ಕೊಪ್ಪಳ

ದಿ 26 ರಂದು ಸಂವಿಧಾನ ಸಮರಾ​‍್ಣ ದಿನಾಚರಣೆ ಪ್ರಯುಕ್ತ ದಲಿತ ಸೇನೆಯಿಂದ ಸರ್ಕಾರಿ ಶಾಲೆ ದತ್ತು

ದಿ 26 ರಂದು ಸಂವಿಧಾನ ಸಮರಾ​‍್ಣ ದಿನಾಚರಣೆ ಪ್ರಯುಕ್ತ ದಲಿತ ಸೇನೆಯಿಂದ ಸರ್ಕಾರಿ ಶಾಲೆ ದತ್ತು

         ಕೊಪ್ಪಳ 21: ಸಂವಿಧಾನ ಸಮರಾ​‍್ಣ ದಿನಾಚರಣೆಯ ಅಂಗವಾಗಿ ಕೊಪ್ಪಳ ಜಿಲ್ಲೆಯ ಬೂದುಗುಂಪಾ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಒಂದು ವರ್ಷದ ಅವಧಿಗೆ ದತ್ತು ಪಡೆಯಲು ದಲಿತ ಸೇನೆಯ ಕೊಪ್ಪಳ ಜಿಲ್ಲಾ ಸಮಿತಿ ನಿರ್ಧರಿಸಿದೆ ಎಂದು ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ, ಉಡುಚಪ್ಪ ಶ್ರೀರಾಮನಗರ ತಿಳಿಸಿದ್ದಾರೆ,

          ಅವರು ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ಏರಿ​‍್ಡಸಿದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದೊಂದಿಗೆ  ಮಾತನಾಡಿದ  ಅವರು ಸಂಘಟನೆಯ ಪದಾಧಿಕಾರಿಗಳು, ದಲಿತ ಸೇನೆಯ ರಾಜ್ಯಾಧ್ಯಕ್ಷ ಹನುಮಂತ ಜಿ. ಯಳಸಂಗಿ ಅವರ ಮಾರ್ಗದರ್ಶನ ಹಾಗೂ ಸೂಚನೆಯ ಮೇರೆಗೆ, ರಾಜ್ಯ ಪ್ರಧಾನ ಕಾರ್ಯದರ್ಶಿ ಉಡುಚಪ್ಪ ಶ್ರೀರಾಮನಗರ ಅವರ ನೇತೃತ್ವ ಮತ್ತು ಜಿಲ್ಲಾಧ್ಯಕ್ಷ ಗೋಪಾಲ ವಕೀಲರು ಅವರ ಉಪಸ್ಥಿತಿಯಲ್ಲಿ ನವೆಂಬರ್ 26, ರಂದು ಈ ವಿಶೇಷ ಸಾಮಾಜಿಕ ಹಾಗೂ ಶೈಕ್ಷಣಿಕ ಕಳಕಳಿಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು,

           ಸರ್ಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವುದು ಹಾಗೂ ಬಡ ಮತ್ತು ಹಿಂದುಳಿದ ವರ್ಗಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಿಸುವುದು. ವಿದ್ಯಾರ್ಥಿಗಳಲ್ಲಿ ಸಂವಿಧಾನಿಕ ಮೌಲ್ಯಗಳು, ಸಮಾನತೆ, ಸಹೋದರತ್ವ, ಸಾಮಾಜಿಕ ನ್ಯಾಯ ಹಾಗೂ ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು. ಸಂವಿಧಾನದ ಆಶಯಗಳನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ಶಿಕ್ಷಣದ ಮೂಲಕ ಸಮಾಜದಲ್ಲಿ ಸಮಾನತೆ ಮತ್ತು ಸಾಮಾಜಿಕ ಪರಿವರ್ತನೆ ತರುವುದು.

         ಒಂದು ವರ್ಷದ ಅವಧಿಯಲ್ಲಿ ಶಾಲೆಯ ಶೈಕ್ಷಣಿಕ ಅಭಿವೃದ್ಧಿ, ಮೂಲಭೂತ ಸೌಕರ್ಯಗಳ ಸುಧಾರಣೆ, ವಿದ್ಯಾರ್ಥಿಗಳಿಗೆ ಅಗತ್ಯ ಮಾರ್ಗದರ್ಶನ ಹಾಗೂ ಪ್ರತಿಭಾ ಪುರಸ್ಕಾರ ಸೇರಿದಂತೆ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಜಿಲ್ಲಾ ಸಮಿತಿಯು ಎಲ್ಲಾ ರೀತಿಯ ಸಹಕಾರ ಮತ್ತು ನೆರವು ನೀಡಲು ಬದ್ಧವಾಗಿದೆ ಎಂದು ದಲಿತ ಸೇನೆ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಉಡುಚಪ್ಪ ಶ್ರೀರಾಮನಗರ  ಭರವಸೆ ನೀಡಿದರು.

           ಪತ್ರಿಕಾಗೋಷ್ಠಿಯಲ್ಲಿ ದಲಿತ ಸೇನೆಯ , ಜಿಲ್ಲಾಧ್ಯಕ್ಷ ಗೋಪಾಲ ವಕೀಲರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಂತ ನಾಯಕ, ಜಿಲ್ಲಾ ಉಪಾಧ್ಯಕ್ಷ ಶಿವಕುಮಾರ ಡಿ, ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ಆನಂದ ಇಟಗಿ, ಜಿಲ್ಲಾ ಖಜಾಂಚಿ ಹನುಮಂತಪ್ಪ, ವಿವಿಧ ತಾಲೂಕು ಅಧ್ಯಕ್ಷರಾದ ಫಕೀರ​‍್ಪ ದೊಡ್ಡಮನಿ (ಕೊಪ್ಪಳ), ಮಂಜುನಾಥ ಬಿ (ಗಂಗಾವತಿ), ಆನಂದ ಪೂಲಗೇರಿ (ಕುಷ್ಟಗಿ), ಯಂಕೋಬ ನಾಯಕ (ಕಾರಟಗಿ) ಹಾಗೂ ತಾಲೂಕು ಪ್ರಧಾನ ಕಾರ್ಯದರ್ಶಿ ರವಿಕುಮಾರ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ