ಜ್ಯೋತಿಕುಮಾರ ಪಾಟೀಲಗೆ ಶ್ರೀ ದತ್ತ ಶೇತಕರಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಸನ್ಮಾನ..!
ಲೋಕದರ್ಶನ ವರದಿ
ಕಾಗವಾಡ 14: ಪಟ್ಟಣದ ಯುವ ಮುಖಂಡರು ಹಾಗೂ ಶಿರೋಳದ ಶ್ರೀ ದತ್ತ ಶೇತಕರಿ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಜ್ಯೋತಿಕುಮಾರ ಪಾಟೀಲ ಅವರು ಕರ್ನಾಟಕ, ಮಹಾರಾಷ್ಟ್ರ ಮತ್ತು ಗಡಿ ಪ್ರದೇಶಗಳ ಲಕ್ಷಾಂತರ ಭಕ್ತರ ಆರಾಧ್ಯದೇವಿ ಸವದತ್ತಿ ಶ್ರೀ ರೇಣುಕಾ-ಯಲ್ಲಮ್ಮ ದೇವಿ ಟ್ರಸ್ಟ್ನ ನಿರ್ದೇಶಕರಾಗಿ ಕರ್ನಾಟಕ ಸರ್ಕಾರ ನಾಮನಿರ್ದೇಶನ ಮಾಡಿದ್ದು, ಶನಿವಾರ ದಿ. 14 ರಂದು ಶಿರೋಳದಲ್ಲಿ ಶ್ರೀ ದತ್ತ ಉದ್ಯೋಗ ಸಮೂಹದ ಮುಖ್ಯಸ್ಥ ಗಣಪತರಾವ ಪಾಟೀಲ ಅವರು ಜ್ಯೋತಿಕುಮಾರ ಪಾಟೀಲ ಅವರನ್ನು ಸನ್ಮಾನಿಸಿ, ಗೌರವಿಸಿದ್ದಾರೆ. ಈ ವೇಳೆ ಶ್ರೀ ದತ್ತ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ರಘುನಾಥ ಪಾಟೀಲ, ಎಂಡಿ ಸಂಜು ದೇಸಾಯಿ, ಸಿಡಿಓ ಶ್ರೀಶೈಲ ಹೆಗ್ಗನ್ನಾ, ಎ.ಎಸ್. ಪಾಟೀಲ, ನಿರ್ದೇಶಕ ವಿಜಯ ಸೂರ್ವವಂಶಿ, ಸಂಜಯ ಪಾಟೀಲ, ನಿಜಾಮಸೋ ಪಾಟೀಲ, ಶೇಖರ ಪಾಟೀಲ, ಕಾರ್ಯದರ್ಶಿ ಅಶೋಕ ಶಿಂಧೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.