಥೆ ( ಓಂಅಓ)   ಅಡಿಯಲ್ಲಿ ಜಾರಿಯಲ್ಲಿರುವ ಮೊಬೈಲೇಸೇಷನ್ ಫಾರ್ ಏಡ್ಸ್‌ ಸುರಕ್ಷಾ ಉಪಕ್ರಮದಡಿ ನಿಗದಿಪಡಿಸಿರುವ ಗುರಿಗಳನ್ನು ಸಾಧಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಗೆ ಸುರಕ್ಷಿತ ಸ್ಥಾನಮಾನ ಲಭಿಸಿದೆ. 

                ಈ ಸಾಧನೆಗಾಗಿ ಗದಗ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಪ್ರಯತ್ನಗಳನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ರಿತು ಶರ್ಮಾ ( ಐ ಆರ್ ಎಸ್)  ಅವರು ಶ್ಲಾಘಿಸಿದ್ದಾರೆ.  2026 ರ ನವೆಂಬರ್ 18 ರಂದು ಹೊರಡಿಸಿರುವ ಅಧಿಕೃತ ಪತ್ರದಲ್ಲಿ ಜಿಲ್ಲೆ ಸಾಧಿಸಿರುವ ಈ ಮಹತ್ವದ ಸಾಧನೆಯನ್ನು ಅಭಿನಂದಿಸಿ ಅಧಿಕಾರಿಗಳ ತಂಡದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

                ಡಿಸೆಂಬರ್ 1 ರಂದು ನವದೆಹಲಿಯಲ್ಲಿ ಸನ್ಮಾನ  : ಎಚ್‌.ಐ.ವಿ. ಸೋಂಕಿನಿಂದ ಮೃತಪಟ್ಟವರ ಸ್ಮರಣಾರ್ಥ ಜಿಲ್ಲೆಯ ಸಾಧನೆಯನ್ನು ಅರ​‍್ಿಸುವುದರ ಜೊತೆಗೆ ಎಚ್‌. ಐ ವಿ ಸೋಂಕಿತರಿಗಾಗಿ ಹಾಗೂ ಜಿಲ್ಲೆಯಲ್ಲಿ ಕೈಗೊಂಡಿರುವ ಕಾರ್ಯಗಳನ್ನು ಗುರುತಿಸುವ ಉದ್ದೇಶದಿಂದ 2026 ಡಿಸೆಂಬರ್ 1 ರಂದು ನವದೆಹಲಿಯ ಡಾ.ಅಂಬೇಡ್ಕರ್ ಅಂತರಾಷ್ಟ್ರೀಯ ಕೇಂದ್ರದಲ್ಲಿ ನಡೆಯಲಿರುವ ವಿಶ್ವ ಏಡ್ಸ್‌ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲೆಯನ್ನು  ಸನ್ಮಾನಿಸಲಾಗುವುದು. 

              ಜಿಲ್ಲೆಯ ಆರೋಗ್ಯ ಕ್ಷೇತ್ರದ ಸಾಧನೆಗೆ ಮನ್ನಣೆ ಎಚ್‌ಐವಿ/ ಏಡ್ಸ್‌ ನಿಯಂತ್ರಣದ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕೈಗೊಂಡಿರುವ ಸಂಘಟಿತ ಪ್ರಯತ್ನಗಳಿಗೆ ರಾಷ್ಟ್ರ ಮಟ್ಟದಲ್ಲಿ  ಗುರುತಿಸಿರುವುದು  ಜಿಲ್ಲೆಯ ಪಾಲಿಗೆ ಹೆಮ್ಮೆಯ ವಿಷಯವಾಗಿದೆ.  ಈ ಸಾಧನೆಯು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಸಮನ್ವಯದ ಕಾರ್ಯಕ್ಕೆ ಸಂದ ಮನ್ನಣೆಯಾಗಿದೆ.  ಈ ಹಿನ್ನೆಲೆಯಲ್ಲಿ ಗದಗ ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ್ ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಲ್ಲ ಹಂತದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇಂದು ಸನ್ಮಾನಿಸಿದರು. 


ಸುದ್ದಿ ಓದಿ