ಕಾಗವಾಡ

ಶಿರಗುಪ್ಪಿ ಶಾಂತಿಸಾಗರ ಸೌಹಾರ್ದ ಸಹಕಾರಿಗೆ ‘ಉತ್ತಮ ಸೌಹಾರ್ದ ಸಹಕಾರಿ ಪ್ರಶಸ್ತಿ’ಯ ಗರಿ..! ಜಿಲ್ಲೆಯಲ್ಲಿ ಪ್ರಶಸ್ತಿ ಪಡೆದ ಏಕೈಕ ಸಹಕಾರಿ..!!

ಶಿರಗುಪ್ಪಿ ಶಾಂತಿಸಾಗರ ಸೌಹಾರ್ದ ಸಹಕಾರಿಗೆ ‘ಉತ್ತಮ ಸೌಹಾರ್ದ ಸಹಕಾರಿ ಪ್ರಶಸ್ತಿ’ಯ ಗರಿ..! ಜಿಲ್ಲೆಯಲ್ಲಿ ಪ್ರಶಸ್ತಿ ಪಡೆದ ಏಕೈಕ ಸಹಕಾರಿ..!!
Shiraguppi Shantisagara Souharda Sahakari won the 'Uttama Souharda Sahakari Award'..! The only coop

          ಕಾಗವಾಡ 21:  ತಾಲೂಕಿನ ಶಿರಗುಪ್ಪಿ ಗ್ರಾಮದ ಶ್ರೀ ಶಾಂತಿಸಾಗರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘಕ್ಕೆ ರಾಜ್ಯ ಮಟ್ಟದ ಉತ್ತಮ ಸೌಹಾರ್ದ ಸಹಕಾರಿ ಪ್ರಶಸ್ತಿ ಲಭಿಸಿದ್ದು, ರಾಜ್ಯದ ಒಟ್ಟು ನಾಲ್ಕು ವಲಯದ ತಲಾ ಒಂದು ಸಹಕಾರಿಗೆ ದೊರೆಯುವ ಈ ಪ್ರಶಸ್ತಿಯು ಬೆಳಗಾವಿ ವಲಯದಲ್ಲಿ ಶಾಂತಿಸಾಗರ ಸಹಕಾರಿಯು ಪಡೆದುಕೊಂಡಿದೆ. 

          ಬುಧವಾರ ದಿ. 18 ರಂದು ಬೀದರ ನಗರದಲ್ಲಿ ನಡೆದ 73ನೇ ಸಹಕಾರ ಸಪ್ತಾಹದ ಅಂಗವಾಗಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಬೆಂಗಳೂರು ಇವರ ವತಿಯಿಂದ ಹಮ್ಮಿಕೊಂಡಿದ್ದ 73 ನೇ ರಾಜ್ಯ ಮಟ್ಟದ ಸಹಕಾರ ಸಪ್ತಾಹ ಸಮಾರಂಭದಲ್ಲಿ ಸಹಕಾರಿಯ ಅಧ್ಯಕ್ಷ ವಿದ್ಯಾಸಾಗರ ಮಾನಗಾಂವೆ ಮತ್ತು ಪ್ರಧಾನ ಕಾರ್ಯದರ್ಶಿ ಅನಂತಕುಮಾರ ಐನಾಪೂರೆ ಅವರಿಗೆ ಪ್ರಶಸ್ತಿ ನೀಡಿ, ಸನ್ಮಾನಿಸಲಾಯಿತು. 

          ಶ್ರೀ ಶಾಂತಿಸಾಗರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘವು 1997 ರಲ್ಲಿ ಶಿರಗುಪ್ಪಿ ಗ್ರಾಮದಲ್ಲಿ ದಿವಂಗತ ಡಾ. ನೇಮಿನಾಥ ಭೋಮಾಜ ಅವರ ಮಾರ್ಗದರ್ಶನದಲ್ಲಿ ಸ್ಥಾಪನೆಗೊಂಡು, 29 ವರ್ಷಗಳನ್ನು ಪೂರೈಸಿದೆ. ಮುಖ್ಯ ಶಾಖೆ ಸೇರಿ 11 ಶಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಹಕಾರಿ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿ ಪ್ರಗತಿ ಪಥದಲ್ಲಿ ಸಾಗುತ್ತಿದೆ. ಸಹಕಾರ ಸಂಸ್ಥೆಗಳ ಬೆಳವಣಿಕೆಯಲ್ಲಿ ಉತ್ತಮ ಪರಿಸರ, ತಂತ್ರಜ್ಞಾನ, ಕೌಶಲ್ಯಾಧಾರಿತ ವೃತ್ತಿಪರ ಸೇವೆಯನ್ನು ಪರಿಗಣಿಸಿ, ಈ ಪ್ರಶಸ್ತಿ ನೀಡಲಾಗಿದೆ. 

           ಈ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಹಕಾರಿಯ ಉಪಾಧ್ಯಕ್ಷ ಪುರಂದರ ಕನವಾಡೆ, ಡಾ. ಮಹಾಧವಲ ಭೋಮಾಜ, ಅಣ್ಣಾಸಾಬ ಬಸನ್ನವರ, ಸುನೀಲ ಕುರಂದವಾಡೆ, ಬಾಳಾಸಾಹೇಬ ಪಾಟೀಲ, ಸಾಗರ ದುಗ್ಗೆ, ಅಶ್ವತಕುಮಾರ ಪಾಟೀಲ, ಧನಪಾಲ ಬೋರಗಾವೆ, ಚಂದ್ರಕಾಂತ ಹಟ್ಟಿ ಮತ್ತು ಬಾಬಾಸಾಹೇಬ ಕಾಗವಾಡೆ ಉಪಸ್ಥಿತರಿದ್ದರು. 


ಸುದ್ದಿ ಓದಿ