ಗದಗ

ಗ್ರಾಮೀಣ ಜನರಿಗೆ ಸಮರ​‍್ಕ ನೀರು ಪೂರೈಸುವಂತೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಶಾಸಕ -ಡಾ ಚಂದ್ರು ಲಮಾಣಿ

ಗ್ರಾಮೀಣ ಜನರಿಗೆ ಸಮರ​‍್ಕ ನೀರು ಪೂರೈಸುವಂತೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಶಾಸಕ -ಡಾ ಚಂದ್ರು ಲಮಾಣಿ
MLA Dr. Chandru Lamani issues a stern warning to officials to ensure adequate water supply to rural

              ಲಕ್ಷ್ಮೇಶ್ವರ 24: ಪಟ್ಟಣದ ಪುರಸಭೆಯ ಸಭಾಭವನದಲ್ಲಿ ಶಾಸಕ ಡಾ ಚಂದ್ರು ಲಮಾಣಿ ಅವರ ಅಧ್ಯಕ್ಷತೆಯಲ್ಲಿ  ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಯಿತು ಸಭೆಯಲ್ಲಿ ಎಸಿ ಗಂಗಪ್ಪ ಎಂತ ಹಸಿಲ್ದಾರ್ ಧನಂಜಯ ಎಂ ಮಾಲಗಿತ್ತಿ ಪುರಸಭೆಯ ಮುಖ್ಯಾಧಿಕಾರಿ ಪರಶುರಾಮ ಗುಡದಾರಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

             ಸಭೆಯನ್ನು ಶಾಸಕ ಡಾ ಚಂದ್ರು ಲಮಾಣಿ ಅವರು ಗ್ರಾಮೀಣ ಭಾಗದ ಜನರಿಗೆ ಪೂರೈಸುವ ನೀರು ಸಾಕಷ್ಟು ಪ್ರಮಾಣದಲ್ಲಿ ಪೂಲಾಗು ತ್ತಿರುವುದು ನಮ್ಮ ಗಮನಕ್ಕೆ ಬರುತ್ತಿದೆ ಇದನ್ನು ಅಧಿಕಾರಿಗಳು ಸರಿಪಡಿಸಿಕೊಡು ಗ್ರಾಮೀಣ ಭಾಗದ ಜನರಿಗೆ ಸಮರ​‍್ಕವಾಗಿ ನೀರು ಪೂರೈಸುವಂತೆ ಖಡಕ್ ಎಚ್ಚರಿಕೆ ನೀಡಿದರು.

              ಎಸಿ ಗಂಗಪ್ಪ ಎಂ ಅವರು ಮಾತನಾಡಿ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಅದಕ್ಕಾಗಿ ಅಧಿಕಾರಿಗಳು ನೀರು ಹೆಚ್ಚು ಪೂಲಾಗದಂತೆ ನೋಡಿಕೊಂಡು ಕುಡಿಯುವ ನೀರನ್ನು ಮಿತವಾಗಿ ಬಳಸಬೇಕು ಎಂದರು. ಪುರಸಭೆಯ ಮುಖ್ಯಾದಿಕಾರಿ ಪರಶುರಾಮ್ ಗುಡದಾರಿ ಅವರು ಮಾತನಾಡಿ ಮೇವುಂಡಿಯಿಂದ ಲಕ್ಷ್ಮೇಶ್ವರ ಪಟ್ಟಣಕ್ಕೆ ಪೂರೈಕೆ ಯಾಗುವ ಕುಡಿಯುವ ನೀರಿನ ಪ್ರಮಾಣ ಕಡಿಮೆಯಾಗಿದ್ದು ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

              ಅದಕ್ಕಾಗಿ ಈಗಿನಿಂದಲೇ ಪಟ್ಟಣದ ಎಲ್ಲಾ ಬೋರ್ವೆಲ್ ಗಳನ್ನು ಬಳಸಿಕೊಂಡು ಪಟ್ಟಣದ ಜನತೆಗೆ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು ಈ ಸಮಯದಲ್ಲಿ ಪುರಸಭೆಯ ಅಧಿಕಾರಿಗಳು ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು 


ಸುದ್ದಿ ಓದಿ