ಕೊಪ್ಪಳ

ಭಾರತ ದೇಶಕ್ಕೆ ಜವಾಹರ್ ಲಾಲ್ ನೆಹರುರವರ ಕೊಡುಗೆ ಅಪಾರವಾದದ್ದು : ಜಿ.ಎಸ್‌. ಗೋನಾಳ್‌

ಭಾರತ ದೇಶಕ್ಕೆ ಜವಾಹರ್ ಲಾಲ್ ನೆಹರುರವರ ಕೊಡುಗೆ ಅಪಾರವಾದದ್ದು    : ಜಿ.ಎಸ್‌. ಗೋನಾಳ್‌

ಲೋಕದರ್ಶನ ವರದಿ 

   ಕೊಪ್ಪಳ. 14; ಭಾರತ ದೇಶಕ್ಕೆ ಜವಾಹರಲಾಲ ನೆಹರು ರವರ ಕೊಡುಗೆ ಅಪಾರವಾದದ್ದು ಎಂದು ಹಿರಿಯ ಸಾಹಿತಿ ಜಿ.ಎಸ್‌. ಗೋನಾಳ್ ಮಾತನಾಡಿದರು. ಅವರು ಕೊಪ್ಪಳ ನಗರದ ಸದರ ಷಾ ವಲಿ ಕಾನ್ವೆಂಟ್ ಶಾಲೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.  

            ಮುಂದುವರೆದು ಮಾತನಾಡಿದ ಅವರು ಪಂಡಿತ್ ನೆಹರು ಅವರ ಕೊಡುಗೆ ಭಾರತಕ್ಕೆ ಅಪಾರವಾದದ್ದು ಮತ್ತು ಅದಕ್ಕೆ ಬೆಲೆಕಟ್ಟಲಾಗದು. ನೆಹರು ಅವರ ದೂರ ದೃಷ್ಟಿಕೋನದಿಂದ ಭಾರತವು ಕೃಷಿ, ಕೈಗಾರಿಕೆ, ಶಿಕ್ಷಣ, ವಿಜ್ಞಾನ, ತಂತ್ರಜ್ಞಾನದಿಂದ, ಪ್ರಗತಿಯನ್ನು ಸಾಧಿಸಲು ಸಾಧ್ಯವಾಯಿತು. ಭಾರತವು ಬಡತನ ಮತ್ತು ಹಸಿವಿನಿಂದ ಮುಕ್ತವಾಗುವಂತೆ ಭಾರತವನ್ನು ನಿರ್ಮಾಣ ಮಾಡಿದರು. ನೆಹರುರವರ ಮಕ್ಕಳ ಮೇಲೆ ಅಪಾರವಾದ ಪ್ರೀತಿಯನ್ನು ಹೊಂದಿದವರು. ಅವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲು ಆದೇಶ ಮಾಡಿದರು.                                 ನೆಹರೂರವರು, ಗಾಂಧೀಜಿ ಸರ್ದಾರ್ ವಲ್ಲಭಭಾಯಿ ಪಟೇಲ, ಬಾಲ ಗಂಗಾಧರ ತಿಲಕ, ಲಾಲ ಬಹದ್ದೂರ್ ಶಾಸ್ತ್ರಿ, ಸುಭಾಷ್ ಚಂದ್ರ ಬೋಸ್ ರಂತಹ ಮಹಾನ್ ವ್ಯಕ್ತಿಗಳ ಆದರ್ಶಗಳ ಪಾಲನೆಯಿಂದ ನಮ್ಮ ಮಕ್ಕಳು, ಯುವಕರು, ಯುವತಿಯರು, ಪ್ರಭಾವಿತರಾಗಿ ಬೆಳೆದು ರಾಜ್ಯಕ್ಕೆ, ಭಾರತ ದೇಶಕ್ಕೆ ಬೆಲೆ ಕಟ್ಟಲಾಗದ ಆಸ್ತಿಯಾಗಿ ಬೆಳೆಯಬೇಕೆಂದು ಆಶಿಸಿ, ಇಂದಿನ ಮಕ್ಕಳೇ ನಾಳಿನ ಪ್ರಜೆಗಳು, ಕಾರಣ ಮಕ್ಕಳು ಜಾತ್ಯಾತೀತವಾಗಿ ಬಹುತ್ವವಾದ ಭಾರತವನ್ನು ಸಮೃದ್ಧವಾಗಿ ಬೆಳೆಸಲು ಹೆಮ್ಮರವಾಗಿ, ಜಾತ್ಯಾತೀತರಾಗಿ ಬೆಳೆಯಬೇಕೆಂದು ಕರೆ ನೀಡಿದರು.  

          ಪ್ರಾಸ್ತಾವಿಕ ನುಡಿಯನ್ನು ಶಾಲೆಯ ಮುಖ್ಯೋಪಾಧ್ಯಾಯ ಉಮೇಶಬಾಬು ಸುರ್ವೆ ಮಾತನಾಡಿ, ಮಕ್ಕಳು ಈ ನಾಡಿನ ಬಹುದೊಡ್ಡ ಶಕ್ತಿಯಾಗಿದ್ದು. ಮಕ್ಕಳು ಶಿಕ್ಷಣವನ್ನು ಪಡೆದುಕೊಂಡು ಹೃದಯ ಶ್ರೀಮಂತರಾಗಿ ಬೆಳೆಯಬೇಕಾಗಿದೆ, ಆ ನಿಟ್ಟಿನಲ್ಲಿ ನಮ್ಮ ಶಾಲೆಯ ಶಿಕ್ಷಕ ವರ್ಗವು ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಮಾತನಾಡಿದರು. ಶಾಲೆಯಲ್ಲಿ ಮಕ್ಕಳ ನೃತ್ಯಗಳು ಮತ್ತು ಭಾಷಣ, ವಿವಿಧ ಸ್ಪರ್ಧೆಗಳು ಜರುಗಿದವು. ವೇದಿಕೆಯಲ್ಲಿ ಮುಸ್ತಾಫ್, ಶಿಕ್ಷಕರಾದ ರೇಷ್ಮಾ, ವಿಜಯಲಕ್ಷ್ಮೀ, ಭಾಗ್ಯಶ್ರೀ, ಶಿಲ್ಪಾ, ಮಹಾಲಕ್ಷ್ಮೀ, ಭೂಮಿಕಾ ಇತರರರು ಇದ್ದರು. 

  ಸ್ವಾಗತವನ್ನು ಶಿಕ್ಷಕಿ ಗಂಗಾ ಎಂ. ಕೋರಿದರೆ ವಂದನಾರೆ​‍್ಣಯನ್ನು ಮಂಜುಳಾ ಸಲ್ಲಿಸಿದರು. 


ಸುದ್ದಿ ಓದಿ