ಕಾಗವಾಡ

ದಯಮಾಡಿ ಸರ್ವರ್ ಕೊಡಿ..! ಪಡಿತರ ವಿತರಕರ ಗೋಳು ಕೇಳುವವರಾ​‍್ಯರು..?

ದಯಮಾಡಿ ಸರ್ವರ್ ಕೊಡಿ..! ಪಡಿತರ ವಿತರಕರ ಗೋಳು ಕೇಳುವವರಾ​‍್ಯರು..?

ಲೋಕದರ್ಶನ ವರದಿ 

           ಕಾಗವಾಡ 24 : ಅನ್ನಭಾಗ್ಯ ಅಕ್ಕಿ ವಿತರಿಸುವ ಸರ್ಕಾರಿ ಪಡಿತರ ವಿತರಕರ ಗೋಳು ಯಾರೂ ಕೇಳದಂತಾಗಿದ್ದು, ಬೇಸತ್ತ ಅಂಗಡಿ ಮಾಲೀಕರು ಸರಿಯಾದ ಸರ್ವರ ಕೊಡಿ.. ಇಲ್ಲವೇ ನಮ್ಮನ್ನು ಸಾಯಿಸಿ ಎಂದು ತಹಶೀಲ್ದಾರ ಕಚೇರಿ ಎದುರು ತಮ್ಮ ಗೋಳನ್ನು ತೋಡಿಕೊಂಡಿದ್ದಾರೆ. 

             ಮಂಗಳವಾರ ದಿ. 24 ರಂದು ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಕಾಗವಾಡ ತಾಲೂಕಾ ಘಟಕದ ವತಿಯಿಂದ ಗ್ರೆಡ್‌-2 ತಹಶೀಲ್ದಾರ ರಷ್ಮಿ ಜಕಾತಿ ಅವರಿಗೆ ಮನವಿ ಸಲ್ಲಿಸಿ, ಸರ್ವರ ಸಮಸ್ಯೆಯನ್ನು ಕೂಡಲೇ ಪರಿಹರಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಡಿತರವನ್ನು ಅಂಗಡಿಗಳಿಗೆ ಸಗಟು ಗೋದಾಮುಗಳಿಂದ ಬೇಗನೆ ಹಂಚಿಕೆ ಮಾಡಿ, ನಮ್ಮ ಸಮಸ್ಯೆಯನ್ನು ಪರಿಹರಿಸಿ ಎಂದು ಕೇಳಿಕೊಂಡಿದ್ದಾರೆ. 

             ಈ ವೇಳೆ ಪಡಿತರ ವಿತರಕರ ಸಂಘದ ನಿರ್ದೇಶಕ ಮೋಹನ ಮಗದುಮ್ಮ ಮಾತನಾಡಿ, ಸರ್ವರ ಸಮಸ್ಯೆಯಿಂದ ಜನ ನಮ್ಮ ಅಂಗಡಿಗಳ ಮುಂದೆ ನಿಂತು ನಮ್ಮನ್ನು ಶಪಿಸುತ್ತಿದ್ದಾರೆ. ಅವರ ಕಷ್ಟಗಳನ್ನು ನೋಡಿ, ನಮಗೂ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ.

           ಈ ಕುರಿತು ಆಹಾರ ಸಚಿವರು, ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾರೂ ಕೂಡಾ ಕ್ಯಾರೆ ಅನ್ನುತ್ತಿಲ್ಲ. ಸರ್ವರ ಸಮಸ್ಯೆಯಿಂದ ಅಂಗಡಿ ಮಾಲೀಕರಿಗೆ ಏನಾದರೂ ಸಮಸ್ಯೆಯಾದರೇ ಅದಕ್ಕೆ ಸರ್ಕಾರವೇ ಹೊಣೆಯಾಗುತ್ತದೆ ಎಂದು ತಿಳಿಸಿದ್ದಾರೆ. 

           ಈ ವೇಳೆ ಆಹಾರ ನೀರಿಕ್ಷಕ ಸಂತೋಶ ಬುಡ್ಡರ, ಸಂಘದ ಅಧ್ಯಕ್ಷ ಬಸವರಾಜ ಕೋರೆ, ಉಪಾಧ್ಯಕ್ಷ ಬಸವರಾಜ ತಾರದಾಳೆ, ಕಾರ್ಯದರ್ಶಿ ಕುಮಾರ ಕಂಬಾರ, ನಿರ್ದೇಶಕರಾದ ಅಮೋಲ ದುಗ್ಗನ್ನವರ, ಮಹೇಶ ಜಾಯಗೊಂಡೆ, ಬಾಹುಬಲಿ ಟೊಣಗೆ, ವಿಜಯ ಶಿರಗಾವೆ,

           ಚೇತನ ಕುಡಚೆ, ಗಜಾನನ ಮೊಹೀತೆ, ವಿತರಕರಾದ ಬಸಗೌಡಾ ಪಾಟೀಲ, ಮನೋಜ ಪಾಟೀಲ, ಸಾಗರ ಉಮರಾಣೆ, ಚೇತನ ವಡಗೋಲೆ, ಅರುಣ ಮಾಳಿ, ಪ್ರಮೋದ ನರಸಗೌಡರ, ಶಿವಾನಂದ ಖಿಚಡೆ, ರಾಜು ಮಂಗಸೂಳೆ ಸೇರಿದಂತೆ ತಾಲೂಕಿನ ಎಲ್ಲ ವಿತರಕರು ಉಪಸ್ಥಿತರಿದ್ದರು. 


ಸುದ್ದಿ ಓದಿ